
ಕಳಸ ಲೈವ್ ವರದಿ
ಹತ್ತನೇ ತರಗತಿಯ ಫಲಿತಾಂಶದಲ್ಲಿ ಕಳಸ ತಾಲ್ಲೂಕಿನ ವಿವಿಧ ಶಾಲೆಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿವೆ. ಒಟ್ಟು ಐದು ಸರ್ಕಾರಿ ಶಾಲೆಗಳು ಹಾಗೂ ಮೂರು ಖಾಸಗಿ ಶಾಲೆಗಳು ಶೇ. 100ರಷ್ಟು ಫಲಿತಾಂಶ ದಾಖಲಿಸಿ ಸಾಧನೆ ಮಾಡಿವೆ.

ತಾಲ್ಲೂಕಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಬಾಳೆಹೊಳೆ, ಸಂಸೆ, ಹಿರೇಬೈಲು ಹಾಗೂ ಕುದುರೆಮುಖ ಸರ್ಕಾರಿ ಶಾಲೆಗಳು ನೂರಕ್ಕೆ ನೂರು ಫಲಿತಾಂಶ ಪಡೆದು ಗಮನ ಸೆಳೆದಿವೆ. ಅದೇ ರೀತಿ ಖಾಸಗಿ ಶಾಲೆಗಳಾದ ಕಳಸದ ಪ್ರಬೋಧಿನಿ ವಿದ್ಯಾ ಕೇಂದ್ರ, ಜೆ.ಇ.ಎಂ. ಆಂಗ್ಲ ಮಾಧ್ಯಮ ಶಾಲೆ ಹಾಗೂ ಹಿರೇಬೈಲು ಸೇಕ್ರಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಗಳು ಕೂಡ ಶೇ. 100ರಷ್ಟು ಸಾಧನೆಗೈದಿವೆ.


ಕಳಸ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶೇ 94 ಫಲಿತಾಂಶ ಬಂದಿದ್ದು, ಹೊರನಾಡು ಸರ್ಕಾರಿ ಶಾಲೆಯಲ್ಲಿ ಶೇ 92.85 ಫಲಿತಾಂಶ ಬಂದಿದೆ.
ಕಳಸ ಕೆಪಿಎಸ್ ಶಾಲೆಯಲ್ಲಿ 148 ವಿದ್ಯಾರ್ಥಿಗಳ ಪೈಕಿ 139 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಸನ್ನಿಧಿ ಡಿ.ಎನ್ 567, ಸ್ಕಂದ ಜಿ.ಎಸ್ 563 ಅಂಕಗಳನ್ನು ಪಡೆದುಕೊಂಡಿದ್ದಾರೆ. ಬಾಳೆಹೊಳೆ ಸರ್ಕಾರಿ ಶಾಲೆ 4 ವಿದ್ಯಾರ್ಥಿಗಳ ಪೈಕಿ ನಾಲ್ವರು ಉತ್ತೀರ್ಣರಾಗಿದ್ದು, 492 ಅಂಕ ಪಡೆದ ಪ್ರೇರಣಾ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕುದುರೆಮುಖ ಸರ್ಕಾರಿ ಶಾಲೆಯಲ್ಲಿ 7 ವಿದ್ಯಾರ್ಥಿಗಳ ಪೈಕಿ 7 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಹೇಮಾ 587 ಅಂಕ, ಆತ್ಮನಂದ 577 ಅಂಕಗಳನ್ನು ಪಡೆದಿದ್ದಾರೆ.ಹೊರನಾಡು ಸರ್ಕಾರಿ ಶಾಲೆಯಲ್ಲಿ 14 ವಿದ್ಯಾರ್ಥಿಗಳ ಪೈಕಿ 13 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕೃತಿ 527 ಅಂಕವನ್ನು ಪಡೆದಿದ್ದಾರೆ.ಸಂಸೆ ಸರ್ಕಾರಿ ಶಾಲೆಯಲ್ಲಿ 14 ವಿದ್ಯಾರ್ಥಿಗಳ ಪೈಕಿ 14 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಆಶ್ರಯ್ ಜೈನ್ 535 ಅಂಕಗಳನ್ನು ಪಡೆದುಕೊಂಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ34 ವಿದ್ಯಾರ್ಥಿಗಳ ಪೈಕಿ 34 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಅಂಕಿತ ಕೆ.ಆರ್ 615, ಸಾಕ್ಷಿ ಕೆ.ಆರ್ 579 ಅಂಕಗಳನ್ನು ಪಡೆದುಕೊಂಡಿದ್ದಾರೆ.

ಪ್ರಬೋದಿನಿü ವಿದ್ಯಾ ಕೇಂದ್ರದಲ್ಲಿ 45 ವಿದ್ಯಾರ್ಥಿಗಳ ಪೈಕಿ 45 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಆಶ್ರಿತಾ ರೈ 602, ಶ್ರೀನಿವಾಸ 599, ಆದಿತ್ಯ 576 ಅಂಕಗಳನ್ನು ಪಡೆದುಕೊಂಡಿದ್ದಾರೆ. ಜೆಇಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ 54 ವಿದ್ಯಾರ್ಥಿಗಳ ಪೈಕಿ 54 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಸಿದ್ದಾಂತ್ ಪ್ರಭು 619, ಅರುಷಿ ಹೆಬ್ಬಾರ್ 607, ಅರ್ಹನ್ 601 ಅಂಕಗಳನ್ನು ಪಡೆದುಕೊಂಡಿದ್ದಾರೆ.ಹಿರೇಬೈಲು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 34 ವಿದ್ಯಾರ್ಥಿಗಳ ಪೈಕಿ 34 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಸಂಚಿತ 604, ತೃಷ 598, ದೀನವಿ 584 ಅಂಕಗಳನ್ನು ಪಡೆದುಕೊಂಡಿದ್ದಾರೆ.




