ಕಳಸ ಲೈವ್ ವರದಿ
ಈ ಹಿಂದೆ ಹಿಂಡು ಹಿಂಡುಗಳಾಗಿ ಜಾರುವಾರುಗಳು ಕಾಣ ಸಿಗುತ್ತಿದ್ದ ಪ್ರದೇಶಗಳಲ್ಲಿ ಈಗ ಹಿಂಡು ಹಿಂಡುಗಳಾಗಿ ಕಾಡುಕೋಣಗಳು ಕಾಣ ಸಿಗುತ್ತಿವೆ.
ಕಳಸ ಹಳುವಳ್ಳಿ ತಂಬಿಕುಡಿಗೆ ಜ್ಯೋತಿ ಎಂಬುವವರ ಮನೆಯ ಸಮೀಪದ ರಸ್ತೆಯಲ್ಲಿ ಹಿಂಡುಗಟ್ಟಲೆ ಕಾಡುಕೋಣಗಳು ಕಂಡು ಬಂದಿವೆ.
ಇಲ್ಲಿ ಹತ್ತಾರು ಕಾಡುಕೋಣಗಳ ಹಿಂಡು ಕಂಡು ಬಂದಿದ್ದು, ಕಾಡು ಕೋಣಗಳ ಹಿಂಡುಗಳನ್ನು ಗಮನಿಸಿದ ಗ್ರಾಮಸ್ಥರು ರಸ್ತೆಯಲ್ಲಿ ಓಡಾಡಲು ಭಯಪಡುವಂತಾಗಿದೆ.


