
ಕಳಸ ಲೈವ್ ವರದಿ
ಕಳಸದ ಪ್ರಬೋಧಿನಿ ವಿದ್ಯಾ ಕೇಂದ್ರದ ಪ್ರತಿಭಾನ್ವಿತ ವಿದ್ಯಾರ್ಥಿ ಕು.ಪ್ರಣೀಕ್ ಅವರ ಅಸಾಧಾರಣ ಸಾಧನೆಗೆ ಈಗ ಅದ್ಭುತ ಗೌರವ ಸಂದಿದೆ. ಅವರ ಅದ್ಭುತ ಸ್ಮರಣಶಕ್ತಿಯನ್ನು ಗುರುತಿಸಿ, ಜನವರಿ 24 ರಂದು ಗಿರಿಯಾಪುರದಲ್ಲಿ ನಡೆಯಲಿರುವ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರಿಗೆ “ಕನ್ನಡ ಸಿರಿ” ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕಸಾಪ ಜಿಲ್ಲಾಧ್ಯಕ್ಷರಾದ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.
ಒಂದು ನಿಮಿಷದಲ್ಲಿ ಭಾರತ ದೇಶದ ಎಲ್ಲಾ ರಾಜ್ಯಗಳು ಹಾಗೂ ಆ ರಾಜ್ಯಗಳ ಮುಖ್ಯಮಂತ್ರಿಗಳ ಹೆಸರು ಹೇಳುವುದು. A ಯಿಂದ Z ವರೆಗೆ ಮಾನ್ಯ ಶ್ರೀ ನರೇಂದ್ರಮೋದಿ ಪ್ರಧಾನಮಂತ್ರಿಗಳ ಸಾಧನೆಯನ್ನು ಒಂದು ನಿಮಿಷದಲ್ಲಿ ಹೇಳುವುದು. A to Z ವರೆಗೆ ಮಹಾಪುರುಷರ ಬಗ್ಗೆ ಹಾಗೂ A – Ambition ಹೀಗೆ Z ವರೆಗೆ ಹೇಳುವುದು. ಕನ್ನಡ ವರ್ಣಮಾಲೆಯ ಬಗ್ಗೆ ವಿಶೇಷವಾಗಿ ವಿವರಣನೆಯನ್ನು ನೀಡುವನು.ಉದಾ : ಅ – ಅಮ್ಮನ ಮಡಿಲಿನಿಂದ ಹೀಗೆ ಸಾಗುವುದು. ಕನ್ನಡ ವರನಟ ಡಾ|| ರಾಜ್ ಕುಮಾರ್ ಅಭಿನಯದ 205 ಚಲನಚಿತ್ರದ ಹೆಸರುಗಳನ್ನು ಹೇಳುವುದು. A to Z ವರೆಗೆ Ablates ನ್ನು ವಿಭಿನ್ನವಾಗಿ ಹೇಳುವುದು
ಉದಾ :A- Arjuna is a great warriorB- Balarama is brother of Krishna ಹೀಗೆ ಹೇಳುವುದು.
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಹಾಗೂ ನಡೆದ ವರ್ಷ ಹೇಳುವುದು. ಮಾನ್ಯ ಪ್ರಧಾನಮಂತ್ರಿಯವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೊರೆತ ಬಿರುದು ಮತ್ತು ಸನ್ಮಾನಗಳನ್ನು ಇಸವಿ ಸಮೇತ ಹೇಳುವುದು 8. ಮಾನ್ಯ ಪ್ರಧಾನ ಮಂತ್ರಿಗಳು ಭಾರತೀಯರಿಗೆ ಕರೆ ನೀಡಿದ 9 ಸಲಹೆಗಳನ್ನು ಹೇಳುವುದು. ಅಯೋಧ್ಯೆಯ ಪ್ರಭು ಶ್ರೀ ರಾಮನಿಗೆ ಅಕ್ಷರಗಳ ಮಾಲೆ. ಅದ್ಬುತ ಸ್ಮರಣ ಶಕ್ತಿಯನ್ನು ಹೊಂದಿರುವ ಈತನ ಹೆಸರು ” ಕರ್ನಾಟಕ ಬುಕ್ ಆಫ್ ರೆಕಾರ್ಡ್ ಗೆ 2023ರಲ್ಲಿ ಸೇರ್ಪಡೆಯಾಗಿದೆ. ಪ್ರಸ್ತುತ ವರ್ಷ ” ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ಹೆಸರು ಸೇರ್ಪಡೆಯಾಗಿದೆಪ್ರಣೀಕ್ ಅವರ ಈ ಅದ್ಭುತ ಸ್ಮರಣಶಕ್ತಿ ಈಗಾಗಲೇ 2023: ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ಗೆ ಸೇರ್ಪಡೆ.2024: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದೆ.
“ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಅಗಾಧ ಪಾಂಡಿತ್ಯ ಮತ್ತು ನೆನಪಿನ ಶಕ್ತಿ ಹೊಂದಿರುವುದು ಹೆಮ್ಮೆಯ ವಿಷಯ. ಇವರ ಸಾಧನೆಯನ್ನು ಪ್ರೋತ್ಸಾಹಿಸಲು ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಗೌರವಿಸಲಾಗುತ್ತಿದೆ.” ಎಂದು ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.
