ಕಳಸ ಲೈವ್ ವರದಿ
ಕರ್ನಾಟಕ ಜಾನಪದ ಪರಿಷತ್ತು ಕಳಸ ತಾಲ್ಲೂಕು ಘಟಕದ ಮೊದಲನೆ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳಿಗಾಗಿ ಜಾನಪದ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
6 ರಿಂದ 16 ವರ್ಷದ ಮಕ್ಕಳಿಗೆ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಜಾನಪದ ಗೀತೆಗಳಿಗೆ ಮಾತ್ರ ಅವಕಾಶವನ್ನು ಕಲ್ಪಿಸಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು 13-12-2024ರ ಒಳಗಾಗಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಹೆಸರನ್ನು ನೊಂದಾಯಿಸಿಕೊಳ್ಳುವವರು ಮತ್ತು ಹೆಚ್ಚಿನ ವಿವರಕ್ಕಾಗಿ 8660437032 ಅಥವಾ 8618224886 ಈ ನಂ ನ್ನು ಸಂಪರ್ಕಿಸಬೇಕೆಂದು ಕರ್ನಾಟಕ ಜಾನಪದ ಪರಿಷತ್ತು ಕಳಸ ಘಟಕದ ಅಧ್ಯಕ್ಷ ರಜಿತ್ ಕೆಳಗೂರು ತಿಳಿಸಿದ್ದಾರೆ.






