ಕಳಸ ಲೈವ್ ವರದಿ
ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಮೂಡಬಿದ್ರೆಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಗಸ್ತ್ಯ ಶೆಟ್ಟಿ ಅವರು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಕಾಲೇಜಿಗೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ.
ಪಿಸಿಎ0ಬಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಇವರು, ಒಟ್ಟು 600 ಅಂಕಗಳಿಗೆ 581 ಅಂಕಗಳನ್ನು ಪಡೆಯುವ ಮೂಲಕ ಶೇ. 96.8% ಫಲಿತಾಂಶ ದಾಖಲಿಸಿದ್ದಾರೆ.
ಅಗಸ್ತ್ಯ ಶೆಟ್ಟಿ ಅವರು ಕಳಸ ಅಗಸ್ತ್ಯ ಟ್ರೇಡರ್ಸ್ನ ಮಾಲೀಕರಾದ ಶುಭ ಶೆಟ್ಟಿ ಅವರ ಪುತ್ರರಾಗಿದ್ದಾರೆ.
