ಕಳಸ ಲೈವ್ ವರದಿ
ತೋಟದೂರು ಮಂಡಲದ ಹಿಂದೂ ಸಮಾಜೋತ್ಸವ ಆಯೋಜನ ಸಮಿತಿಯ ವತಿಯಿಂದ ಜನವರಿ 25ರಂದು ಬಾಳೆಹೊಳೆಯಲ್ಲಿ ಅಭೂತಪೂರ್ವ “ಹಿಂದೂ ಸಮಾಜೋತ್ಸವ” ಹಮ್ಮಿಕೊಳ್ಳಲಾಗಿದೆ. ಸಮಸ್ತ ಹಿಂದೂ ಸಮಾಜವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಈ ಬೃಹತ್ ಕಾರ್ಯಕ್ರಮ ನಡೆಯಲಿದೆ.
ಅಂದು ಮಧ್ಯಾಹ್ನ 2.30ರಿಂದ ಭವ್ಯ ಶೋಭಾಯಾತ್ರೆ ಆರಂಭಗೊಳ್ಳಲಿದ್ದು, ಸಂಜೆ 4.30ರಿಂದ ಶ್ರೀಚನ್ನಕೇಶವಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಶಿದರ್ ಎಂ.ಡಿ. (ಕಾಫಿ ಬೆಳೆಗಾರರು, ಬಂಟಗನಹಳ್ಳಿ) ವಹಿಸಲಿದ್ದು, ವಿಕ್ರಮ ವಾರ ಪತ್ರಿಕೆಯ ಗೌರವ ಸಂಪಾದಕರಾದ ನಾಗರಾಜರು ದಿಕ್ಸೂಚಿ ಭಾಷಣ ಮಾಡುವರು.
ಮಧ್ಯಾಹ್ನ 2-30ಕ್ಕೆ ಆರಂಭವಾಗಲಿರುವ ಭವ್ಯ ಮೆರವಣಿಗೆಯಲ್ಲಿ ಕರಾವಳಿ ಮತ್ತು ಮಲೆನಾಡಿನ ಸಾಂಸ್ಕೃತಿಕ ವೈಭವ ಅನಾವರಣಗೊಳ್ಳಲಿದೆ. ಲಯಬದ್ಧ ಚಂಡೆ ವಾದನ ಹಾಗೂ ಹಲಗೆ ಬಡಿತ. ಹುಲಿ ವೇಷ ಹಾಗೂ ಕರಡಿ ಕುಣಿತದ ಅಬ್ಬರ. ಮನಸೂರೆಗೊಳ್ಳುವ ಕುಣಿತ ಭಜನೆ. ಆಕರ್ಷಕ ಬೃಹತ್ ಗೊಂಬೆಗಳು ಮತ್ತು ವೈವಿಧ್ಯಮಯ ಟ್ಯಾಬ್ಲೋಗಳು ಮೆರವಣಿಗೆಯುದ್ದಕೂ ಸಾಗಿ ಬರಲಿದೆ.
“ನಮ್ಮ ಧರ್ಮ, ನಮ್ಮ ಹೆಮ್ಮೆ” ಎಂಬ ಸಂಕಲ್ಪದೊAದಿಗೆ ನಡೆಯುತ್ತಿರುವ ಈ ಪುಣ್ಯ ಕಾರ್ಯದಲ್ಲಿ ಸಮಸ್ತ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕಾಗಿ ಆಯೋಜನ ಸಮಿತಿ ಪ್ರೀತಿಯಿಂದ ಆಹ್ವಾನಿಸುತ್ತಿದೆ.
