ಸಂಸೆ (ಮೂಡಿಗೆರೆ): ಮೂಡಿಗೆರೆ ತಾಲೂಕಿನ ಪ್ರತಿಷ್ಠಿತ ಎಸ್ಡಿಎಂ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ), ಸಂಸೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ವಿವಿಧ ಕೋರ್ಸ್ಗಳಲ್ಲಿ ಖಾಲಿ ಉಳಿದಿರುವ ಕೇವಲ ಕೆಲವು ಸೀಟುಗಳಿಗೆ ಮಾತ್ರ ಪ್ರವೇಶ ಪಡೆಯಲು ಕಡೆ ಅವಕಾಶ ಕಲ್ಪಿಸಲಾಗಿದೆ.
ಹತ್ತನೇ ತರಗತಿ (SSLC) ಪಾಸಾದವರಿಗೆ: ಕೈಗಾರಿಕಾ ವಲಯದಲ್ಲಿ ಸದಾ ಬೇಡಿಕೆಯಲ್ಲಿರುವ ಫಿಟ್ಟರ್ (Fitter), ಎಲೆಕ್ಟ್ರಾನಿಕ್ಸ್ (Electronics), ಮತ್ತು ಡೀಸೆಲ್ ಮೆಕ್ಯಾನಿಕ್ (Mechanic Diesel) ವೃತ್ತಿಗಳಲ್ಲಿ ಸದ್ಯ ಕೆಲವೇ ಕೆಲವು ಸೀಟುಗಳು ಮಾತ್ರ ಬಾಕಿ ಉಳಿದಿವೆ. ಎಸ್ಎಸ್ಎಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ತ್ವರಿತವಾಗಿ ಸಂಪರ್ಕಿಸಿ ಈ ಸೀಟುಗಳನ್ನು ಪಡೆಯಬಹುದಾಗಿದೆ. ಉಳಿದಿರುವ ಈ ಸೀಟುಗಳಿಗೆ ‘ಮೊದಲು ಬಂದವರಿಗೆ ಆದ್ಯತೆ’ (First come, first serve) ಆಧಾರದ ಮೇಲೆ ಪ್ರವೇಶ ನೀಡಲಾಗುವುದು.
ಎಂಟನೇ ತರಗತಿ ಪಾಸಾದವರಿಗೆ ವೆಲ್ಡರ್ ಕೋರ್ಸ್: 8ನೇ ತರಗತಿ ಪಾಸಾಗಿ ವಿದ್ಯಾಭ್ಯಾಸ ಮೊಟಕುಗೊಳಿಸಿದ ವಿದ್ಯಾರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ಒಂದು ವರ್ಷದ ವೆಲ್ಡರ್ (Welder) ಕೋರ್ಸ್ಗೆ ಸೇರಲು ಅವಕಾಶವಿದ್ದು, ಇದರಲ್ಲೂ ಕೇವಲ ಸೀಮಿತ ಸೀಟುಗಳು ಮಾತ್ರ ಲಭ್ಯವಿವೆ.
ಸಂಸ್ಥೆಯ ಸೌಲಭ್ಯಗಳು:
- ಅತ್ಯಾಧುನಿಕ ಯಂತ್ರೋಪಕರಣಗಳಿರುವ ಕಾರ್ಯಾಗಾರಗಳು ಹಾಗೂ ನುರಿತ ಸಿಬ್ಬಂದಿ.
- ತರಬೇತಿ ಪೂರ್ಣಗೊಂಡ ತಕ್ಷಣ ಟೊಯೋಟಾ ಕಿರ್ಲೋಸ್ಕರ್ನಂತಹ ಪ್ರತಿಷ್ಠಿತ ಕಂಪನಿಗಳಿಂದ ಕ್ಯಾಂಪಸ್ ಸಂದರ್ಶನ ಮತ್ತು ನೇರ ಉದ್ಯೋಗ.
- ಆಕರ್ಷಕ ವೇತನದ ಹುದ್ದೆಗಳು ಹಾಗೂ ಸ್ವಯಂ ಉದ್ಯೋಗಕ್ಕೆ ಸೂಕ್ತ ತಾಂತ್ರಿಕ ಮಾರ್ಗದರ್ಶನ.
ಬಹುತೇಕ ಸೀಟುಗಳು ಈಗಾಗಲೇ ಭರ್ತಿಯಾಗಿರುವುದರಿಂದ, ಆಸಕ್ತ ವಿದ್ಯಾರ್ಥಿಗಳು ಹಾಗೂ ಪೋಷಕರು ವಿಳಂಬ ಮಾಡದೆ ತಕ್ಷಣವೇ ಸಂಸ್ಥೆಯನ್ನು ಸಂಪರ್ಕಿಸಿ ತಮ್ಮ ಪ್ರವೇಶವನ್ನು ಖಚಿತಪಡಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
ತಕ್ಷಣ ಸಂಪರ್ಕಿಸಿ: ಎಸ್.ಡಿ.ಎಂ. ಐ.ಟಿ.ಐ. ಸಂಸೆ, ಮೂಡಿಗೆರೆ ತಾಲ್ಲೂಕು. ದೂರವಾಣಿ ಸಂಖ್ಯೆಗಳು: 9449927748 | 9449497618 | 9110652816 | 9480299119
