









ಕಳಸ ಲೈವ್ ವರದಿ
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿಸಿದ್ದು ಶೇ.92 ಫಲಿತಾಂಶ ಪಡೆದಿದೆ.
ಪರೀಕ್ಷೆ ಬರೆದಿದ್ದ 112 ವಿದ್ಯಾರ್ಥಿಗಳ ಪೈಕಿ 103 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದ 53 ವಿದ್ಯಾರ್ಥಿಗಳ ಪೈಕಿ 51( ಶೇ96) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದ 45 ವಿದ್ಯಾರ್ಥಿಗಳ ಪೈಕಿ 42 (ಶೇ 93.33) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದ 14 ವಿದ್ಯಾರ್ಥಿಗಳ ಪೈಕಿ 10 (ಶೇ 74) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಒಟ್ಟಾರೆ 10 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಮತ್ತು 63 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 22 ವಿದ್ಯಾರ್ಥಿಗಳು ದ್ವಿತಿಯ ಶ್ರೇಣಿ, 8 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಶ್ರದ್ದಾ ಜೆ ಮತ್ತು ಸೌಜನ್ಯ 562 ಸಮಾನ ಅಂಕ (ಶೇ.93.66) ಗಳಿಸಿ ಕಾಲೇಜಿಗೆ ಅಗ್ರಸ್ಥಾನದ ಶ್ರೇಯ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಅಂಜಲಿ ಟಿ 560, ನಮ್ರತಾ ಎಸ್ 543,ಸುವರ್ಣ 541, ಸುಧೀಕ್ಷಾ ಶೆಟ್ಟಿ 537, ದೀಕ್ಷಿತಾ 535, ವಿಜ್ಞಾನ ವಿಭಾಗದಲ್ಲಿ ಜುಲೈಕಾ ಫಿಜಾ 532, ವಾಣಿಜ್ಯ ವಿಭಾಗದ ಸ್ವಾತಿ ಎಸ್ 523, ಕಲಾ ವಿಭಾಗದ ದೀಕ್ಷಿತಾ ಪಿ 511 ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಎಂದು ಕಾಲೇಜಿನ ಪ್ರಾಂಶುಪಾಲ ಅನಂತಪದ್ಮನಾಭ ಮಾಹಿತಿ ನೀಡಿದ್ದಾರೆ.






