
ಕಳಸ ಲೈವ್ ವರದಿ
ಎಸ್ಎಸ್ಎಲ್ಸಿ ಅಥವಾ ಪಿಯುಸಿ ನಂತರ ಮುಂದೇನು ಎಂದು ಚಿಂತಿಸುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ಪೋಷಕರಿಗೆ ಭರವಸೆಯ ಬೆಳಕಾಗಿ ಮೂಡಿಬಂದಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ. (ITI)ಸಂಸೆ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಈ ಸಂಸ್ಥೆಯಲ್ಲಿ ಪ್ರವೇಶಾತಿ ಪ್ರಕ್ರಿಯೆ ಇದೀಗ ಚಾಲನೆಗೊಂಡಿದೆ.
ಉದ್ಯೋಗದ ಖಾತರಿ ಮತ್ತು ಆರ್ಥಿಕ ನೆರವು
ಸಂಸ್ಥೆಯು ಕೇವಲ ಶಿಕ್ಷಣ ನೀಡುವುದಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಡುತ್ತಿದೆ.

ಈ ಸಂಸ್ಥೆಯ ವಿಶೇಷತೆಗಳೆಂದರೆ:
ವಿದ್ಯಾರ್ಥಿ ವೇತನ: ಪ್ರಸಕ್ತ ಸಾಲಿನಲ್ಲಿ 60 ವಿದ್ಯಾರ್ಥಿಗಳಿಗೆ ಮಾಸಿಕ ₹1,000 ರಂತೆ, ಎರಡು ವರ್ಷಗಳ ಅವಧಿಗೆ ಒಟ್ಟು ₹20,000 ವಿದ್ಯಾರ್ಥಿ ವೇತನ ನೀಡಿ ಗ್ರಾಮೀಣ ವಿದ್ಯಾರ್ಥಿಗಳ ಆರ್ಥಿಕ ಹೊರೆಯನ್ನು ತಗ್ಗಿಸಲಾಗುತ್ತಿದೆ.
ಆಕರ್ಷಕ ವೇತನದೊಂದಿಗೆ ಕೆಲಸ: ಸಂಸ್ಥೆಯ ವಿದ್ಯಾರ್ಥಿಗಳು ಈಗಾಗಲೇ ವಾರ್ಷಿಕ ₹2,40,000ಕ್ಕೂ ಅಧಿಕ ವೇತನದೊಂದಿಗೆ ವಿವಿಧ ಪ್ರತಿಷ್ಠಿತ ಕಂಪನಿಗಳಿಗೆ ಆಯ್ಕೆಯಾಗಿದ್ದು, ಜುಲೈ ಪರೀಕ್ಷೆಯ ನಂತರ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಶೇ. 100 ರಷ್ಟು ಉದ್ಯೋಗಾವಕಾಶ: ಇಲ್ಲಿ ತರಬೇತಿ ಪಡೆದವರು ವೋಲ್ವೋ, ಮಾರುತಿ ಸುಜುಕಿ, ಟಾಟಾ, ಇಸ್ರೋ, ರೈಲ್ವೆ ಮತ್ತು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ.

ಲಭ್ಯವಿರುವ ಕೋರ್ಸ್ಗಳು
ಇಲೆಕ್ಟ್ರೀಷಿಯನ್ (2 ವರ್ಷ)
ಫಿಟ್ಟರ್ (2 ವರ್ಷ)
ಮೆಕ್ಯಾನಿಕ್ ಮೋಟಾರು ವಾಹನ (2 ವರ್ಷ)
ಎಲೆಕ್ಟ್ರಾನಿಕ್ ಮೆಕ್ಯಾನಿಕ್ (2 ವರ್ಷ)
ಮೆಕ್ಯಾನಿಕ್ ಡೀಸೆಲ್ (1 ವರ್ಷ)
ವೆಲ್ಡರ್ (MIG & TIG) (1 ವರ್ಷ)

ಸಂಸ್ಥೆಯ ಪ್ರಮುಖ ವೈಶಿಷ್ಟ್ಯಗಳು
ಅನುಭವಸ್ಥ ಬೋಧಕ ವರ್ಗ ಮತ್ತು ಸುಸಜ್ಜಿತ ಪ್ರಾಯೋಗಿಕ ಕಾರ್ಯಗಾರ.
ಬಾಲಕರಿಗೆ ಸುಸಜ್ಜಿತ ವಸತಿ ನಿಲಯ ಮತ್ತು ಮೆಸ್ ವ್ಯವಸ್ಥೆ.
ಕಂಪ್ಯೂಟರ್ ಶಿಕ್ಷಣ, ವಾಹನ ಚಾಲನಾ ತರಬೇತಿ ಮತ್ತು ಮಲ್ಟಿಸ್ಕಿಲ್ ತರಬೇತಿ.
ಪ್ರತಿ ತಿಂಗಳು ಮಾಸಿಕ ಪರೀಕ್ಷೆ ಹಾಗೂ ಎಸ್ಎಂಎಸ್ ಮೂಲಕ ಪೋಷಕರಿಗೆ ಪ್ರಗತಿ ವರದಿ.
ಸ್ವಯಂ ಉದ್ಯೋಗಕ್ಕೆ ವಿಶೇಷ ಉತ್ತೇಜನ ಮತ್ತು ಕೈಗಾರಿಕಾ ಭೇಟಿ ಸೌಲಭ್ಯ.
ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿರುವ ಈ ಸಂಸ್ಥೆಯು, ಎಸ್ಎಸ್ಎಲ್ಸಿ ಪಾಸಾದ ಅಥವಾ ಪಿಯುಸಿಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಉತ್ತಮ ಜೀವನ ಕೌಶಲ ಕಲಿಸುವ ಮೂಲಕ ಸ್ವಾವಲಂಬಿ ಜೀವನಕ್ಕೆ ದಾರಿದೀಪವಾಗಿದೆ. ಸೀಮಿತ ಸೀಟುಗಳ ಅವಕಾಶವಿರುವುದರಿಂದ ಆಸಕ್ತ ವಿದ್ಯಾರ್ಥಿಗಳು ಕೂಡಲೇ ಸಂಸ್ಥೆಯನ್ನು ಸಂಪರ್ಕಿಸಲು ಪ್ರಕಟಣೆ ಕೋರಿದೆ.

ಸಂಪರ್ಕಿಸಿ:
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐ.ಟಿ.ಐ. ಸಂಸ್ಥೆ, ಸಂಸೆ, ಕಳಸ ತಾಲ್ಲೂಕು.
ದೂರವಾಣಿ: 9449927748, 9480299119, 8277062100, 9449497618
