ಕಳಸ ಲೈ ವ್ ವರದಿ
ಬಾಳೆಹೊನ್ನೂರಿನ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2025-26ನೇ ಸಾಲಿನ ಮೊದಲನೇ ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಈ ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ ಎಲ್ಲಾ ಫೀಡರ್ಗಳಲ್ಲಿ ಏ.29ರ ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ವಿದ್ಯುತ್ ವ್ಯತಯವಾಗಿದೆ
ಆದ್ದರಿಂದ ಕಳಸ 33/11 ಕೆ.ವಿ ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ ಕಳಸ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯತಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಕಳಸ, ಹೊರನಾಡು, ಬಾಳೆಹೊಳೆ, ಸಂಸೆ, ಸುಂಕಸಾಲೆ, ಕುದುರೆಮುಖ, ಹಿರೇಬೈಲು, ಮರಸಣಿಗೆ ಹಾಗೂ ಜಾವಳಿ ಭಾಗಗಳಲ್ಲಿ ವಿದ್ಯುತ್ ಸ್ಥಗಿತವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ತಿಳಿಸಿದ್ದಾರೆ.


