ಕಳಸ ಲೈವ್ ವರದಿ
ಕಳಸ ರೋಟರಿ ಕ್ಲಬ್ ವತಿಯಿಂದ ಮೌಲ್ಯಾಧಾರಿತ ಶಿಕ್ಷಣ ತರಬೇತಿ ಶಿಬಿರವನ್ನು ರೋಟರಿ ಭವನದಲ್ಲಿ ಭಾನುವಾರ ನಡೆಸಲಾಯಿತು.
ಕಾರ್ಯಗಾರವನ್ನು ಕಳಸ ರೋಟರಿ ಕ್ಲಬ್ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಜಿ ಜೋಷಿ ಉದ್ಘಾಟಿಸಿದರು.
ವಿವಿಧ ರೀತಿಯ ತರಬೇತಿಯಲ್ಲಿ 25 ವರ್ಷಗಳ ಅನುಭವ ಹೊಂದಿರುವ ಅಂತರಾಷ್ಟ್ರೀಯ ಜೀವನ ಕೌಶಲ್ಯ ತರಬೇತುದಾರರಾದ ಮೈಸೂರಿನ ಶ್ರೀ ಸತೀಶ್ ಹೆಚ್ ಆರ್ ಅವರು ಕಾರ್ಯಾಗಾರವನ್ನು ನಡೆಸಿದರು.
ಕಾರ್ಯಗಾರದಲ್ಲಿ ಕಳಸ ತಾಲ್ಲೂಕಿನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಸುಮಾರು 25 ಶಾಲೆಗಳ 60 ಶಿಕ್ಷಕರು ಭಾಗವಹಿಸಿದ್ದರು.
ರೋಟರಿ ಕಾರ್ಯದರ್ಶಿ ಫಣೀಶ್.ಡಿ.ಕೆ, ಗಿರಿಜಾಶಂಕರ್ ಬಿ ಜೋಷಿ, ಕಿರಣ್ ಶೆಟ್ಟಿ ಇದ್ದರು.