ಕಳಸ ವೈವ್ ವರದಿ
ದಕ್ಷಿಣ ಕಾಶಿ ಅಗಸ್ತ್ಯ ಕ್ಷೇತ್ರ ಕಳಸದ ಕಲಶೇಶ್ವರಸ್ವಾಮಿಯವರಿಗೆ ಮಂಗಳವಾರ ರಾತ್ರಿ ಅತ್ಯಂತ ಸಡಗರ ಸಂಭ್ರವiದಿಂದ ಗಿರಿಜಾ ಕಲ್ಯಾಣೋತ್ಸವ ನಡೆಯಿತು.
ಕಲಶೇಶ್ವರನ ಕಲ್ಯಾಣೋತ್ಸವವಕ್ಕೆ ಇಡೀ ಊರೇ ಸಂಭ್ರಮದ ಕಡಲಲ್ಲಿ ತೇಲಾಡಿತು.ಇಡೀ ಊರನ್ನೆ ಶೃಂಗಾರ ಮಾಡಲಾಗಿತ್ತು.ದೇವಸ್ಥಾನಕ್ಕೆ ತಳಿರು ತೋರಣ, ಹೂವಿನ ಅಲಂಕಾರ ವಿದ್ಯುತ್ ದೀಪಗಳಿಂದ ಶೃಂಗಾರ ಮಾಡಲಾಗಿತ್ತು.
ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಧಾರ್ಮಿಕ ವಿಧಿ ವಿಧಾನಗಳನ್ನು ಮುಗಿಸಿ ಮಂಗಳವಾರ ರಾತ್ರಿ ಮೂರು ಗಂಟೆಗೆ ಈಶ್ವರನಿಗೆ ಗಿರಿಜೆಯೊಂದಿಗೆ ಕಲ್ಯಾಣ ಮಹೋತ್ಸವ ನಡೆಯಿತು.
ಮಂಗಳವಾರ ಸಂಜೆಯ ಸಮಯದಲ್ಲಿ ಉಪಾದಿವಂತರು ವಾದ್ಯ ಘೋಷಗಳೊಂದಿಗೆ ಅಕ್ಷತೆ ಕೊಟ್ಟು ಕಲ್ಯಾಣಕ್ಕಾಗಿ ಊರ ಜನರನ್ನು ಕರೆಯಲಾಯಿತು.ರಾತ್ರಿ ಈಶ್ವರನ ಎದುರು ಉಂಗುರ ಉಡಿಗೆಗಳನ್ನು ಇಟ್ಟು ಪೂಜಿಸಿ ಪಲ್ಲಕಿಯಲ್ಲಿಟ್ಟು ಗಿರಿಜಾಂಬೆಯ ಬಳಿ ತರಲಾಯಿತು.ನಂತರ ಕಲಶೇಶ್ವರ ದೇವಾಸ್ಥಾನದಿಂದ ಗಿರಿಜಾಂಬ ದೇವಾಸ್ಥಾನಕ್ಕೆ ತೆರಳಿ, ಅಲ್ಲಿಂದ ಗಿರಿಜಾಂಬೆಯ ವಿಗ್ರಹವನ್ನು ಹಿಡಿದುಕೊಂಡು ಹೂ ಹಿಂಗಾರದೊಂದಿಗೆ ದೀವಟಿಕೆ,ಪಂಚಪತಾಕಿ,ಕಟ್ಟಿಗೆ,ಚೌರಿ,ಮಂಗಳ ವಾದ್ಯಗಳೊಂದಿಗೆ ವಿಜ್ರಂಬಣೆಯಿಂದ ಗಿರಿಜಾಂಬೆಯ ದಿಬ್ಬಣವು ಗಿರಿಜಾಂಬ ದೇವಸ್ಥಾನದಿಂದ ಕಳಸದ ರಾಜಬೀದಿಯ ಮುಖಾಂತರ ಕಲಶೇಶ್ವರ ದೇವಸ್ಥಾನಕ್ಕೆ ಬಂತು. ಈ ಸಂದರ್ಭದಲ್ಲಿ ರಾಜಬೀದಿಯ ಇಕ್ಕೆಲಗಳಲ್ಲಿ ಇರುವ ಮನೆ ಮನೆಗಳಿಂದ ಭಕ್ತರು ಗಿರಿಜಾಂಬೆಗೆ ಹಣ್ಣು ಕಾಯಿ ಸಮರ್ಪಿಸಿದರು. ಗಿರಿಜಾಂಬೆಯ ದಿಬ್ಬಣವು ಸರ್ವಾಂಗ ಸುಂದರಿ ಅಮ್ಮನವರ ಬಳಿ ಬಂದಾಗ ಈಶ್ವರನ ಕಡೆಯವರು ದಿಬ್ಬಣವನ್ನು ಎದುರುಗೊಳ್ಳಲಾಯಿತು.ಗಿರಿಜಾಂಬೆ ವಿವಾಹ ಮಂಟಪಕ್ಕೆ ಬಂದ ಕೂಡಲೆ ತಂತ್ರಿಗಳಿಂದ ನಾಂದಿ,ಪುಣ್ಯಾಹಗಳು ನಡೆಯಿತು.ಮಧುಪರ್ಕ ಪೂಜೆ,ದ್ಯಾನವಾಹನ ಪೂಜೆ ನಡೆದು ಕನ್ಯಾವರಣ ಮಾಡಿ,ನಂತರ ಮಂಗಳಾಷ್ಟಕವಾಯಿತು.ಈ ಸಮಯದಲ್ಲಿ ಎಡನಾಡಿಯ ಬಾಗಿಲಿಗೆ ತೆರೆಹಿಡಿಯಲಾಯಿತು.ಆಗ ಗಿರಿಜಾಂಬೆಯ ಅಡಿಗಳು ಗಿರಿಜಾಂಬ ದೇವಿಯ ವಿಗ್ರಹವನ್ನು ತೆಗೆದುಕೊಂಡು ಕಲಶೇಶ್ವರನ ಬಲಬಾಗದಲ್ಲಿ ಇಟ್ಟು.ನಂತರ ಧಾರೆ ಎರೆಯುವ ಕಾರ್ಯಕ್ರಮವು ನಡೆದು ಕಂಕಣ ಸಮರ್ಪಣೆಯಾಗಿ ಮಂಗಲ ನೀರಾಜನ,ಸಭಾಪೂಜೆ,ತಾಂಬೂಲ ಪ್ರದಾನ ನಡೆದು ನಂತರ ಭೂತ ಬಲಿ ಮಹೋತ್ಸವ ನಡೆಯಿತು.
ನಂತರ ವದು ವರ ದಂಪತಿ ದರ್ಶನ ನಡೆದು ಬುಧವಾರ ಮದ್ಯಾಹ್ನ ಮದುವೆಯ ಊಟವು ವಿಜ್ರಂಬನೆಯಿಂದ ನಡೆದು ರಾತ್ರಿ ಚಿಕ್ಕ ರಥೋತ್ಸವ ನಡೆಯಿತು.
ತಾಲ್ಲೂಕು ಕಜಾನೆಯಲ್ಲಿರುವ ದೇವರ ಆಭರಣಗಳನ್ನು ತರಿಸಿ ದೇವರಿಗೆ ತೊಡಿಸಿ ಶಾಸ್ತ್ರಬದ್ದವಾಗಿ ಕಲಶೇಶ್ವರನಿಗೆ ಕಲ್ಯಾಣವಾಯಿತು.
ಈ ಒಂದು ಕಲ್ಯಾಣಮಹೋತ್ಸವದಲ್ಲಿ ಊರ ಪರವೂರ ಸಾವಿರಾರು ಭಕ್ತರು ಆಗಮಿಸಿ ಗಿರಿಜಾ ಕಲ್ಯಾಣ ಮಹೋತ್ಸವವನ್ನು ಕಣ್ತುಂಬಿಸಿಕೊಂಡರು.