ಕಳಸ ಲೈವ್ ವರದಿ
ಕಳಸ ಪ್ರಬೋಧಿನಿ ವಿದ್ಯಾಕೇಂದ್ರ 2024-25ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಶೇ 100 ಫಲಿತಾಂಶ ದಾಖಲಾಗಿದೆ.
45 ವಿದ್ಯಾರ್ಥಿಗಳ 44 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 98% ದಾಖಲಾಗಿ ಒಬ್ಬ ವಿದ್ಯಾರ್ಥಿ ಅನುತ್ತೀರ್ಣನಾಗಿದ್ದ. ಅನುತ್ತೀರ್ಣನಾಗಿದ್ದ ವಿದ್ಯಾರ್ಥಿ ತನ್ನ ಪತ್ರಿಕೆಯನ್ನು ಮರು ಮೌಲ್ಯಮಾಪನಕ್ಕೆ ಹಾಕಿದ್ದರು.
ಮರು ಮೌಲ್ಯಮಾಪನದಲ್ಲಿ ಆತ ಉತ್ತೀರ್ಣಗೊಂಡು ಈಗ ಪ್ರಬೋಧಿನಿ ವಿದ್ಯಾ ಕೇಂದ್ರ ಶೇ 100 ಫಲಿತಾಂಶ ಪಡೆದಂತಾಗಿದೆ.ಇದರಿಂದ ಪ್ರಬೋಧಿನಿ ವಿದ್ಯಾ ಕೇಂದ್ರವು ಸತತ 23 ವರ್ಷಗಳಿಂದ ಶೇ 100% ಫಲಿತಾಂಶ ದಾಖಲಿಸಿದಂತಾಗಿದೆ.
