oplus_2097152

ಕಳಸ ಲೈವ್ ವರದಿ
ಕಳಸ ಮುಖ್ಯ ರಸ್ತೆಯಲ್ಲಿ ನೀರು ಹರಿದು ಆಗುತ್ತಿದ್ದ ಸಮಸ್ಯೆಯನ್ನು ಕಳಸ ಗ್ರಾಮ ಪಂಚಾಯಿತಿ ನಿವಾರಿಸಿದೆ.
ಜೋರಾಗಿ ಮಳೆ ಬಂದ ಕೂಡಲೇ ಚರಂಡಿಯಲ್ಲಿ ಹರಿಯಬೇಕಾಗಿದ್ದ ನೀರು ಸಂಪೂರ್ಣ ರಸ್ತೆಯಲ್ಲಿ ಹರಿದು ರಸ್ತೆಯಿಡೀ ನದಿಯ ಸ್ವರೂಪವನ್ನು ಪಡೆಯುತ್ತಿತ್ತು. ಇದರಿಂದ ರಸ್ತೆಯು ಹಾಳಾಗುವುದಲ್ಲದೆ ಸಾರ್ವಜನಿಕರಿಗೂ ವಾಹನ ಸವಾರರಿಗೂ ತೀರ ತೊಂದರೆ ಉಂಟಾಗುತ್ತಿತ್ತು
ಭಾನುವಾರ ಸಾಕಷ್ಟು ಮಳೆ ಬಂದಿರುವುದರಿಂದ ರಸ್ತೆ ಪೂರ್ತಿ ನದಿಯನ್ನು ನೆನಪಿಸುತ್ತಿತ್ತು. ಕಳಸದ ಕೈಮರದಲ್ಲಿ ಮೋರಿಯೊಂದು ಬ್ಲಾಕ್ ಆಗಿ ಮೇಲ್ಬಾಗದಿಂದ ಹರಿದು ಬರುವ ನೀರು ರಸ್ತೆಯನ್ನೇ ಆಶ್ರಯಿಸಬೇಕಾಗಿತ್ತು, ಈ ಬಗ್ಗೆ ಕೂಡಲೇ ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್ ಹಿನಾರಿ, ವೀರೇಂದ್ರ ಜೈನ್, ಪಿಡಿಒ ಕವೀಶ್ ಸ್ಥಳಕ್ಕೆ ಬೇಟಿ ನೀಡಿ ಹಲವು ವರ್ಷಗಳಿಂದ ಜಠಿಲವಾಗಿದ್ದ ಸಮಸ್ಯೆಯನ್ನು ನಿವಾರಣೆ ಮಾಡಿ ಕಳಸ ಪೇಟೆಯ ಮುಖ್ಯ ರಸ್ತೆಗೆ ನೀರು ಬರದಂತೆ ಕ್ರಮ ತೆಗೆದುಕೊಂಡರು
ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರುಗಳಾದ ಆದರ್ಶ, ಹನುಮ, ನಾಗರಾಜ್ ಇತರರು ಇದ್ದರು.
