ಕಳಸ ಲೈವ್ ವರದಿ
ಇಲ್ಲಿಯ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಫೆ 28 ರಿಂದ ಮಾ 4 ರ ವರೆಗೆ ಜಾತ್ರಾಮಹೋತ್ಸವ ನಡೆಯಲಿದೆ ಎಂದು ಹೊರನಾಡಿನ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಐದು ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಫೆ 28 ರಂದು ರಥೋತ್ಸವಾಂಗ ಶ್ರೀ ಗಣಪತಿ ಪೂಜೆ, ಶ್ರೀ ಮಹಾ ಗಣಪತಿ ಹೋಮ ಮತ್ತು ರಾತ್ರಿ ಮಹಾರಂಗಪೂಜೆ.
ಮಾ1 ರಂದು ಮಧ್ಯಾಹ್ನ ಧ್ವಜಾರೋಹಣ ರಾತ್ರಿ ಪುಷ್ಪಕರೋಹಣ.
ಮಾ 2 ರಂದು ಮಧ್ಯಾಹ್ನ 12.34 ಅಭಿಜಿನ್ ಲಗ್ನದಲ್ಲಿ ಶ್ರೀ ಬ್ರಹ್ಮರಥೋತ್ಸವ,ರಾತ್ರಿ 10 ಗಂಟೆಗೆ ಶ್ರೀ ಮನ್ ಮಹಾರಥೋತ್ಸವ ನಡೆಯಲಿದೆ.
ಮಾ 3 ರಂದು ಕುಂಕುಮೋತ್ಸವ,ಅವಭೃತಸ್ನಾನ,ರಾತ್ರಿ ಇಡಿಗಾಯಿ ಸೇವೆ,ದ್ವಜಾವರೋಹಣ. ಮಾ 4 ರಂದು ನಡೆಯುವ ಸಂಪ್ರೋಕ್ಷಣೆಯೊಂದಿಗೆ 5 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ ಎಂದು ತಿಳಿಸಿದ್ದಾರೆ.
