ಕಳಸ ಲೈವ್ ವರದಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಳಸ, ಚಿಕ್ಕಮಗಳೂರು ಜಿಲ್ಲೆ, ಇಲ್ಲಿ ಪ್ರಥಮ ಪದವಿ ಬಿ.ಎ ಮತ್ತು ಬಿ.ಕಾಂ ಪದವಿ ವ್ಯಾಸಂಗಕ್ಕೆ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ಕಾಲೇಜಿಗೆ ತಮ್ಮ ಪೋಷಕರೊಂದಿಗೆ ಹಾಜರಾಗಿ ಪ್ರವೇಶಾತಿ ಪಡೆದುಕೊಳ್ಳಲು ಸೂಚಿಸಿದೆ.
*ಪ್ರವೇಶಾತಿ ಸಂದರ್ಭದಲ್ಲಿ ಸಲ್ಲಿಸಬೇಕಾದ ಅಗತ್ಯ ದಾಖಲೆಗಳು(ದ್ವಿಪ್ರತಿಯಲ್ಲಿ)*
1. ಪಿ.ಯು ಕಾಲೇಜಿನಿಂದ ಪಡೆದ ವರ್ಗಾವಣೆ ಪ್ರಮಾಣ ಪತ್ರ (ಅಸಲು ಪ್ರತಿ)
2. ಪಿ.ಯು ಅಂಕಪಟ್ಟಿ
3. 10ನೇ ತರಗತಿ ಅಂಕಪಟ್ಟಿ
4. ಪಾಸ್ ಪೋರ್ಟ್ ಸೈಜ್ ಫೋಟೋ (3)
5. ಆಧಾರ್ ಕಾರ್ಡ್ ಜೆರಾಕ್ಸ್
6. ಬ್ಯಾಂಕ್ ಪಾಸ್ ಪುಸ್ತಕ
7. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
*ವಿಶೇಷ ಸೂಚನೆ:* ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್ ನಲ್ಲಿ 10 ನೇ ತರಗತಿ ಅಥವಾ ಪಿ.ಯು ಅಂಕಪಟ್ಟಿಯಲ್ಲಿರುವಂತೆ ಹೆಸರು ದಾಖಲಾಗಿರುವುದೇ ಎಂದು ಖಚಿತಪಡಿಸಿಕೊಳ್ಳುವುದು, ಹೆಸರು ಆಧಾರ್ ಕಾರ್ಡ್ ನಲ್ಲಿ ತಪ್ಪಾಗಿ ನಮೂದಾಗಿದ್ದಲ್ಲಿ ಕೂಡಲೇ ತಿದ್ದುಪಡಿ ಮಾಡಿಸಿಕೊಳ್ಳುವುದು ಎಂದು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ವಿನಯ ಕುಮಾಎ್ ಶೆಟ್ಟಿ ತಿಳಿಸಿದ್ದಾರೆ.
