ಕಳಸ ಲೈವ್ ವರದಿ
ಕಳಸದ ಸಾರ್ವಜನಿಕರಿಗೆ ಇಂದು ಬೆಳಿಗ್ಗೆ ಒಂದು ವಿಚಿತ್ರ ಅನುಭವವಾಯಿತು. ಕಳಸದ ಭದ್ರಾ ನದಿ ಪಾತ್ರದಲ್ಲಿ ಲಘು ವಿಮಾನವೊಂದು ಅತಿ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿದೆ ಹಾಗೂ ಇದೇ ವಿಮಾನ ಹಾಗೂ ಬಾಳೆಹೊನ್ನೂರು, ಖಾಂಡ್ಯ ಸುತ್ತಮುತ್ತಲಿನ ಕಾಫಿ ತೋಟಗಳ ಮೇಲೆಯೂ ಹಾರಾಟ ನಡೆಸಿದೆ.ಸ್ಥಳೀಯರಲ್ಲಿ ಅಚ್ಚರಿ ಮತ್ತು ಸಣ್ಣ ಮಟ್ಟದ ಆತಂಕಕ್ಕೆ ಕಾರಣವಾಯಿತು.
ಸಾಮಾನ್ಯವಾಗಿ ವಿಮಾನಗಳು ಮಲೆನಾಡಿನ ಗುಡ್ಡಗಾಡು ಪ್ರದೇಶಗಳಲ್ಲಿ ಇಷ್ಟು ಕೆಳಮಟ್ಟದಲ್ಲಿ ಸಂಚರಿಸುವುದು ವಿರಳ. ಆದರೆ, ಇಂದು ಬೆಳಿಗ್ಗೆ ಕಂಡುಬ0ದ ಈ ಸಣ್ಣ ವಿಮಾನವು ತೋಟಗಳ ಮರಗಳ ಮಟ್ಟಕ್ಕೆ ಹಾರುತ್ತಿರುವುದು ಕಂಡುಬ0ದಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಹಾಗೂ ತೋಟದ ಕಾರ್ಮಿಕರು ದಿಕ್ಕಾಪಾಲಾಗಿ ನೋಡುವಂತಾಯಿತು.
ಇದು ಭೂಗರ್ಭ ಸಮೀಕ್ಷೆಯೇ?
ಪ್ರಾಥಮಿಕ ಮೂಲಗಳ ಪ್ರಕಾರ ಮತ್ತು ಈ ಹಿಂದಿನ ಇಂತಹ ಘಟನೆಗಳನ್ನು ಗಮನಿಸಿದರೆ, ಇದು ರಾಷ್ಟ್ರೀಯ ಭೂಭೌತ ಸಂಶೋಧನಾ ಸಂಸ್ಥೆ (NGRI) ವತಿಯಿಂದ ನಡೆಸಲಾಗುತ್ತಿರುವ ವೈಮಾನಿಕ ಭೂಗರ್ಭ ಸಮೀಕ್ಷೆ ಇರಬಹುದೇ?
ಭೂಮಿಯ ಆಳದಲ್ಲಿರುವ ನೀರಿನ ಸೆಲೆ ಅಥವಾ ಖನಿಜ ಸಂಪತ್ತಿನ ಲಭ್ಯತೆಯನ್ನು ಪತ್ತೆಹಚ್ಚಲು ಈ ರೀತಿಯ ಹಾರಾಟ ನಡೆಸಲಾಗಿತ್ತೇ?
ಇಂತಹ ವಿಮಾನಗಳ ಕೆಳಭಾಗದಲ್ಲಿ ದೊಡ್ಡದಾದ ‘ರಿಂಗ್’ ಅಥವಾ ತಂತಿಗಳ0ತಹ ಸೆನ್ಸರ್ಗಳನ್ನು ಅಳವಡಿಸಲಾಗಿರುತ್ತದೆ. ಇದು ಭೂಮಿಯ ಒಳಗಿನ ಚಿತ್ರಣವನ್ನು ಸೆರೆಹಿಡಿಯುವ ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಆದರೆ ಈ ರೀತಿಯ ರಿಂಗ್ ಕಂಡು ಬಂದ ಹಾಗಿಲ್ಲ.ಹಾಗಾದರೆ ಇಷ್ಟೋಂದು ಕೆಲ ಮಟ್ಟದಲ್ಲಿ ಹಾರಾಟ ಯಾಕಿರಬಹುದು? ಭೂ ಸರ್ವೆ ಏನಾದರೂ ನಡೆಸಿತೇ? ಅನ್ನುವುದು ಸಾಕಷ್ಟು ಕುತೂಹಲ ಮಾಡಿಸಿದೆ.ಅಲ್ಲದೆ ಈ ವಿಮಾನವು ಎಲ್ಲಿಂದ ಬಂತು?ಎಲ್ಲಿ ಇಳಿಯಿತು?ಯಾಕಿಷ್ಟು ಕೆಲಮಟ್ಟದಲ್ಲಿ ಹಾರಿತು? ಯಾವುದರ ಮಾಹಿತಿಯೂ ಲಭ್ಯವಾಗಲಿಲ್ಲ.
ಈ ಹಾರಾಟವು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA) ಅನುಮತಿ ಪಡೆದೇ ನಡೆಯುತ್ತದೆಯಾದರೂ, ಈ ಬಗ್ಗೆ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಅಥವಾ ಅರಣ್ಯ ಇಲಾಖೆಗೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದಿರುವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ.
