ಕಳಸ ಪ್ರಥಮ ದರ್ಜೆ ಕಾಲೇಜಿಗೆ ಶ್ರೀ ಕ್ಷೇತ್ರ ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಾಲಯದ ಕೊಡುಗೆಯಾದ ನೂತನ ಮಲ್ಟಿ ಜಿಮ್ನ್ನು ಶ್ರೀ ಕ್ಷೇತ್ರ ಹೊರನಾಡಿನ ಗಿರಿಜಾಶಂಕರ್ ಜೋಷಿ ಗುರುವಾರ ಉದ್ಘಾಟಿಸಿದರು.

“ಇಂದಿನ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳು ಕೂಡ ಮುಖ್ಯವಾದುದು, ದೈನಂದಿನ ವ್ಯಾಯಾಮ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ. ಉತ್ತಮ ಆರೋಗ್ಯಕ್ಕಾಗಿ ನಾವು ದಿನದಲ್ಲಿ ಕೆಲವು ಸಮಯವನ್ನಾದರೂ ಯಾವುದೇ ಪ್ರಕಾರದ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳಬೇಕು. ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಜಿಮ್ ಉಪಕರಣಗಳನ್ನು ಶ್ರೀಕ್ಷೇತ್ರದ ವತಿಯಿಂದ ಕೊಡುಗೆಯಾಗಿ ನೀಡಲಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು” ಎಂದರು.
ಕಳಸ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಹರ್ಷವರ್ಧನ್ ಹೆಚ್. ಕೆ ಮಾತನಾಡಿ ದಿನನಿತ್ಯದ ವ್ಯಾಯಾಮ ನಮ್ಮ ದೈಹಿಕ ಮತ್ತು ಮಾನಸಿಕ ಸಾಮಥ್ರ್ಯವನ್ನು ಸದೃಢಗೊಳಿಸುತ್ತದೆ. ಹಾಗಾಗಿ, ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಇಂತಹ ಪ್ರತಿಭಾವಂತ ಯುವಕರ ಆಯ್ಕೆಯ ಸಾಧ್ಯತೆ ಹೆಚ್ಚು” ಎಂದರು.
ಸಿ.ಡಿ.ಸಿ ಕಾರ್ಯಾಧ್ಯಕ್ಷ ಪ್ರಸಿದ್ಧ ಜೈನ್, ಪ್ರಾಂಶುಪಾಲ ವಿನಯ ಕುಮಾರ ಶೆಟ್ಟಿ ಎಸ್, ಕಾಲೇಜಿನ ಕ್ರೀಡಾ ವಿಭಾಗದ ಮುಖ್ಯಸ್ಥ ಸುಧೀರ್ ಜೈನ್ ಎಂ.ಎಸ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಬಾಲಕೃಷ್ಣ ಪ್ರಭು, ರಾ.ಸೇ.ಯೋ ಕಾರ್ಯಕ್ರಮಾಧಿಕಾರಿ ವಿಶುಕುಮಾರ್ ಎನ್, ಐ.ಕ್ಯೂ.ಎ.ಸಿ ಸಂಚಾಲಕ ಡಾ. ಆದಿತ್ಯ ಅಡಿಗ ಎ.ಜಿ, ವಿದ್ಯಾರ್ಥಿಗಳಾದ ಚರಣ್, ಸಚಿನ್, ಅನಂತ, ಪ್ರತಾಪ್, ಚಿಂತನ್ ಮತ್ತು ಅನ್ನಪೂರ್ಣ, ಸುರಭಿ ಜೈನ್ ಇದ್ದರು.

