ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯ ರಸ್ತೆಯ ಅಂಚಿನಲ್ಲಿ ಟೀ ತೋಟದ ಸಮೀಪ ಕಸದ ತೊಟ್ಟಿ ತುಂಬಿ ತುಳುಕುತ್ತಿದ್ದು ಸ್ವಚ್ಚ ಮಾಡುವ ಕಾರ್ಯ ಮಾಡಬೇಕಾಗಿದೆ.

ಕೆಲ ದಿನಗಳಿಂದ ಈ ತೊಟ್ಟಿ ತುಂಬಿ ತುಳುಕುತ್ತಿದ್ದು, ನಿತ್ಯ ನೂರಾರು ಪ್ರವಾಸಿಗರು ಈ ಪ್ರದೇಶಕ್ಕೆ ಬೇಟಿ ನೀಡುತ್ತಿದ್ದು, ಕಸ ತುಂಬಿ ರಸ್ತೆಯಲ್ಲಿ ಹರಡಿಕೊಂಡಿರುವುದನ್ನು ನೋಡಿ ಅಸಹ್ಯ ಪಡುವಂತಾಗಿದೆ.

ಸುಂದರವಾದ ಈ ಪರಿಸರದ ಮಧ್ಯೆ ತುಂಬಿ ತುಳುಕುತ್ತಿರುವ ಕಸವು ಕಪ್ಪು ಚುಕ್ಕೆಯಾಗಿ ಪರಿಣಮಿಸುತ್ತಿದೆ.ಕೂಡಲೇ ಇಲ್ಲಿ ಕಸವನ್ನು ತೆರವು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

