

ಕಳಸ ಲೈವ್ ವರದಿ
ಕಳಸ ಸಾರ್ವಜನಿಕ ಶ್ರೀ ದುರ್ಗಾಪೂಜಾ ಸಮಿತಿ ವತಿಯಿಂದ 36ನೇ ವರ್ಷದ ಸಾರ್ವಜನಿಕ ಶ್ರೀ ದುರ್ಗಾಪೂಜಾ ಮಹೋತ್ಸವವು ಅ 03ರಿಂದ ಅ 12ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಕಳಸ ದುರ್ಗಾ ಮಂಟಪದಲ್ಲಿ ಅದ್ದೂರಿಯಾಗಿ ನೆರವೇರಲಿದೆ.
ಅ 03 ಪೂರ್ವಹ್ನ 11-10ಕ್ಕೆ ಶ್ರೀ ದುರ್ಗಾದೇವಿಯ ವಿಗ್ರಹ ಪ್ರತಿಷ್ಠಾಪನೆ. ಸಂಜೆ ಹೊರನಾಡು ದೇವಸ್ಥಾನದ ಟ್ರಸ್ಟಿ ಶ್ರೀಮತಿ ಪ್ರತಿಭಾ ಮತ್ತು ರಾಜಗೋಪಾಲ ಜೋಷಿ ಇವರಿಂದ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ.ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಟ್ವಿಂಕ್ಲಿಂಗ್ ಸ್ಟಾರ್ ದಿ ಸ್ಕೂಲ್ ಆಫ್ ಡ್ಯಾನ್ಸ್ ಕಳಸ ಹಾಗೂ ಕಲ್ಲುಬಾವಿ ಅಂಗನವಾಡಿ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಅ 04ರಂದು ಸಂಜೆ ಶಿವಂ ಕಲಾವಿದರು ಕಳಸ ಇವರಿಂದ ರಸಮಂಜರಿ. ಅ 05ರಂದು ಸಂಜೆ ವದನ ಸತ್ವ ರಜೋ ತಮೋ ಗುಣಗಳ ಸಂಘರ್ಷದ ಚಿತ್ರ ಪ್ರದರ್ಶನ ಪ್ರಧಾನ ಭೂಮಿಕೆಯಲ್ಲಿ ಶ್ರೀ ರಾಜಗೋಪಾಲ ಜೋಷಿ ಹೊರನಾಡು ಹಾಗೂ ಚಿತ್ರ ತಂಡದವರಿಗೆ ಗೌರವ ಸಮರ್ಪಣೆ.ರಾತ್ರಿ ಶ್ರೀ ಗುತ್ಯಮ್ಮ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಗುತ್ತಿಯಡೇಹಳ್ಳಿ ಸೀತೂರು ಇವರಿಂದ ನಾಗಮಂಡಲ ಯಕ್ಷಗಾನ.
ಅ 06 ರಂದು ಸನ್ನಿಧಿ ಕಲಾವಿದರು ಉಡುಪಿ ಇವರಿಂದ ಅಪ್ಪೆ ಮಂತ್ರ ದೇವತೆ ತುಳು ನಾಟಕ, 07ರಂದು ಸ್ವರನಾದ ಮ್ಯೂಸಿಕಲ್ ಇವರಿಂದ ಸ್ವರನಾದ ಮ್ಯೂಸಿಕ್-ಮಸ್ತಿ ಕಾರ್ಯಕ್ರಮ. ಅ 08 ರಂದು ಚಾ ಪರ್ಕ ಕುಡ್ಲ ಇವರಿಂದ ಏರ್ಲಾ ಗ್ಯಾರಂಟಿ ಅತ್ತ್ ತುಳು ನಾಟಕ. ಅ 09 ರಂದು ಸಂಗೀತ ಕಲಾವೃಂದ ಕಳಸ ಅರ್ಪಿಸುವ ಶ್ರೀ ವೇಣಿ ಸುಬ್ರಹ್ಮಣ್ಯ ಭಟ್ ಬಳಗ ಕಾರ್ಕಳ ಇವರಿಂದ ಯಕ್ಷ-ದಾಸ-ಗಾನ ವೈಭವ. ಅ 10 ರಂದು ಬೆಳಿಗ್ಗೆ ದುರ್ಗಾ ಹೋಮ, ಹೂವಿನ ಪೂಜೆ, ಸೌಂದರ್ಯ ಲಹರಿ. ಸಂಜೆ ರಂಗಪೂಜೆ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಡಾ|| ನಂದನ್ ಸಾರಥ್ಯದಲ್ಲಿ ಸಂಗೀತ ಗಾನ ಲಹರಿ ಬೆಂಗಳೂರು ಇವರಿಂದ ಹಾಡು, ನೃತ್ಯ, ಹಾಸ್ಯ. ಅ 11ರಂದು ಸಂಜೆ ಡ್ರೀಮ್ ಡ್ಯಾನ್ಸ್ ಅಕಾಡೇಮಿ ಸೊರಬ ಇವರಿಂದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ.
ಅ 12ರಂದು ಬೆಳಿಗ್ಗೆ ಆಕ್ರೇಸ್ಟ್ರಾ ಮಧ್ಯಾಹ್ನ ಶ್ರೀ ದೇವಿಯ ವೈಭವದ ಶೋಭಯಾತ್ರೆ ನಂತರ ಕೋಟಿ ತೀರ್ಥದಲ್ಲಿ ತೆಪ್ಪೋತ್ಸವ ನಂತರ ವಿಸರ್ಜನೆ, ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ಹುಲಿ ಕುಣಿತ, ಸೌಂಡ್ಸ್ ಎಂಡ್ ಲೈಟ್ಸ್, ಕೀಲು ಕುದುರೆ, ಗೊಂಬೆ ಕುಣಿತ, ಚಲಿಸುವ ಆಕ್ರೇಸ್ಟ್ರಾ ಇರಲಿದೆ ಎಂದು ಸಮಿತಿಯ ಅಧ್ಯಕ್ಷ ಎನ್.ಪಿ. ಭರತರಾಜ್ ತಿಳಿಸಿದ್ದಾರೆ.,
