ಕಳಸ ಲೈವ್ ವರದಿ
ಕಳಸ ಶ್ರೀ ಅನ್ನಪೂರ್ಣೇಶ್ವರೀ ಮಹಿಳಾ ಮಂಡಳಿ ವತಿಯಿಂದ ಅಂತರಾಷ್ಟಿçÃಯ ಯೋಗ ದಿನಾಚರಣೆಯನ್ನು ಸೋಮವಾರ ಮಂಡಳಿಯ ಸಭಾಂಗಣದಲ್ಲಿ ನಡೆಸಲಾಯಿತು.
ಯೋಗ ಗುರು ವೈ ಪ್ರೇಮ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ದೈಹಿಕ ಮತ್ತು ಮಾನಸೀಕ ಆರೋಗ್ಯಕ್ಕೆ ಯೋಗ ಅತ್ಯುತ್ತಮ.ಯೋಗ ದೇಹ ಮತ್ತು ಮನಸ್ಸನ್ನು ಒಟ್ಟಿಗೆ ತರುತ್ತದೆ ಮತ್ತು ಚಲನೆ, ಉಸಿರಾಟ, ಮತ್ತು ಧ್ಯಾನ ಈ ಮೂರು ಮುಖ್ಯ ಅಂಶಗಳ ಮೇಲೆ ನಿರ್ಮಿಸಲಾಗಿದೆ. ಯೋಗವು ಸುಧಾರಿತ ಭಂಗಿ, ನಮ್ಯತೆ, ಶಕ್ತಿ, ಸಮತೋಲನ ಮತ್ತು ದೇಹದ ಅರಿವು ಸೇರಿದಂತೆ ಅನೇಕ ದೈಹಿಕ ಮತ್ತು ಮಾನಸೀಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಕಿರಣ ಬ್ರಹ್ಮದೇವ ವಹಿಸಿದ್ದರು.ಕಾರ್ಯಕ್ರಮದಲ್ಲಿ ಮಂಡಳಿಯ ಕಾರ್ಯದರ್ಶಿ ಆಶಾ ಗುರು ಶೇಟ್,ಗೌರವಾಧ್ಯಕ್ಷರಾದ ಚಂಪಾ ರಾವ್, ನಿರ್ದೇಶಕರಾದ ಫಾತಿಮಾ ರೆಹಮಾನ್, ಸುಜಯ ಸದಾನಂದ, ಶೋಭಾ ದೇಸಾಯಿ, ಅಮಿತ ವಿನಾಯಕ, ಮೇನಕ ಹೆಬ್ಬಾರ್, ಜಾನಕಿ ಸುಂದರೇಶ್ ಇದ್ದರು.


