ಕಳಸ ಲೈವ್ ವರದಿ
ದಾಖಲೆ ಇಲ್ಲದೆ ಸಾಗಿಸುತ್ತಿದ್ದ 51,500 ರೂ ಹಣವನ್ನು ಕುದುರೆಮುಖ ವ್ಯಾಪ್ತಿಯ ಬಸ್ರಿಕಲ್ ಚೆಕ್ ಪೋಸ್ಟ್ ನಲ್ಲಿ ಶನಿವಾರ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕಳಸದಿಂದ ಕುದುರೆಮುಖಕ್ಕೆ ಹೋಗುತ್ತಿದ್ದ ಕಾರನ್ನು ನಿಲ್ಲಿಸಿ ಅಧಿಕಾರಿಗಳು ತಪಾಸಣೆ ಮಾಡಿದ ವೇಳೆ ದಾಖಲೆ ಇಲ್ಲದ 51500 ರೂ ನಗದು ಪತ್ತೆಯಾಗಿದ್ದು, ಹಣವನ್ನು ವಶಕ್ಕೆ ಪಡೆಯಲಾಗಿದೆ.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಪದ್ಮರಾಜ್ ಮತ್ತು ತಂಡ, ಕುದುರೆಮುಖ ವೃತ್ತ ನಿರೀಕ್ಷಕ ಶರೀಪ್, ಪಿಎಸೈ ಆದರ್ಶ ಕುಮಾರ್ ಇದ್ದರು.
