ಕಳಸ ಲೈವ್ ವರದಿ
ಕಳಸ: ಕಳಸ-ಮೂಡಿಗೆರೆ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಕಳಸದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡಾ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
ಕ್ರೀಡಾಕೂಟದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಕೆಳಕಂಡ ವಿಭಾಗಗಳಲ್ಲಿ ಪ್ರಶಂಸನೀಯ ಸಾಧನೆ ಮಾಡಿದ್ದಾರೆ.
ಬಾಲಕರ 4×400 ಮೀಟರ್ ರಿಲೇ – ಪ್ರಥಮ ಸ್ಥಾನ
ಬಾಲಕರ 4×100 ಮೀಟರ್ ರಿಲೇ – ಪ್ರಥಮ ಸ್ಥಾನ.
ಸಾನಿಯಾ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ – ಟ್ರಿಪಲ್ ಜಂಪ್ನಲ್ಲಿ ಪ್ರಥಮ ಹಾಗೂ 800 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ
ಆತಿಕಾ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ – ಗುಂಡು ಎಸೆತದಲ್ಲಿ ಪ್ರಥಮ ಹಾಗೂ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ
ಬಾಲಕಿಯರ ಶಟಲ್ – ದ್ವಿತೀಯ ಸ್ಥಾನ
ಬಾಲಕರ ಥ್ರೋಬಾಲ್ – ದ್ವಿತೀಯ ಸ್ಥಾನ
ಬಾಲಕರ ಬಾಲ್ ಬ್ಯಾಡ್ಮಿಂಟನ್ – ದ್ವಿತೀಯ ಸ್ಥಾನ
ಮಂಜುನಾಥ ದ್ವಿತೀಯ ಪಿಯುಸಿ ಕಲಾ ವಿಭಾಗ – ಹ್ಯಾಮರ್ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಅನಂತಪದ್ಮನಾಭ ತಿಳಿಸಿದ್ದಾರೆ.
