ಕಳಸ ಲೈವ್ ವರದಿ
ಇಲ್ಲಿಯ ಜುಮ್ಮಾ ಮಸೀದಿ ಹಾಗೂ ಇರ್ಷಾದುಲ್ ಮುಸ್ಲಿಮೀನ್ ಯೂತ್ ಕಮಿಟಿಯ ಸಂಯುಕ್ತ ಆಶ್ರಯದಲ್ಲಿ ಮಿಲಾದ್ ಜಲ್ಸಾ ಹಾಗೂ ಸ್ವಲಾತ್ ವಾರ್ಷಿಕ ಕಾರ್ಯಕ್ರಮ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು.

ಭಾನುವಾರ ಬೆಳಿಗ್ಗೆ ಬೃಹತ್ ಮಿಲಾದ್ ಮೆರವಣಿಗೆ ನಡೆಯಿತು.ಮೆರವಣಿಗೆಯು ನೂರಾರು ಜನ ಮುಸ್ಲಿಂ ಬಾಂಧವರೊಂದಿಗೆ ಕಳಸ ಮುಖ್ಯ ರಸ್ತೆಯಲ್ಲಿ ಸಾಗಿ, ಮಹಾವೀರ ರಸ್ತೆ ಮುಖಾಂತರ ಜುಮ್ಮಾ ಮಸೀದಿಯಲ್ಲಿ ಕೊನೆಗೊಂಡಿತು. ಮೆರವಣಿಗೆಯುದ್ದಕ್ಕೂ ಮಕ್ಕಳ ದಫ್ ಪ್ರದರ್ಶನ ಮೆರವಣಿಗೆಗೆ ಮೆರುಗು ನೀಡಿತ್ತು.

