
ಕಳಸ ಲೈವ್ ವರದಿ
ಕಳಸ ರೋಟರಿ ಕ್ಲಬ್ ವತಿಯಿಂದ ರೋಟರಿ ಶತಾಬ್ದಿ ಭವನದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಭಾನುವಾರ ನಡೆಯಿತು.
ಶಿವಮೊಗ್ಗದ ಮ್ಯಾಕ್ಸ್ ಸೂಪರ್ ಸ್ಪೆಷಲಿಟಿ ಆಸ್ಪತ್ರೆಯ ಡಾ.ಸುಧೀರ್ ಎಂ ಭಟ್ ಹೃದ್ರೋಗ ಶಸ್ತ್ರಚಿಕಿತ್ಸೆ ಮತ್ತು ಅವರ ಸಹ ವೈದ್ಯರು ಹೃದಯ ತಪಾಸಣಾ ಶಿಬಿರವನ್ನು ನಡೆಸಿಕೊಟ್ಟರು ಮತ್ತು ರೋಟರಿ ಮಿಡ್ಟೌನ್ ಶಿವಮೊಗ್ಗ ಬ್ಲಡ್ ಬ್ಯಾಂಕ್ ರಕ್ತದಾನವನ್ನು ನಡೆಸಿತು.
ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆದ ಶಿಬಿರದಲ್ಲಿ 65 ರೋಗಿಗಳಿಗೆ ಹೃದಯ ತಪಾಸಣೆ ಮಾಡಲಾಯಿತು. 30 ಜನ ರಕ್ತದಾನ ಮಾಡಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷೆ ಸಾವಿತ್ರಿ ಜಿ ಜೋಶಿ ನೆರವೇರಿಸಿದರು. ರೋಟರಿ ಕ್ಲಬ್ನ ಕಾರ್ಯದರ್ಶಿ ಪಣೀಶ್, ಸೂಪರ್ ಸ್ಪೆಷಲಿಟಿ ಆಸ್ಪತ್ರೆಯ ಡಾ ಸುಧೀರ್, ರೋಟರಿ ಬ್ಲಡ್ ಬ್ಯಾಂಕ್ನ ಡಾ.ವಿವೇಕ್ ಉಡುಪ, ರೋಟರಿ ಸದಸ್ಯರು ಇದ್ದರು.




