ಕಳಸ ಲೈವ್ ವರದಿ
ಗ್ರಾಮ ಪಂಚಾಯಿತಿ ತೆರಿಗೆ ಪಾವತಿಸಲು ಸರ್ಕಾರವು ವಿಶೇಷ ರಿಯಾಯಿತಿ ಯೋಜನೆಯನ್ನು ಪ್ರಕಟಿಸಿದೆ. 2026-27ನೇ ಸಾಲಿನ ಆಸ್ತಿ ಮತ್ತು ನೀರಿನ ತೆರಿಗೆಯನ್ನು ನಿಗದಿತ ಅವಧಿಯೊಳಗೆ ಪಾವತಿಸುವ ಸಾರ್ವಜನಿಕರಿಗೆ ಒಟ್ಟು ಮೊತ್ತದಲ್ಲಿ ರಿಯಾಯಿತಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಸಕ್ತ ಆರ್ಥಿಕ ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿ, ಅಂದರೆ ಏಪ್ರಿಲ್ 1 ರಿಂದ ಜೂನ್ 30, 2026ರ ಒಳಗೆ ತಮ್ಮ ಗ್ರಾಮ ಪಂಚಾಯಿತಿಯ ಸಂಪೂರ್ಣ ತೆರಿಗೆಯನ್ನು ಏಕಕಾಲಕ್ಕೆ ಪಾವತಿಸುವ ನಾಗರಿಕರಿಗೆ ಶೇಕಡಾ 5ರಷ್ಟು ರಿಯಾಯಿತಿ (ಸಿಗಲಿದೆ.
ತೆರಿಗೆ ಪಾವತಿಯಲ್ಲಿ ವಿಳಂಬ ಮಾಡುವವರಿಗೆ ಇಲಾಖೆಯು ಎಚ್ಚರಿಕೆಯನ್ನೂ ನೀಡಿದೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡರೆ, ಅಂತಹ ಬಾಕಿ ಮೊತ್ತದ ಮೇಲೆ ಶೇಕಡಾ 5ರಷ್ಟು ಬಡ್ಡಿ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.
ಸಾರ್ವಜನಿಕರು ತೆರಿಗೆ ಪಾವತಿಸಲು ಕಚೇರಿಗೆ ಅಲೆಯುವ ಅಗತ್ಯವಿಲ್ಲದೆ ಡಿಜಿಟಲ್ ವೇದಿಕೆಗಳನ್ನು ಬಳಸಬಹುದಾಗಿದೆ:
ವೆಬ್ಸೈಟ್: https://bsk.karnataka.gov.inಮೂಲಕ ನೇರವಾಗಿ ಪಾವತಿಸಬಹುದು.
ಫೋನ್ ಪೇ, ಗೂಗಲ್ ಪೇ ಪೇಟಿಎಂ ನಂತಹ ಯಾವುದೇ ಯುಪಿಐ ಆಪ್ಗಳ ಮೂಲಕ ಮನೆಯಲ್ಲೇ ಕುಳಿತು ಸುಲಭವಾಗಿ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಹತ್ತಿರದ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಕೂಡ ಪಾವತಿಸಬಹುದಾಗಿದೆ.
ಗ್ರಾಮದ ಅಭಿವೃದ್ಧಿಗೆ ಸಹಕರಿಸಲು ಮತ್ತು ದಂಡದಿAದ ತಪ್ಪಿಸಿಕೊಳ್ಳಲು ನಾಗರಿಕರು ಈ ಕೂಡಲೇ ತೆರಿಗೆ ಪಾವತಿಸಿ ರಿಯಾಯಿತಿ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಪಂಚಾಯತ್ ರಾಜ್ ಇಲಾಖೆ ಮನವಿ.
