
ಕಳಸ ಲೈವ್ ವರದಿ
ಕಳಸದಲ್ಲಿ ಭಗವಾನ್ 1008 ಶ್ರೀ ಮಹಾವೀರ ತೀರ್ಥಂಕರರ 2623ನೇ ಜನ್ಮಕಲ್ಯಾಣ ಮಹೋತ್ಸವವನ್ನು ಜೈನ ಬಾಂಧವರು ಸಡಗರ ಸಂಭ್ರಮದಿಂದ ಅಚರಿಸಿದರು.

ಭಾನುವಾರ ಬೆಳಿಗ್ಗೆ ಕಳಸ ಕಲಶೇಶ್ವರ ದೇವಸ್ಥಾನದ ಬಳಿಯಿಂದ ಹೂಗಳಿಂದ ಸಿಂಗರಿಸಲ್ಪಟ್ಟ ತೆರದ ವಾಹನದಲ್ಲಿ ಮಹಾವೀರ ಸ್ವಾಮಿಯ ವಿಗ್ರಹವನ್ನು ಕುಳ್ಳಿರಿಸಿ ಕಳಸ ಚಂದ್ರನಾಥ ಸ್ವಾಮಿ ಬಸದಿಯವರೆಗೆ ಮೆರವಣಿಗೆಯನ್ನು ಮಾಡಲಾಯಿತು.
ಮೆರವಣಿಗೆದ್ದಕ್ಕೂ ಚೆಂಡೆ, ಭಜನಾ ಕುಣಿತ ಮೆರವಣಿಗೆಗೆ ಮೆರುಗು ನೀಡಿತು. ಜೈನ ಸಮುದಾಯದ ನೂರಾರು ಶ್ರಾವಕ ಶ್ರಾವಕಿಯರು ಶ್ವೇತ ವಸ್ತ್ರದೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ನಂತರ ಕಳಸ ಚಂದ್ರನಾಥ ಬಸದಿಯಲ್ಲಿ ಮಹಾವೀರ ಸ್ವಾಮಿಗೆ 54 ಕಳಸಗಳ ವಿಶೇಷ ಅಭಿಷೇಕ ಪೂಜೆಗಳು ನಡೆಯಿತು.ಮಧ್ಯಾಹ್ನ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ನೆರವೇರಿತು
