Kalasa live https://www.kalasalive.com/ news & views of Kalasa Fri, 23 Jan 2026 15:29:57 +0000 en-US hourly 1 https://wordpress.org/?v=6.8.3 https://www.kalasalive.com/wp-content/uploads/2022/04/cropped-kl-5-32x32.png Kalasa live https://www.kalasalive.com/ 32 32 ಕಳಸದ ಶಿವಾನಂದ್‌ಗೆ ದಕ್ಷಿಣ ಭಾರತ ಮಟ್ಟದ ವಿಜ್ಞಾನ ಮೇಳದಲ್ಲಿ ತೃತೀಯ ಸ್ಥಾನ: ಕಳಸ ಕೆ.ಪಿ.ಎಸ್ ಶಾಲೆಗೆ ಕೀರ್ತಿ https://www.kalasalive.com/?p=9605 https://www.kalasalive.com/?p=9605#respond Fri, 23 Jan 2026 15:29:57 +0000 https://www.kalasalive.com/?p=9605 ಕಳಸ ಲೈವ್ ವರದಿ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಸಾಧನೆಯ ಕಿರೀಟಕ್ಕೆ ಮತ್ತೊಂದು ಹೆಮ್ಮೆಯ ಗರಿ ಇಂದು ಸೇರ್ಪಡೆಯಾಗಿದೆ. ಶಾಲೆಯ 10ನೇ ತರಗತಿಯ

The post ಕಳಸದ ಶಿವಾನಂದ್‌ಗೆ ದಕ್ಷಿಣ ಭಾರತ ಮಟ್ಟದ ವಿಜ್ಞಾನ ಮೇಳದಲ್ಲಿ ತೃತೀಯ ಸ್ಥಾನ: ಕಳಸ ಕೆ.ಪಿ.ಎಸ್ ಶಾಲೆಗೆ ಕೀರ್ತಿ appeared first on Kalasa live.

]]>

ಕಳಸ ಲೈವ್ ವರದಿ
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಸಾಧನೆಯ ಕಿರೀಟಕ್ಕೆ ಮತ್ತೊಂದು ಹೆಮ್ಮೆಯ ಗರಿ ಇಂದು ಸೇರ್ಪಡೆಯಾಗಿದೆ. ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಶಿವಾನಂದ್ ದಕ್ಷಿಣ ಭಾರತ ಮಟ್ಟದ ವಿಜ್ಞಾನ ಮೇಳದಲ್ಲಿ ತನ್ನ ವೈಜ್ಞಾನಿಕ ಮಾದರಿಗಾಗಿ ಮೂರನೇ ಸ್ಥಾನ ಗಳಿಸಿ ಕಳಸ ಹಾಗೂ ಶಾಲೆಯ ಹೆಸರು ಬೆಳಗಿಸಿದ್ದಾರೆ.
ಜಿಲ್ಲಾ ಹಾಗೂ ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನಗಳಲ್ಲಿ ಬಹುಮಾನ ಪಡೆದು ಆಯ್ಕೆಯಾದ ಶಿವಾನಂದ್, ತೆಲಂಗಾಣದಲ್ಲಿ ಶುಕ್ರವಾರ ಮುಕ್ತಾಯವಾದ ದಕ್ಷಿಣ ಭಾರತ ಮಟ್ಟದ ವಿಜ್ಞಾನ ಮೇಳದಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಪ್ರದರ್ಶಿಸಿದ ಕಾಳುಮೆಣಸಿನ ಫಸಲು ಕೊಯ್ಯುವ ಸಾಧನವನ್ನು ಆಧುನಿಕ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಿದ ಮಾದರಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು.
ಸಾ0ಪ್ರದಾಯಿಕ ಕೃಷಿ ವಿಧಾನಗಳಲ್ಲಿ ರೈತರು ಎದುರಿಸುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಕಾಳುಮೆಣಸು ಕೊಯ್ಯುವ ಪ್ರಕ್ರಿಯೆಯನ್ನು ಸುಲಭ, ಸಮಯ ಉಳಿತಾಯ ಹಾಗೂ ಕಡಿಮೆ ಶ್ರಮದಾಯಕವಾಗಿಸುವ ಉದ್ದೇಶದಿಂದ ಈ ಮಾದರಿಯನ್ನು ರೂಪಿಸಲಾಗಿದೆ. ವಿಜ್ಞಾನ ಮೇಳದಲ್ಲಿ ಶಿವಾನಂದ್ ತಮ್ಮ ಮಾದರಿಯ ಕಾರ್ಯವಿಧಾನವನ್ನು ಸ್ಪಷ್ಟವಾಗಿ ವಿವರಿಸಿ ಗಮನ ಸೆಳೆದರು.
ಈ ಸಾಧನೆಯ ಹಿಂದೆ ಕಳಸ ಕೆಪಿಎಸ್ ಶಾಲೆಯ ಅಟಲ್ ಟಿಂಕರಿAಗ್ ಲ್ಯಾಬ್ ಹಾಗೂ ಅದರ ಮಾರ್ಗದರ್ಶಕ ಶಿಕ್ಷಕ ಸಂದೇಶ್ ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಪ್ರಮುಖ ಪಾತ್ರ ವಹಿಸಿದೆ. ವಿದ್ಯಾರ್ಥಿಗಳಲ್ಲಿನ ವೈಜ್ಞಾನಿಕ ಚಿಂತನೆ ಹಾಗೂ ನವೋದ್ಯಮ ಮನೋಭಾವ ಬೆಳೆಸುವಲ್ಲಿ ಅಟಲ್ ಟಿಂಕರಿ0ಗ್ ಲ್ಯಾಬ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಈ ಸಾಧನೆ ಸಾಕ್ಷಿಯಾಗಿದೆ.
ಶಿವಾನಂದ್ ಮತ್ತು ಮಾರ್ಗದರ್ಶಕ ಶಿಕ್ಷಕ ಸಂದೇಶ್ ಅವರ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ, ಪೋಷಕರು ಹಾಗೂ ಕಳಸದ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಾಧನೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ

The post ಕಳಸದ ಶಿವಾನಂದ್‌ಗೆ ದಕ್ಷಿಣ ಭಾರತ ಮಟ್ಟದ ವಿಜ್ಞಾನ ಮೇಳದಲ್ಲಿ ತೃತೀಯ ಸ್ಥಾನ: ಕಳಸ ಕೆ.ಪಿ.ಎಸ್ ಶಾಲೆಗೆ ಕೀರ್ತಿ appeared first on Kalasa live.

]]>
https://www.kalasalive.com/?feed=rss2&p=9605 0
ರಾಜ್ಯ ಮಟ್ಟದ ಸೌಂದರ್ಯ ಸ್ಪರ್ಧೆ: ‘ಮಿಸ್ಟರ್ ಮತ್ತು ಮಿಸಸ್ ಕನ್ನಡಿಗ’ ಕಿರೀಟ ಮುಡಿಗೇರಿಸಿಕೊಂಡ ಪ್ರತಿಭೆಗಳು https://www.kalasalive.com/?p=9595 https://www.kalasalive.com/?p=9595#respond Fri, 23 Jan 2026 08:25:44 +0000 https://www.kalasalive.com/?p=9595 ಕಳಸ ಲೈವ್ ವರದಿ ಕ್ರಿಯೇಟಿವ್ ಮೋಡೆಲ್ ಮತ್ತು ಮ್ಯಾನೆಜ್‌ಮೆಂಟ್, ಕಳಸ ಇವರ ವತಿಯಿಂದ ರಾಜ್ಯ ಮಟ್ಟದ ಬೃಹತ್ ಸೌಂದರ್ಯ ಸ್ಪರ್ಧೆ ಮೂರು ದಿನಗಳ ಕಾಲ

The post ರಾಜ್ಯ ಮಟ್ಟದ ಸೌಂದರ್ಯ ಸ್ಪರ್ಧೆ: ‘ಮಿಸ್ಟರ್ ಮತ್ತು ಮಿಸಸ್ ಕನ್ನಡಿಗ’ ಕಿರೀಟ ಮುಡಿಗೇರಿಸಿಕೊಂಡ ಪ್ರತಿಭೆಗಳು appeared first on Kalasa live.

]]>

ಕಳಸ ಲೈವ್ ವರದಿ
ಕ್ರಿಯೇಟಿವ್ ಮೋಡೆಲ್ ಮತ್ತು ಮ್ಯಾನೆಜ್‌ಮೆಂಟ್, ಕಳಸ ಇವರ ವತಿಯಿಂದ ರಾಜ್ಯ ಮಟ್ಟದ ಬೃಹತ್ ಸೌಂದರ್ಯ ಸ್ಪರ್ಧೆ ಮೂರು ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು. ರಾಜ್ಯದ ನಾನಾ ಜಿಲ್ಲೆಗಳಿಂದ ಐವತ್ತಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ, ತಮ್ಮ ವ್ಯಕ್ತಿತ್ವ, ಆತ್ಮವಿಶ್ವಾಸ, ಪ್ರತಿಭೆ ಹಾಗೂ ವೇದಿಕೆ ಮೇಲಿನ ಪ್ರಸ್ತುತಿಕರಣದ ಮೂಲಕ ಪ್ರೇಕ್ಷಕರ ಗಮನ ಸೆಳೆದರು.
ಸ್ಪರ್ಧೆಯ ಮೊದಲ ಎರಡು ದಿನಗಳಲ್ಲಿ ವಿವಿಧ ಹಂತದ ರೌಂಡ್‌ಗಳು ನಡೆದಿದ್ದು, ಪರಿಚಯ ಸುತ್ತು, ಪ್ರತಿಭಾ ಪ್ರದರ್ಶನ, ಹಾಗೂ ರ್ಯಾಂಪ್ ವಾಕ್ ಸುತ್ತುಗಳು ಸ್ಪರ್ಧೆಗೆ ವಿಶೇಷ ಮೆರುಗು ನೀಡಿದವು. ಅಂತಿಮ ದಿನ ನಡೆದ ಫೈನಲ್ ಹಂತದಲ್ಲಿ ತೀರ್ಪುಗಾರರು ಸ್ಪರ್ಧಿಗಳ ಆತ್ಮವಿಶ್ವಾಸ, ಸಂವಹನ ಸಾಮರ್ಥ್ಯ, ಸಂಸ್ಕೃತಿ ಅರಿವು ಹಾಗೂ ಒಟ್ಟು ವ್ಯಕ್ತಿತ್ವವನ್ನು ಆಧರಿಸಿ ವಿಜೇತರನ್ನು ಆಯ್ಕೆ ಮಾಡಿದರು.
ಫೈನಲ್ ಫಲಿತಾಂಶದ0ತೆ ಮಿಸ್ಟರ್ ಕನ್ನಡಿಗ ವಿಭಾಗದಲ್ಲಿ ವೇಣು ವಿನ್ನರ್ ಆಗಿ ಆಯ್ಕೆಯಾಗಿದ್ದು, ಸುದೀಪ್ ಮೊದಲನೇ ರನ್ನರ್ ಅಪ್ ಹಾಗೂ ರಾಯಲ್ ಕಾರ್ಲೋ ಎರಡನೇ ರನ್ನರ್ ಅಪ್ ಸ್ಥಾನ ಪಡೆದರು. ಮಿಸಸ್ ಕನ್ನಡತಿ ವಿಭಾಗದಲ್ಲಿ ಅನನ್ಯ ವಿನ್ನರ್ ಆಗಿ ಹೊರಹೊಮ್ಮಿದರೆ, ಜನಿತ ಮೊದಲನೇ ರನ್ನರ್ ಅಪ್ ಮತ್ತು ಸುಮ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು.
ಟೀನ್ ಕನ್ನಡಿಗ ವಿಭಾಗದಲ್ಲಿ ದೀಪಕ್ ವಿನ್ನರ್ ಆಗಿ, ಚೇತನ್ ಮೊದಲನೇ ರನ್ನರ್ ಅಪ್ ಹಾಗೂ ಗೌತಮ್ ಎರಡನೇ ರನ್ನರ್ ಅಪ್ ಸ್ಥಾನ ಗಳಿಸಿದರು. ಟೀನ್ ಕನ್ನಡತಿ ವಿಭಾಗದಲ್ಲಿ ಜೀವಿತ ವಿನ್ನರ್, ಶ್ವೇತ
ಮೊದಲನೇ ರನ್ನರ್ ಅಪ್ ಮತ್ತು ಮಾನ್ಯತಾ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು.
ಇನ್ನು ಮಿಸ್ಸಸ್ ಪ್ರಿನ್ಸಸ್ ವಿಭಾಗದಲ್ಲಿ ಆರೋಹಿ ವಿನ್ನರ್ ಆಗಿ ಹೊರಹೊಮ್ಮಿದರೆ, ಇಷ್ಟ ಮೊದಲನೇ ರನ್ನರ್ ಅಪ್ ಮತ್ತು ಸಾನ್ವಿ ಎರಡನೇ ರನ್ನರ್ ಅಪ್ ಸ್ಥಾನ ಪಡೆದರು. ಮಿಸ್ಟರ್ ಪ್ರಿನ್ಸ್ ವಿಭಾಗದಲ್ಲಿ ಮೋಕ್ಷ ಜೈನ್ ವಿನ್ನರ್ ಆಗಿ, ರಾಯನ್ ಮೊದಲನೇ ರನ್ನರ್ ಅಪ್ ಹಾಗೂ ಭುವನ್ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು.
ಸಮಾರಂಭದಲ್ಲಿ ಕ್ರಿಯೇಟಿವ್ ಮೋಡೆಲ್ ಮತ್ತು ಮ್ಯಾನೆಜ್‌ಮೆಂಟ್ ಸಿಇಒ ಚೇತನ್ ಮಾತನಾಡಿ, “ಗ್ರಾಮೀಣ ಹಾಗೂ ನಗರ ಪ್ರದೇಶದ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುವುದು ನಮ್ಮ ಉದ್ದೇಶ. ಇಂತಹ ಸ್ಪರ್ಧೆಗಳು ಯುವಕರ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಅವರೊಳಗಿನ ಪ್ರತಿಭೆಯನ್ನು ಹೊರತರುತ್ತವೆ” ಎಂದು ಹೇಳಿದರು. ಶೋ ಡೈರೆಕ್ಟರ್ ಶ್ರದ್ಧಾ ಮಂಜುನಾಥ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪ್ರಜ್ವಲ್ ಸೇರಿದಂತೆ ಸಂಸ್ಥೆಯ ಸದಸ್ಯರು, ತೀರ್ಪುಗಾರರು, ಅತಿಥಿಗಳು ಹಾಗೂ ಅಪಾರ ಸಂಖ್ಯೆಯ ಪ್ರೇಕ್ಷಕರು ಉಪಸ್ಥಿತರಿದ್ದು, ವಿಜೇತರಿಗೆ ಕಿರೀಟ, ಟ್ರೋಫಿ ಹಾಗೂ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಯಿತು. ಸ್ಪರ್ಧೆಯ ಯಶಸ್ವಿ ಆಯೋಜನೆಯಿಂದ ಕಳಸದಲ್ಲಿ ರಾಜ್ಯ ಮಟ್ಟದ ಸೌಂದರ್ಯ ಸ್ಪರ್ಧೆಗೆ ಹೊಸ ಆಯಾಮ ಸಿಕ್ಕಂತಾಯಿತು.

The post ರಾಜ್ಯ ಮಟ್ಟದ ಸೌಂದರ್ಯ ಸ್ಪರ್ಧೆ: ‘ಮಿಸ್ಟರ್ ಮತ್ತು ಮಿಸಸ್ ಕನ್ನಡಿಗ’ ಕಿರೀಟ ಮುಡಿಗೇರಿಸಿಕೊಂಡ ಪ್ರತಿಭೆಗಳು appeared first on Kalasa live.

]]>
https://www.kalasalive.com/?feed=rss2&p=9595 0
ಕಳಸದ ಮುನ್ನೂರ್ ಪಾಲ್ ಕುಟುಂಬದಲ್ಲಿ ‘ಸೂತಕ ಕೈಬಿಡುವ’ ಐತಿಹಾಸಿಕ ನಿರ್ಣಯ: 9 ಪ್ರತ್ಯೇಕ ಕುಟುಂಬಗಳಾಗಿ ವಿಂಗಡಣೆ https://www.kalasalive.com/?p=9590 https://www.kalasalive.com/?p=9590#respond Fri, 23 Jan 2026 07:55:15 +0000 https://www.kalasalive.com/?p=9590 ಕಳಸ ಲೈವ್ ವರದಿ ತಾಲ್ಲೂಕಿನ ಸುಪ್ರಸಿದ್ಧ ಮತ್ತು ಬೃಹತ್ ಕುಟುಂಬಗಳಲ್ಲಿ ಒಂದಾದ ಕಳಸದ ‘ಮುನ್ನೂರ್ ಪಾಲ್’ ಕುಟುಂಬವು, ಕಾಲಧರ್ಮ ಹಾಗೂ ಪ್ರಾಯೋಗಿಕ ಅಡಚಣೆಗಳ ಹಿನ್ನೆಲೆಯಲ್ಲಿ

The post ಕಳಸದ ಮುನ್ನೂರ್ ಪಾಲ್ ಕುಟುಂಬದಲ್ಲಿ ‘ಸೂತಕ ಕೈಬಿಡುವ’ ಐತಿಹಾಸಿಕ ನಿರ್ಣಯ: 9 ಪ್ರತ್ಯೇಕ ಕುಟುಂಬಗಳಾಗಿ ವಿಂಗಡಣೆ appeared first on Kalasa live.

]]>

ಕಳಸ ಲೈವ್ ವರದಿ
ತಾಲ್ಲೂಕಿನ ಸುಪ್ರಸಿದ್ಧ ಮತ್ತು ಬೃಹತ್ ಕುಟುಂಬಗಳಲ್ಲಿ ಒಂದಾದ ಕಳಸದ ‘ಮುನ್ನೂರ್ ಪಾಲ್’ ಕುಟುಂಬವು, ಕಾಲಧರ್ಮ ಹಾಗೂ ಪ್ರಾಯೋಗಿಕ ಅಡಚಣೆಗಳ ಹಿನ್ನೆಲೆಯಲ್ಲಿ ಪರಸ್ಪರ ಕುಟುಂಬಗಳ ನಡುವಿನ ಸೂತಕವನ್ನು ಶಾಸ್ತ್ರೋಕ್ತವಾಗಿ ಕೈಬಿಡುವ ಮಹತ್ವದ ನಿರ್ಣಯವನ್ನು ಕೈಗೊಂಡಿದೆ.
ಸುಮಾರು 72ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಈ ದೊಡ್ಡ ಕುಟುಂಬದಲ್ಲಿ ವರ್ಷಕ್ಕೆ ಸರಾಸರಿ 95ಕ್ಕೂ ಹೆಚ್ಚು ವೈದೀಕ ಕಾರ್ಯಗಳು (ಮರಣ ಸಂಬ0ಧಿ ಕಾರ್ಯಗಳು) ನಡೆಯುತ್ತಿದ್ದವು. ವರ್ಷದ ಎಲ್ಲಾ ಮಾಸ ಹಾಗೂ ಪಕ್ಷಗಳಲ್ಲೂ ವೈದೀಕಗಳು ಇರುತ್ತಿದ್ದರಿಂದ, ಶಾಸ್ತ್ರೋಕ್ತವಾಗಿ ಒಂದು ಪಕ್ಷ ಬಿಟ್ಟು ಶುಭ ಕಾರ್ಯಗಳನ್ನು ನಡೆಸಲು ಕುಟುಂಬದ ಸದಸ್ಯರಿಗೆ ಸಾಧ್ಯವಾಗುತ್ತಿರಲಿಲ್ಲ.
ವೈದೀಕಗಳ ಜೊತೆಗೆ ವಾರದ ಮಂಗಳವಾರ, ಶನಿವಾರಗಳು, ಅಮಾವಾಸ್ಯೆ-ಹುಣ್ಣಿಮೆ, ಭರಣಿ-ಕೃತ್ತಿಕೆ ನಕ್ಷತ್ರಗಳು, ಆಷಾಢ, ಶೂನ್ಯ ಹಾಗೂ ಅಧಿಕ ಮಾಸಗಳನ್ನೆಲ್ಲಾ ಲೆಕ್ಕ ಹಾಕಿದರೆ ವರ್ಷದ 365 ದಿನಗಳಲ್ಲಿ ಸುಮಾರು 300 ದಿನಗಳು ಯಾವುದೇ ಶುಭ ಕಾರ್ಯಕ್ಕೆ ಲಭ್ಯವಿರುತ್ತಿರಲಿಲ್ಲ. ಇದರಿಂದಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಗಣಪತಿ ಹಬ್ಬ, ದೀಪಾವಳಿಯಂತಹ ಹಬ್ಬಗಳನ್ನು ಆಚರಿಸಲು ಅಸಾಧ್ಯವಾಗಿತ್ತು. ಅಲ್ಲದೆ, ಕುಟುಂಬವು ಅತೀ ದೊಡ್ಡದಾಗಿ ಬೆಳೆದಿದ್ದರಿಂದ ಮೂರನೇ ತಲೆಮಾರಿನ ನಂತರದ ಸಂಬ0ಧಗಳ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇರಲಿಲ್ಲ.
ಈ ಎಲ್ಲ ಸಮಸ್ಯೆಗಳನ್ನು ಚರ್ಚಿಸಲು ದಿನಾಂಕ 10.01.2026 ರ ಶನಿವಾರದಂದು ಕುಟುಂಬದ ಕುಲಪುರೋಹಿತರ ನೇತೃತ್ವದಲ್ಲಿ ಸಮಸ್ತ ಕುಟುಂಬದ ಸದಸ್ಯರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ತಲೆಮಾರುಗಳ ಅನ್ವಯ ಕುಟುಂಬವನ್ನು ಒಂಬತ್ತು ಭಾಗಗಳಾಗಿ ಪ್ರತ್ಯೇಕಿಸಿ, ಆ ಗುಂಪುಗಳ ನಡುವೆ ಇನ್ನು ಮುಂದೆ ಸೂತಕವನ್ನು ಪಾಲಿಸದಿರಲು ತೀರ್ಮಾನಿಸಲಾಯಿತು.
ದಿ. ಚಂದ್ರಶೇಖರಯ್ಯನವರ ಕುಟುಂಬ, ಹೊಸಳ್ಳಿ. ದಿ. ಅಣ್ಣಪ್ಪಯ್ಯನವರ ಕುಟುಂಬ, ಜಾವಳಿ. ದಿ. ವೆಂಕಪ್ಪಯ್ಯನವರ ಕುಟುಂಬ, ಹೆಕ್ಸಾರ್. ದಿ. ರಾಮಚಂದ್ರಯ್ಯನವರ ಕುಟುಂಬ, ಕಣದಮನೆ. ದಿ. ರಂಗಯ್ಯನವರ ಕುಟುಂಬ, ಮೇಲ್ಮನ್ಚಾಡಿ. ದಿ. ಅನಂತಯ್ಯನವರ ಕುಟುಂಬ, ಅಂಬಿನಕುಡಿಗೆ. ದಿ. ತಿಪ್ಪಯ್ಯನವರ ಕುಟುಂಬ, ಕವಿಲುಹೊಳೆ. ದಿ. ಕೃಷ್ಣದೇವರಯ್ಯನವರ ಕುಟುಂಬ, ಮುನ್ನೂರ್ ಪಾಲ್, ಹಾಸಂಗಿ, ಮೆಗೂರು. ದಿ. ನಾರಾಣಪ್ಪಯ್ಯನವರ ಕುಟುಂಬ, ಮುನ್ನೂರ್ ಪಾಲ್.
ಈ ನಿರ್ಧಾರದಂತೆ, ಕಳೆದ ಜನವರಿ 15ರ ಮಕರ ಸಂಕ್ರಾ0ತಿಯ ಶುಭ ದಿನದಂದು ಮೇಗೂರು ಶ್ರೀ ಲಕ್ಷ್ಮೀ ವೆಂಕಟರಮಣ ಸನ್ನಿಧಾನದಲ್ಲಿ ವಿಶೇಷ ಪೂಜೆ ಹಾಗೂ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕುಲಪುರೋಹಿತರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದ ನೇತೃತ್ವವನ್ನು ಪ್ರಮೋದ್ ಭಾರತೀಪುರ, ಅ.ರಾ. ಸತೀಶ್ಚಂದ್ರ ಅಂಬಿನಕುಡಿಗೆ ಹಾಗೂ ಗೀತಾ ಮಕ್ಕಿಮನೆ ವಹಿಸಿದ್ದರು.
ಈ ನಿರ್ಧಾರದಿಂದಾಗಿ ಮುಂದಿನ ದಿನಗಳಲ್ಲಿ ಕುಟುಂಬದ ಪ್ರತ್ಯೇಕಗೊಂಡ ಶಾಖೆಗಳು ತಮ್ಮ ಶುಭ ಕಾರ್ಯಗಳನ್ನು ಹಾಗೂ ಹಬ್ಬ ಹರಿದಿನಗಳನ್ನು ಯಾವುದೇ ಅಡೆತಡೆಯಿಲ್ಲದೆ ಆಚರಿಸಲು ಅನುಕೂಲವಾದಂತಾಗಿದೆ.

The post ಕಳಸದ ಮುನ್ನೂರ್ ಪಾಲ್ ಕುಟುಂಬದಲ್ಲಿ ‘ಸೂತಕ ಕೈಬಿಡುವ’ ಐತಿಹಾಸಿಕ ನಿರ್ಣಯ: 9 ಪ್ರತ್ಯೇಕ ಕುಟುಂಬಗಳಾಗಿ ವಿಂಗಡಣೆ appeared first on Kalasa live.

]]>
https://www.kalasalive.com/?feed=rss2&p=9590 0
ಶಾಸಕಿ ನಯನ ಮೋಟಮ್ಮ ಅವರಿಂದ ಕಳಸ ತಾಲ್ಲೂಕಿನಲ್ಲಿ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಗುದ್ದಲಿ ಪೂಜೆ https://www.kalasalive.com/?p=9585 https://www.kalasalive.com/?p=9585#respond Wed, 21 Jan 2026 11:26:40 +0000 https://www.kalasalive.com/?p=9585 ಕಳಸ ಲೈವ್ ವರದಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ. ಕಳೆದ ಎರಡು ವರ್ಷಗಳಲ್ಲಿ ಕಳಸ ತಾಲ್ಲೂಕಿಗೆ ಸುಮಾರು 100 ಕೋಟಿ ರೂ.

The post ಶಾಸಕಿ ನಯನ ಮೋಟಮ್ಮ ಅವರಿಂದ ಕಳಸ ತಾಲ್ಲೂಕಿನಲ್ಲಿ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಗುದ್ದಲಿ ಪೂಜೆ appeared first on Kalasa live.

]]>


ಕಳಸ ಲೈವ್ ವರದಿ
ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ. ಕಳೆದ ಎರಡು ವರ್ಷಗಳಲ್ಲಿ ಕಳಸ ತಾಲ್ಲೂಕಿಗೆ ಸುಮಾರು 100 ಕೋಟಿ ರೂ. ಅನುದಾನ ತರುವ ಮೂಲಕ ಮೂಲಭೂತ ಸೌಲಭ್ಯಗಳ ಕ್ರಾಂತಿ ಮಾಡಲಾಗಿದೆ ಎಂದು ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ತಿಳಿಸಿದರು.
ತಾಲ್ಲೂಕಿನ ಮಾರ್ಕೋಡು ಗ್ರಾಮದಲ್ಲಿ ಬಹುಕಾಲದ ಬೇಡಿಕೆಯಾಗಿದ್ದ ಕಾಲು ಸಂಕದ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕಳಸ ತಾಲ್ಲೂಕಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವುದು ನನ್ನ ಜವಾಬ್ದಾರಿ. ಇದುವರೆಗೆ 100 ಕೋಟಿ ರೂ. ಅನುದಾನದಲ್ಲಿ ಹತ್ತಾರು ಕಿರು ಸೇತುವೆಗಳು ಹಾಗೂ ರಸ್ತೆಗಳನ್ನು ನಿರ್ಮಿಸಲಾಗಿದೆ. ಈ ಹಿಂದೆ ಕಾಂಕ್ರೀಟ್ ಕಾಣದ ರಸ್ತೆಗಳು ಇಂದು ಸುಸಜ್ಜಿತವಾಗಿವೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರತಿಯೊಂದು ಭಾಗಕ್ಕೂ ಮೂಲಭೂತ ಸೌಲಭ್ಯ ಒದಗಿಸಲು ಹಂತ ಹಂತವಾಗಿ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಸಂಸೆ ಗ್ರಾಮದ ಮಾಕೋಡು ಎಂಬಲ್ಲಿನ ಗ್ರಾಮಸ್ಥರ ದಶಕಗಳ ಬೇಡಿಕೆಯಾಗಿದ್ದ ಕಾಲು ಸಂಕವನ್ನು ಶಾಸಕರು ಉದ್ಘಾಟಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದರು.
ಕಳಸ-ಬಾಳೆಹೊನ್ನೂರು ಸಂಪರ್ಕಿಸುವ ಕಗ್ಗನಳ್ಳದ ಶಿಥಿಲಗೊಂಡಿದ್ದ ಸೇತುವೆಯನ್ನು 3.5 ಕೋಟಿ ರೂ. ವೆಚ್ಚದಲ್ಲಿ ಮರು ನಿರ್ಮಾಣ ಮಾಡಲು ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.ಶಂಕರಗುಡಿಗೆ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕಳಸ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕೆ.ಎ. ಶ್ರೇಣಿಕ್, ಪ್ರಮುಖ ಮುಖಂಡರಾದ ರಾಜೇಂದ್ರ ಹೆಬ್ಬಾರ್, ಮಹಮ್ಮದ್ ರಫೀಕ್, ವೀರೇಂದ್ರ ಜೈನ್, ವಿಶ್ವನಾಥ್, ಸುಧಾಕರ್ ಕಡೆಕುಡಿಗೆ, ಸುಜಿತ್ ಬೆಳ್ಳ, ಶ್ರೀನಿವಾಸ್, ಸಂಶುದ್ದೀನ್, ರಾಮ್‌ದೇವ್, ಚೇತನ್, ಉದಯ ಮುಳ್ಳೋಡಿ, ಗಣೇಶ್ ಭಟ್ ಇತರರು ಉಪಸ್ಥಿತರಿದ್ದರು.

The post ಶಾಸಕಿ ನಯನ ಮೋಟಮ್ಮ ಅವರಿಂದ ಕಳಸ ತಾಲ್ಲೂಕಿನಲ್ಲಿ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಗುದ್ದಲಿ ಪೂಜೆ appeared first on Kalasa live.

]]>
https://www.kalasalive.com/?feed=rss2&p=9585 0
ಕಳಸದ ಸ್ಮರಣ ಶಕ್ತಿ ಚತುರ ಕು. ಪ್ರಣೀಕ್‌ಗೆ ‘ಕನ್ನಡ ಸಿರಿ’ ಪ್ರಶಸ್ತಿ ಸಂಭ್ರಮ. https://www.kalasalive.com/?p=9581 https://www.kalasalive.com/?p=9581#respond Wed, 21 Jan 2026 08:01:06 +0000 https://www.kalasalive.com/?p=9581 ಕಳಸ ಲೈವ್ ವರದಿ ಕಳಸದ ಪ್ರಬೋಧಿನಿ ವಿದ್ಯಾ ಕೇಂದ್ರದ ಪ್ರತಿಭಾನ್ವಿತ ವಿದ್ಯಾರ್ಥಿ ಕು.ಪ್ರಣೀಕ್ ಅವರ ಅಸಾಧಾರಣ ಸಾಧನೆಗೆ ಈಗ ಅದ್ಭುತ ಗೌರವ ಸಂದಿದೆ. ಅವರ

The post ಕಳಸದ ಸ್ಮರಣ ಶಕ್ತಿ ಚತುರ ಕು. ಪ್ರಣೀಕ್‌ಗೆ ‘ಕನ್ನಡ ಸಿರಿ’ ಪ್ರಶಸ್ತಿ ಸಂಭ್ರಮ. appeared first on Kalasa live.

]]>

ಕಳಸ ಲೈವ್ ವರದಿ
ಕಳಸದ ಪ್ರಬೋಧಿನಿ ವಿದ್ಯಾ ಕೇಂದ್ರದ ಪ್ರತಿಭಾನ್ವಿತ ವಿದ್ಯಾರ್ಥಿ ಕು.ಪ್ರಣೀಕ್ ಅವರ ಅಸಾಧಾರಣ ಸಾಧನೆಗೆ ಈಗ ಅದ್ಭುತ ಗೌರವ ಸಂದಿದೆ. ಅವರ ಅದ್ಭುತ ಸ್ಮರಣಶಕ್ತಿಯನ್ನು ಗುರುತಿಸಿ, ಜನವರಿ 24 ರಂದು ಗಿರಿಯಾಪುರದಲ್ಲಿ ನಡೆಯಲಿರುವ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರಿಗೆ “ಕನ್ನಡ ಸಿರಿ” ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕಸಾಪ ಜಿಲ್ಲಾಧ್ಯಕ್ಷರಾದ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.
ಒಂದು ನಿಮಿಷದಲ್ಲಿ ಭಾರತ ದೇಶದ ಎಲ್ಲಾ ರಾಜ್ಯಗಳು ಹಾಗೂ ಆ ರಾಜ್ಯಗಳ ಮುಖ್ಯಮಂತ್ರಿಗಳ ಹೆಸರು ಹೇಳುವುದು.  A ಯಿಂದ Z ವರೆಗೆ ಮಾನ್ಯ ಶ್ರೀ ನರೇಂದ್ರಮೋದಿ ಪ್ರಧಾನಮಂತ್ರಿಗಳ ಸಾಧನೆಯನ್ನು ಒಂದು ನಿಮಿಷದಲ್ಲಿ ಹೇಳುವುದು.  A to Z ವರೆಗೆ ಮಹಾಪುರುಷರ ಬಗ್ಗೆ ಹಾಗೂ A – Ambition ಹೀಗೆ Z ವರೆಗೆ ಹೇಳುವುದು.  ಕನ್ನಡ ವರ್ಣಮಾಲೆಯ ಬಗ್ಗೆ ವಿಶೇಷವಾಗಿ ವಿವರಣನೆಯನ್ನು ನೀಡುವನು.ಉದಾ : ಅ – ಅಮ್ಮನ ಮಡಿಲಿನಿಂದ ಹೀಗೆ ಸಾಗುವುದು.  ಕನ್ನಡ ವರನಟ ಡಾ|| ರಾಜ್ ಕುಮಾರ್ ಅಭಿನಯದ 205 ಚಲನಚಿತ್ರದ ಹೆಸರುಗಳನ್ನು ಹೇಳುವುದು.  A to Z ವರೆಗೆ Ablates ನ್ನು ವಿಭಿನ್ನವಾಗಿ ಹೇಳುವುದು
ಉದಾ :A- Arjuna is a great warriorB- Balarama is brother of Krishna ಹೀಗೆ ಹೇಳುವುದು.
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಹಾಗೂ ನಡೆದ ವರ್ಷ ಹೇಳುವುದು. ಮಾನ್ಯ ಪ್ರಧಾನಮಂತ್ರಿಯವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೊರೆತ ಬಿರುದು ಮತ್ತು ಸನ್ಮಾನಗಳನ್ನು ಇಸವಿ ಸಮೇತ ಹೇಳುವುದು 8. ಮಾನ್ಯ ಪ್ರಧಾನ ಮಂತ್ರಿಗಳು ಭಾರತೀಯರಿಗೆ ಕರೆ ನೀಡಿದ 9 ಸಲಹೆಗಳನ್ನು ಹೇಳುವುದು.  ಅಯೋಧ್ಯೆಯ ಪ್ರಭು ಶ್ರೀ ರಾಮನಿಗೆ ಅಕ್ಷರಗಳ ಮಾಲೆ. ಅದ್ಬುತ ಸ್ಮರಣ ಶಕ್ತಿಯನ್ನು ಹೊಂದಿರುವ ಈತನ ಹೆಸರು ” ಕರ್ನಾಟಕ ಬುಕ್ ಆಫ್ ರೆಕಾರ್ಡ್ ಗೆ 2023ರಲ್ಲಿ ಸೇರ್ಪಡೆಯಾಗಿದೆ. ಪ್ರಸ್ತುತ ವರ್ಷ ” ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ಹೆಸರು ಸೇರ್ಪಡೆಯಾಗಿದೆಪ್ರಣೀಕ್ ಅವರ ಈ ಅದ್ಭುತ ಸ್ಮರಣಶಕ್ತಿ ಈಗಾಗಲೇ 2023: ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ಗೆ ಸೇರ್ಪಡೆ.2024: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದೆ.
“ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಅಗಾಧ ಪಾಂಡಿತ್ಯ ಮತ್ತು ನೆನಪಿನ ಶಕ್ತಿ ಹೊಂದಿರುವುದು ಹೆಮ್ಮೆಯ ವಿಷಯ. ಇವರ ಸಾಧನೆಯನ್ನು ಪ್ರೋತ್ಸಾಹಿಸಲು ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಗೌರವಿಸಲಾಗುತ್ತಿದೆ.” ಎಂದು ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.

The post ಕಳಸದ ಸ್ಮರಣ ಶಕ್ತಿ ಚತುರ ಕು. ಪ್ರಣೀಕ್‌ಗೆ ‘ಕನ್ನಡ ಸಿರಿ’ ಪ್ರಶಸ್ತಿ ಸಂಭ್ರಮ. appeared first on Kalasa live.

]]>
https://www.kalasalive.com/?feed=rss2&p=9581 0
ಬಾಳೆಹೊಳೆಯಲ್ಲಿ ಕೇಸರಿ ಕಹಳೆ: ಜನವರಿ 25ರಂದು ಭವ್ಯ ‘ಹಿಂದೂ ಸಮಾಜೋತ್ಸವ’ https://www.kalasalive.com/?p=9578 https://www.kalasalive.com/?p=9578#respond Wed, 21 Jan 2026 07:24:26 +0000 https://www.kalasalive.com/?p=9578 ಕಳಸ ಲೈವ್ ವರದಿ ತೋಟದೂರು ಮಂಡಲದ ಹಿಂದೂ ಸಮಾಜೋತ್ಸವ ಆಯೋಜನ ಸಮಿತಿಯ ವತಿಯಿಂದ ಜನವರಿ 25ರಂದು ಬಾಳೆಹೊಳೆಯಲ್ಲಿ ಅಭೂತಪೂರ್ವ “ಹಿಂದೂ ಸಮಾಜೋತ್ಸವ” ಹಮ್ಮಿಕೊಳ್ಳಲಾಗಿದೆ. ಸಮಸ್ತ

The post ಬಾಳೆಹೊಳೆಯಲ್ಲಿ ಕೇಸರಿ ಕಹಳೆ: ಜನವರಿ 25ರಂದು ಭವ್ಯ ‘ಹಿಂದೂ ಸಮಾಜೋತ್ಸವ’ appeared first on Kalasa live.

]]>
ಕಳಸ ಲೈವ್ ವರದಿ
ತೋಟದೂರು ಮಂಡಲದ ಹಿಂದೂ ಸಮಾಜೋತ್ಸವ ಆಯೋಜನ ಸಮಿತಿಯ ವತಿಯಿಂದ ಜನವರಿ 25ರಂದು ಬಾಳೆಹೊಳೆಯಲ್ಲಿ ಅಭೂತಪೂರ್ವ “ಹಿಂದೂ ಸಮಾಜೋತ್ಸವ” ಹಮ್ಮಿಕೊಳ್ಳಲಾಗಿದೆ. ಸಮಸ್ತ ಹಿಂದೂ ಸಮಾಜವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಈ ಬೃಹತ್ ಕಾರ್ಯಕ್ರಮ ನಡೆಯಲಿದೆ.
ಅಂದು ಮಧ್ಯಾಹ್ನ 2.30ರಿಂದ ಭವ್ಯ ಶೋಭಾಯಾತ್ರೆ ಆರಂಭಗೊಳ್ಳಲಿದ್ದು, ಸಂಜೆ 4.30ರಿಂದ ಶ್ರೀಚನ್ನಕೇಶವಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಶಿದರ್ ಎಂ.ಡಿ. (ಕಾಫಿ ಬೆಳೆಗಾರರು, ಬಂಟಗನಹಳ್ಳಿ) ವಹಿಸಲಿದ್ದು, ವಿಕ್ರಮ ವಾರ ಪತ್ರಿಕೆಯ ಗೌರವ ಸಂಪಾದಕರಾದ ನಾಗರಾಜರು ದಿಕ್ಸೂಚಿ ಭಾಷಣ ಮಾಡುವರು.
ಮಧ್ಯಾಹ್ನ 2-30ಕ್ಕೆ ಆರಂಭವಾಗಲಿರುವ ಭವ್ಯ ಮೆರವಣಿಗೆಯಲ್ಲಿ ಕರಾವಳಿ ಮತ್ತು ಮಲೆನಾಡಿನ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳಲಿದೆ. ಲಯಬದ್ಧ ಚಂಡೆ ವಾದನ ಹಾಗೂ ಹಲಗೆ ಬಡಿತ. ಹುಲಿ ವೇಷ ಹಾಗೂ ಕರಡಿ ಕುಣಿತದ ಅಬ್ಬರ. ಮನಸೂರೆಗೊಳ್ಳುವ ಕುಣಿತ ಭಜನೆ. ಆಕರ್ಷಕ ಬೃಹತ್ ಗೊಂಬೆಗಳು ಮತ್ತು ವೈವಿಧ್ಯಮಯ ಟ್ಯಾಬ್ಲೋಗಳು ಮೆರವಣಿಗೆಯುದ್ದಕೂ ಸಾಗಿ ಬರಲಿದೆ.
“ನಮ್ಮ ಧರ್ಮ, ನಮ್ಮ ಹೆಮ್ಮೆ” ಎಂಬ ಸಂಕಲ್ಪದೊAದಿಗೆ ನಡೆಯುತ್ತಿರುವ ಈ ಪುಣ್ಯ ಕಾರ್ಯದಲ್ಲಿ ಸಮಸ್ತ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕಾಗಿ ಆಯೋಜನ ಸಮಿತಿ ಪ್ರೀತಿಯಿಂದ ಆಹ್ವಾನಿಸುತ್ತಿದೆ.

The post ಬಾಳೆಹೊಳೆಯಲ್ಲಿ ಕೇಸರಿ ಕಹಳೆ: ಜನವರಿ 25ರಂದು ಭವ್ಯ ‘ಹಿಂದೂ ಸಮಾಜೋತ್ಸವ’ appeared first on Kalasa live.

]]>
https://www.kalasalive.com/?feed=rss2&p=9578 0
ಕಳಸ ಕೆ.ಪಿ.ಎಸ್. ವಿದ್ಯಾರ್ಥಿಗಳು ಕಳಸ ಕೃಷಿ ಪತ್ತಿನ ಸಹಕಾರ ಸಂಘದ ಸಂಸ್ಕರಣಾ ಘಟಕಕ್ಕೆ ಭೇಟಿ: ಕೃಷಿ ಮೌಲ್ಯವರ್ಧನೆ ಕುರಿತು ಜ್ಞಾನಾರ್ಜನೆ https://www.kalasalive.com/?p=9571 https://www.kalasalive.com/?p=9571#respond Sun, 18 Jan 2026 07:52:34 +0000 https://www.kalasalive.com/?p=9571 ಕಳಸ ಲೈವ್ ವರದಿ ಸ್ಥಳೀಯ ಕಳಸ ಕೆ.ಪಿ.ಎಸ್. (ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆಯ ವಿದ್ಯಾರ್ಥಿಗಳು ಕಳಸ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶೈಕ್ಷಣಿಕ ಭೇಟಿ

The post ಕಳಸ ಕೆ.ಪಿ.ಎಸ್. ವಿದ್ಯಾರ್ಥಿಗಳು ಕಳಸ ಕೃಷಿ ಪತ್ತಿನ ಸಹಕಾರ ಸಂಘದ ಸಂಸ್ಕರಣಾ ಘಟಕಕ್ಕೆ ಭೇಟಿ: ಕೃಷಿ ಮೌಲ್ಯವರ್ಧನೆ ಕುರಿತು ಜ್ಞಾನಾರ್ಜನೆ appeared first on Kalasa live.

]]>


ಕಳಸ ಲೈವ್ ವರದಿ
ಸ್ಥಳೀಯ ಕಳಸ ಕೆ.ಪಿ.ಎಸ್. (ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆಯ ವಿದ್ಯಾರ್ಥಿಗಳು ಕಳಸ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶೈಕ್ಷಣಿಕ ಭೇಟಿ ನೀಡಿ, ಸಂಘದ ಕಚಗಾನೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಡಿಕೆ ಮತ್ತು ಕಾಫಿ ಸಂಸ್ಕರಣಾ ಘಟಕದ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದರು.
ವಿದ್ಯಾರ್ಥಿಗಳು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಕಾಫಿ ಮತ್ತು ಅಡಿಕೆಯನ್ನು ಕೊಯ್ಲಿನ ನಂತರ ಹೇಗೆ ಸಂಸ್ಕರಿಸಲಾಗುತ್ತದೆ ಎಂಬುದನ್ನು ಹತ್ತಿರದಿಂದ ವೀಕ್ಷಿಸಿದರು. ಸಂಘದ ಅಧ್ಯಕ್ಷರಾದ ಶ್ರೀ ಜಿ. ಕೆ. ಮಂಜಪ್ಪಯ್ಯ ಅವರು ವಿದ್ಯಾರ್ಥಿಗಳಿಗೆ ಅಡಿಕೆಯನ್ನು ಸುಲಿಯುವುದು, ಬೇಯಿಸುವುದು, ಒಣಗಿಸುವುದು ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ವರ್ಗೀಕರಣ ಮಾಡುವ ಹಂತಗಳ ಬಗ್ಗೆ ವಿವರಿಸಿದರು. ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಪಡೆಯಲು ವೈಜ್ಞಾನಿಕ ಸಂಸ್ಕರಣೆ ಎಷ್ಟು ಮುಖ್ಯ ಎಂಬುದನ್ನು ತಿಳಿಸಿಕೊಟ್ಟರು.
ಕಾಫಿ ಹಣ್ಣನ್ನು ಪಲ್ಪಿಂಗ್ ಮಾಡುವುದು, ಒಣಗಿಸುವುದು ಮತ್ತು ಹಸಿರು ಕಾಫಿ ಬೀಜಗಳನ್ನು ಬೇರ್ಪಡಿಸುವ ತಾಂತ್ರಿಕ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದರು.
ಸಹಕಾರಿ ಸಂಘ ಕೇವಲ ಸಾಲ ನೀಡುವುದಷ್ಟೇ ಅಲ್ಲದೆ, ರೈತರ ಬೆಳೆಗಳಿಗೆ ಮೌಲ್ಯವರ್ಧನೆ ಮಾಡುವ ಮೂಲಕ ರೈತರ ಆರ್ಥಿಕ ಸಬಲೀಕರಣಕ್ಕೆ ಸಂಘವು ಹೇಗೆ ಶ್ರಮಿಸುತ್ತಿದೆ ಎಂಬುದನ್ನು ವಿದ್ಯಾರ್ಥಿಗಳು ಮನಗಂಡರು. ಈ ಭೇಟಿಯು ವಿದ್ಯಾರ್ಥಿಗಳಿಗೆ ಕೃಷಿ ಮತ್ತು ಸಹಕಾರ ಕ್ಷೇತ್ರದ ಪ್ರಾಯೋಗಿಕ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು
ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿ, ಕೃಷಿ ಆಧಾರಿತ ಉದ್ದಿಮೆಗಳ ಬಗ್ಗೆ ಆಸಕ್ತಿ ಮೂಡಿಸಿದ ಸಂಘದ ಅಧ್ಯಕ್ಷರಾದ ಶ್ರೀ ಜಿ. ಕೆ. ಮಂಜಪ್ಪಯ್ಯ ಅವರನ್ನು ಕೆ.ಪಿ.ಎಸ್. ಶಾಲೆ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ, ಸಂಘದ ಉಪಾಧ್ಯಕ್ಷೆ ಆಶಾಲತಾ ಜೈನ್, ನಿದೇರ್ಶಕರಾದ ಅನಿಲ್ ಗೇವಿನ್, ಶಾಲೆಯ ಮುಖ್ಯ ಶಿಕ್ಷಕ ಸುರೇಶ್, ಶಿಕ್ಷಕರಾದ ಶಿವಕುಮಾರ್, ಲೋಕೇಶ್ ಸತೀಶ್, ಸಂದೇಶ್, ಶೃಂಗೇಶ್ವರ್ ಇತರರು ಇದ್ದರು.

The post ಕಳಸ ಕೆ.ಪಿ.ಎಸ್. ವಿದ್ಯಾರ್ಥಿಗಳು ಕಳಸ ಕೃಷಿ ಪತ್ತಿನ ಸಹಕಾರ ಸಂಘದ ಸಂಸ್ಕರಣಾ ಘಟಕಕ್ಕೆ ಭೇಟಿ: ಕೃಷಿ ಮೌಲ್ಯವರ್ಧನೆ ಕುರಿತು ಜ್ಞಾನಾರ್ಜನೆ appeared first on Kalasa live.

]]>
https://www.kalasalive.com/?feed=rss2&p=9571 0
ಸಹಕಾರ ಕ್ಷೇತ್ರದ ಸಾಧಕ ಜಿ.ಕೆ. ಮಂಜಪ್ಪಯ್ಯ ಅವರಿಗೆ ಬಿಜೆಪಿ ವತಿಯಿಂದ ಅಭಿನಂದನೆ https://www.kalasalive.com/?p=9566 https://www.kalasalive.com/?p=9566#respond Sun, 18 Jan 2026 07:27:32 +0000 https://www.kalasalive.com/?p=9566 ಕಳಸ ಲೈವ್ ವರದಿ: ಪ್ರತಿಷ್ಠಿತ ‘ಕರ್ನಾಟಕ ಸಹಕಾರ ಶಿರೋಮಣಿ–೨೦೨೫’ ಪ್ರಶಸ್ತಿಗೆ ಭಾಜನರಾದ ಕಳಸದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ. ಮಂಜಪ್ಪಯ್ಯ

The post ಸಹಕಾರ ಕ್ಷೇತ್ರದ ಸಾಧಕ ಜಿ.ಕೆ. ಮಂಜಪ್ಪಯ್ಯ ಅವರಿಗೆ ಬಿಜೆಪಿ ವತಿಯಿಂದ ಅಭಿನಂದನೆ appeared first on Kalasa live.

]]>

ಕಳಸ ಲೈವ್ ವರದಿ:
ಪ್ರತಿಷ್ಠಿತ ‘ಕರ್ನಾಟಕ ಸಹಕಾರ ಶಿರೋಮಣಿ–೨೦೨೫’ ಪ್ರಶಸ್ತಿಗೆ ಭಾಜನರಾದ ಕಳಸದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ. ಮಂಜಪ್ಪಯ್ಯ ಅವರನ್ನು ಕಳಸ ಬಿಜೆಪಿ ಪಕ್ಷದ ವತಿಯಿಂದ ಭಾನುವಾರ ಗೌರವಿಸಲಾಯಿತು.
ಸಹಕಾರ ಕ್ಷೇತ್ರವು ಕೇವಲ ಆರ್ಥಿಕ ವ್ಯವಹಾರಕ್ಕೆ ಸೀಮಿತವಲ್ಲ, ಅದು ಸಮಾಜ ಪರಿವರ್ತನೆಯ ಶಕ್ತಿಯೆಂಬುದನ್ನು ತಮ್ಮ ಕಾರ್ಯಶೈಲಿಯಿಂದ ಸಾಬೀತುಪಡಿಸಿದವರು ಜಿ.ಕೆ. ಮಂಜಪ್ಪಯ್ಯನವರು. ಕಳೆದ ಮೂರು ದಶಕಗಳಿಂದ ಅವರು ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ, ಗ್ರಾಮೀಣ ಆರ್ಥಿಕತೆಯ ಬಲವರ್ಧನೆಗೆ ನಿರಂತರ ಶ್ರಮಿಸಿದ್ದಾರೆ.
ಕೃಷಿಕರಿಗೆ ಸುಲಭ ಸಾಲ ಸೌಲಭ್ಯ, ಗೊಬ್ಬರ ವಿತರಣೆಯಲ್ಲಿ ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸುವ ಮೂಲಕ ರೈತರ ವಿಶ್ವಾಸಾರ್ಹ ನಾಯಕರಾಗಿ ಅವರು ಗುರುತಿಸಿಕೊಂಡಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಸುಸಜ್ಜಿತ ಕಟ್ಟಡಗಳು, ಗೋದಾಮುಗಳ ನಿರ್ಮಾಣ, ಜೊತೆಗೆ ರೈತರಿಗೆ ಅಗತ್ಯವಾದ ಮಾರುಕಟ್ಟೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಸಹಕಾರಿ ಸಂಸ್ಥೆಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ, ಪಾರದರ್ಶಕ ಹಾಗೂ ಪ್ರಾಮಾಣಿಕ ಆಡಳಿತ ನೀಡುವಲ್ಲಿ ಅವರು ಮಾದರಿಯಾಗಿದ್ದಾರೆ. ಪಕ್ಷಭೇದ ಮರೆತು ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಗುವ ಅವರ ಗುಣವೇ ಅವರನ್ನು ಸತತವಾಗಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವAತೆ ಮಾಡಿದೆ. ಕೇವಲ ಸಾಲ ವಿತರಣೆಗೆ ಮಾತ್ರ ಸೀಮಿತವಾಗದೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿಯೂ ಸಹಕಾರಿ ಸಂಸ್ಥೆಗಳ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.
ಜಿ.ಕೆ. ಮಂಜಪ್ಪಯ್ಯನವರ ಸೇವೆಯಿಂದಾಗಿ ಈ ಭಾಗದ ಸಾವಿರಾರು ಕುಟುಂಬಗಳು ಇಂದು ಆರ್ಥಿಕವಾಗಿ ಸ್ವಾವಲಂಬಿಗಳಾಗಿವೆ ಎಂದು ಬಿಜೆಪಿ ಮುಖಂಡರು ಪ್ರಶಂಸಿಸಿದರು.
ಇವರ ಗಣನೀಯ ಸೇವೆಯನ್ನು ಪರಿಗಣಿಸಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆಗಳ ವತಿಯಿಂದ ಜನವರಿ ೨೪ ರಂದು ಬೆಂಗಳೂರಿನ ವಸಂತನಗರದಲ್ಲಿರುವ ದಿ ಕ್ಯಾಪಿಟಲ್ ಹೋಟೆಲ್‌ನಲ್ಲಿ ಗೌರವ ಸಮಾರಂಭ ನಡೆಯಲಿದೆ.
ಈ ಸಂದರ್ಭದಲ್ಲಿ ಕಳಸ ಬಿಜೆಪಿ ಅಧ್ಯಕ್ಷ ಶ್ರೀಕಾಂತ್, ಮುಖಂಡರಾದ ದೀಪಕ್ ದೊಡ್ಡಯ್ಯ, ಶೇಷಗಿರಿ, ನಾಗಭೂಷನ್, ನಾಗೇಶ್ ಭಟ್, ಸುಜಯ ಸದಾನಂದ, ಮಹೇಶ್ ಬಿ.ಕೆ., ಸುಂದರ ಶೆಟ್ಟಿ, ಕಾರ್ತಿಕ್ ಶಾಸ್ತಿçÃ, ರಂಗನಾಥ್, ಜಗದೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

The post ಸಹಕಾರ ಕ್ಷೇತ್ರದ ಸಾಧಕ ಜಿ.ಕೆ. ಮಂಜಪ್ಪಯ್ಯ ಅವರಿಗೆ ಬಿಜೆಪಿ ವತಿಯಿಂದ ಅಭಿನಂದನೆ appeared first on Kalasa live.

]]>
https://www.kalasalive.com/?feed=rss2&p=9566 0
ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಮಕರ ಸಂಕ್ರಾ0ತಿ ಸಂಭ್ರಮ https://www.kalasalive.com/?p=9563 https://www.kalasalive.com/?p=9563#respond Fri, 16 Jan 2026 12:39:24 +0000 https://www.kalasalive.com/?p=9563 ಕಳಸ ಲೈವ್ ವರದಿ ತಾಲ್ಲೂಕಿನ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಶುಕ್ರವಾರ ಮಕರ ಸಂಕ್ರಾ0ತಿ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮ ಮತ್ತು ಸಾಂಪ್ರದಾಯಿಕ ಶೈಲಿಯಲ್ಲಿ ಆಚರಿಸಲಾಯಿತು.

The post ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಮಕರ ಸಂಕ್ರಾ0ತಿ ಸಂಭ್ರಮ appeared first on Kalasa live.

]]>
ಕಳಸ ಲೈವ್ ವರದಿ
ತಾಲ್ಲೂಕಿನ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಶುಕ್ರವಾರ ಮಕರ ಸಂಕ್ರಾ0ತಿ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮ ಮತ್ತು ಸಾಂಪ್ರದಾಯಿಕ ಶೈಲಿಯಲ್ಲಿ ಆಚರಿಸಲಾಯಿತು.
ಹಬ್ಬದ ಪ್ರಯುಕ್ತ ಶಾಲೆಯ ವಿದ್ಯಾರ್ಥಿಗಳು ಬಣ್ಣ ಬಣ್ಣದ ಹೊಸ ಬಟ್ಟೆಗಳನ್ನು ಧರಿಸಿ ಬರುವ ಮೂಲಕ ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಿಸಿದ್ದರು. ಪರಸ್ಪರ ಎಳ್ಳುಬೆಲ್ಲವನ್ನು ಹಂಚಿಕೊ0ಡ ವಿದ್ಯಾರ್ಥಿಗಳು, “ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ” ಎನ್ನುವ ಆಶಯದೊಂದಿಗೆ ಸಂಕ್ರಾ0ತಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಆನಂದ್ ಅವರು ವಿದ್ಯಾರ್ಥಿಗಳಿಗೆ ಹಬ್ಬದ ಮಹತ್ವವನ್ನು ವಿವರಿಸಿದರು.”ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷ ಸ್ಥಾನವಿದೆ. ರೈತರು ಬೆಳೆದ ಫಸಲು ಮನೆಗೆ ಬರುವ ಈ ಸುಗ್ಗಿ ಕಾಲವು ಸಮೃದ್ಧಿಯ ಸಂಕೇತವಾಗಿದೆ. ವಿದ್ಯಾರ್ಥಿಗಳು ಬಾಲ್ಯದಿಂದಲೇ ನಮ್ಮ ಆಚಾರ ವಿಚಾರ ಮತ್ತು ಹಬ್ಬಗಳ ಹಿಂದಿರುವ ವೈಜ್ಞಾನಿಕ ಹಾಗೂ ಸಾಮಾಜಿಕ ಕಾರಣಗಳನ್ನು ತಿಳಿದುಕೊಳ್ಳಬೇಕು. ಇಂತಹ ಆಚರಣೆಗಳು ಮಕ್ಕಳಲ್ಲಿ ಸಾಮರಸ್ಯ ಮತ್ತು ಸಂಸ್ಕೃತಿಯ ಬಗ್ಗೆ ಗೌರವವನ್ನು ಮೂಡಿಸುತ್ತವೆ,” ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

The post ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಮಕರ ಸಂಕ್ರಾ0ತಿ ಸಂಭ್ರಮ appeared first on Kalasa live.

]]>
https://www.kalasalive.com/?feed=rss2&p=9563 0
ಶ್ರೀ ಕಲಶೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಎಳ್ಳು-ಬೆಲ್ಲ ಪ್ರಸಾದ ವಿತರಣೆ https://www.kalasalive.com/?p=9557 https://www.kalasalive.com/?p=9557#respond Thu, 15 Jan 2026 13:26:26 +0000 https://www.kalasalive.com/?p=9557 ಕಳಸ ಲೈವ್ ವರದಿ ಮಕರ ಸಂಕ್ರಾ0ತಿ ಹಬ್ಬದ ಸಂಭ್ರಮದ ಅಂಗವಾಗಿ, ಸರ್ಕಾರದ ಆದೇಶದನ್ವಯ ಇಲ್ಲಿನ ಐತಿಹಾಸಿಕ ಶ್ರೀ ಕಲಶೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಎಳ್ಳು-ಬೆಲ್ಲವನ್ನು ಪ್ರಸಾದ

The post ಶ್ರೀ ಕಲಶೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಎಳ್ಳು-ಬೆಲ್ಲ ಪ್ರಸಾದ ವಿತರಣೆ appeared first on Kalasa live.

]]>


ಕಳಸ ಲೈವ್ ವರದಿ
ಮಕರ ಸಂಕ್ರಾ0ತಿ ಹಬ್ಬದ ಸಂಭ್ರಮದ ಅಂಗವಾಗಿ, ಸರ್ಕಾರದ ಆದೇಶದನ್ವಯ ಇಲ್ಲಿನ ಐತಿಹಾಸಿಕ ಶ್ರೀ ಕಲಶೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಎಳ್ಳು-ಬೆಲ್ಲವನ್ನು ಪ್ರಸಾದ ರೂಪದಲ್ಲಿ ವಿತರಿಸಲಾಯಿತು.
ಹಿಂದೂ ಧರ್ಮದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯು ರಾಜ್ಯದ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಮಕರ ಸಂಕ್ರಾ0ತಿಯ0ದು ಕಡ್ಡಾಯವಾಗಿ ಎಳ್ಳು-ಬೆಲ್ಲ ವಿತರಿಸಲು ಸುತ್ತೋಲೆ ಹೊರಡಿಸಿತ್ತು. ಈ ಆದೇಶವನ್ನು ಪಾಲಿಸುವ ಮೂಲಕ ಕಲಶೇಶ್ವರ ದೇವಸ್ಥಾನದ ಆಡಳಿತ ಮಂಡಳಿಯು ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರತಿಯೊಬ್ಬ ಭಕ್ತರಿಗೂ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಿತು.
“ಹಿಂದೂ ಧರ್ಮದ ಪ್ರತಿಯೊಂದು ಹಬ್ಬವು ವೈಜ್ಞಾನಿಕ ಹಿನ್ನೆಲೆ ಹಾಗೂ ಹವಾಮಾನಕ್ಕೆ ಪೂರಕವಾದ ಮಹತ್ವವನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಸಂಪ್ರದಾಯಗಳು ಮರೆಯಾಗುತ್ತಿರುವುದನ್ನು ಮನಗಂಡು, ಧಾರ್ಮಿಕ ದತ್ತಿ ಇಲಾಖೆಯು ಎಲ್ಲರಿಗೂ ಮಕರ ಸಂಕ್ರಾ0ತಿಯ ಶುಭಫಲ ದೊರೆಯಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.

The post ಶ್ರೀ ಕಲಶೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಎಳ್ಳು-ಬೆಲ್ಲ ಪ್ರಸಾದ ವಿತರಣೆ appeared first on Kalasa live.

]]>
https://www.kalasalive.com/?feed=rss2&p=9557 0