ಕಳಸ ಲೈವ್ ವರದಿ
ಕಳಸ ಕಾರಗದ್ದೆ ಸೇತುವೆಯ ಮೇಲೆ ಸಣ್ಣ ಮಳೆ ಬಂದರೂ ಕೂಡ ಮೊಣಕಾಲುದ್ದ ನೀರು ನಿಲ್ಲುತ್ತಿದ್ದು, ಇದು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ರಸ್ತೆಯ ಮೇಲ್ಬಾಗದಿಂದ ಮಣ್ಣಿನೊಂದಿಗೆ ಹರಿದು ಬರುವ ನೀರು ಸೇತುವೆ ಮೇಲೆ ಬಂದು ನಿಲ್ಲುತ್ತದೆ.ಇಲ್ಲಿ ಸೇತುವೆಯಿಂದ ನೀರು ಕೆಳಗೆ ಹರಿದು ಹೋಗಲು ಯಾವುದೇ ವ್ಯವಸ್ಥೆಯನ್ನು ಮಾಡದೆ ಇರುವ ಹಿನ್ನಲೆಯಲ್ಲಿ ಪ್ರತೀ ಸರಿ ಮಳೆ ಬಂದಾಗ ನೀರು ನಿಲ್ಲುತ್ತಿತ್ತು.
ಈ ಬಗ್ಗೆ ಶುಕ್ರವಾರ ಕಳಸ ಲೈವ್ ನಲ್ಲಿ ವರದಿಯನ್ನು ಮಾಡಲಾಗಿತ್ತು ಇದರಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಶನಿವಾರ ಸೇತುವೆಯ ಮೇಲೆ ನಿಂತಿದ್ದ ಮಣ್ಣನ್ನು ತೆರವು ಮಾಡಿ ನೀರು ಹರಿದು ಹೋಗುವಂತೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಡಿದ್ದಾರೆ.
