
ಕಳಸ ಲೈವ್ ವರದಿ
ಕಳಸ ತಾಲೂಕಿನಾಧ್ಯಂತ ಗಾಳಿ ಮಳೆಯ ಅಬ್ಬರ ಮುಂದುರೆದಿದ್ದು, ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾತಿಗುಡ್ಡೆಯ ಹಿಲ್ಡಾ ಮೊರಾಸ್ ಎಂಬುವವರ ಮನೆ ಕುಸಿದಿದೆ.
ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಮನೆ ಕುಸಿದಿದ್ದು, ಮನೆಯಲ್ಲಿದ್ದ ಪಾತ್ರೆ, ಬಟ್ಟೆ ಬರೆ, ದಿನಸಿ ಸಾಮಾನುಗಳು ಮಣ್ಣು ಪಾಲಾಗಿದೆ.
ಸ್ಥಳಕ್ಕೆ ಕಳಸ ತಹಶೀಲ್ದಾರ್ ಬಸವರಾಜ್ ವಿಎ ಪ್ರದೀಪ್, ಸಂಸೆ ಪಂಚಾಯಿತಿ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



