
ಕಳಸ ಲೈವ್ ವರದಿ
ಇದೇ ಬರುವ ದಿನಾಂಕ 18-01-2025ರ ಶನಿವಾರದದಂರು ಕಳಸದಲ್ಲಿ ನಂದಿ ರಥಯಾತ್ರೆಯ ಶೋಭಾಯಾತ್ರೆ ಮತ್ತು ವಿಷ್ಣು ಸಹಸ್ರನಾಮ ಪಠಣ ನಡೆಯಲಿದೆ.
ಗೋಸೇವಾ ಗತಿವಿಧಿ ಕರ್ನಾಟಕ ರಾಧಸುರಭಿ ಗೋಮಂದಿರ ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ವತಿಯಿಂದ ನಂದಿ ರಥಯಾತ್ರೆಯು ಕರ್ನಾಟಕ ರಾಜ್ಯಾದ್ಯಂತ ಸಂಚರಿಸಲಿದ್ದು, ಈ ರಥಯಾತ್ರೆಯು ಕಳಸ ಪಟ್ಟಣಕ್ಕೆ ಜನವರಿ 18ರಂದು ಆಗಮಿಸಲಿದೆ. ನಂದಿ ರಥಯಾತ್ರೆಯ ಶೋಭಾಯಾತ್ರೆಯು ಕಲಶೇಶ್ವರ ಸ್ವಾಮಿ ದೇವಸ್ಥಾನದಿಂದ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ನಡೆಯಲಿದೆ ನಂತರ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಷ್ಣು ಸಹಸ್ರನಾಮ ಪಠಣ ನಡೆಯಲಿದೆ.
88 ದಿನಗಳ ಕಾಲ ರಾಜ್ಯಾದ್ಯಂತ ನಡೆಯುವ ಈ ರಥ ಯಾತ್ರೆಯಲ್ಲಿ ಒಂದು ಕೋಟಿ ಗೋಮಯ ಹಣತೆ ಬೆಳಗಿ, ಮನ ಮನೆ, ಪರಸರವನ್ನು ಸ್ವಚ್ಚಗೊಳಿಸುವ ಸಂಕಲ್ಪ ಹೊಂದಿದೆ.