ಕಳಸ ಲೈವ್ ವರದಿ
ರೇಬೀಸ್ (ಹುಚ್ಚುನಾಯಿ ರೋಗ) ಮಾನವ ಮತ್ತು ಪ್ರಾಣಿಗಳ ಜೀವಕ್ಕೆ ಅಪಾಯಕಾರಿಯಾದ ಮಾರಣಾಂತಿಕ ರೋಗವಾಗಿದ್ದು, ಇದನ್ನು ತಡೆಗಟ್ಟುವ ಏಕೈಕ ಪರಿಣಾಮಕಾರಿ ಮಾರ್ಗ ಲಸಿಕೆ ಹಾಕಿಸುವುದಾಗಿದೆ.
ಈ ಹಿನ್ನೆಲೆಯಲ್ಲಿ ರೇಬೀಸ್ ರೋಗ ನಿಯಂತ್ರಣ ಕಾರ್ಯಕ್ರಮದಡಿ ಇದೇ ತಿಂಗಳ 24ರಂದು ಕಳಸ ಪಶು ಆಸ್ಪತ್ರೆಯಲ್ಲಿ, 25ರಂದು ಹೊರನಾಡು ಪಶು ಚಿಕಿತ್ಸಾಲಯದಲ್ಲಿ, 27ರಂದು ಹಿರೇಬೈಲು ಪಶು ಚಿಕಿತ್ಸಾ ಕೇಂದ್ರ, 28ರಂದು ಮರಸಣಿಗೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಉಚಿತ ರೇಬೀಸ್ ಲಸಿಕಾ ಅಭಿಯಾನ ನಡೆಯಲಿದೆ. ಈ ಅವಧಿಯಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1-00 ರವರೆಗೆ ಸಾಕು ನಾಯಿಗಳು ಹಾಗೂ ಬೆಕ್ಕುಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುತ್ತದೆ ಎಂದು ಪಶುವೈದ್ಯರಾದ ನಾಗೇಂದ್ರ ತಿಳಿಸಿದ್ದಾರೆ.
ವೈದ್ಯಾಧಿಕಾರಿಗಳ ಪ್ರಕಾರ, ಪ್ರತಿ ವರ್ಷವೂ ಈ ರೋಗದಿಂದ ಅನೇಕ ಪಶುಗಳು ಮತ್ತು ಕೆಲವು ಸಂದರ್ಭಗಳಲ್ಲಿ ಮಾನವರೂ ಸಾವನ್ನಪ್ಪುತ್ತಿರುವುದರಿಂದ, ಎಲ್ಲರೂ ತಮ್ಮ ಸಾಕು ಪ್ರಾಣಿಗಳಿಗೆ ಲಸಿಕೆ ಹಾಕಿಸಿಕೊಳ್ಳುವುದು ಅತಿ ಮುಖ್ಯವಾಗಿದೆ.
ಸಾರ್ವಜನಿಕರು ಈ ಉಚಿತ ಲಸಿಕಾ ಅಭಿಯಾನದ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದ್ದಾರೆ.

