Blog

Spread the love

ಕಳಸ ಲೈವ್ ವರದಿ
ಉನ್ನತ ಶಿಕ್ಷಣ ಎನ್ನುವುದು ಕೇವಲ ನಗರವಾಸಿಗಳಿಗೆ ಮಾತ್ರ ಸೀಮಿತವಲ್ಲ ಎಂಬುದನ್ನು ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಾಬೀತುಪಡಿಸುತ್ತಿದೆ. ಕುವೆಂಪು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟಿರುವ ಈ ಕಾಲೇಜು, ನ್ಯಾಕ್ (NAAC) ಸಂಸ್ಥೆಯಿ0ದ ‘ಎ’ ಶ್ರೇಣಿಯ ಮಾನ್ಯತೆ ಪಡೆಯುವ ಮೂಲಕ ಶೈಕ್ಷಣಿಕ ಗುಣಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಪ್ರಸ್ತುತ 2026-27ನೇ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದ್ದು, ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ಕೇವಲ ಪದವಿ ನೀಡುವುದಷ್ಟೇ ಅಲ್ಲದೆ, ಬದುಕಿಗೆ ಬೇಕಾದ ಪೂರಕ ಸೌಲಭ್ಯಗಳನ್ನು ನೀಡುತ್ತಿರುವುದು ಶ್ಲಾಘನೀಯ.
ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಪೂರಕವಾಗಿ ಕಾಲೇಜು ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಸ್ಮಾರ್ಟ್ ತರಗತಿಗಳು ಹಾಗೂ ಇಡೀ ಕ್ಯಾಂಪಸ್‌ನಲ್ಲಿ ವೈ-ಫೈ ಸೌಲಭ್ಯವನ್ನು ಒದಗಿಸಿದೆ. ಡಿಜಿಟಲ್ ಗ್ರಂಥಾಲಯದ ಮೂಲಕ ವಿದ್ಯಾರ್ಥಿಗಳು ಜಾಗತಿಕ ಜ್ಞಾನವನ್ನು ಪಡೆಯಲು ಮುಕ್ತ ಅವಕಾಶವಿದೆ. ಇದರ ಜೊತೆಗೇ, ಶ್ರೀ ಕ್ಷೇತ್ರ ಹೊರನಾಡಿನ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ವತಿಯಿಂದ ನೀಡಲಾಗುವ ‘ಮಧ್ಯಾಹ್ನದ ಉಚಿತ ಪ್ರಸಾದ ಭೋಜನ’ವು ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಹೊಟ್ಟೆ ತುಂಬಿದಾಗಲೇ ಜ್ಞಾನದ ಹಸಿವು ನೀಗಲು ಸಾಧ್ಯ ಎಂಬುದನ್ನು ಮನಗಂಡು ಇಂತಹ ಮಹತ್ಕಾರ್ಯಕ್ಕೆ ಕೈಜೋಡಿಸಿರುವುದು ಅಭಿನಂದನೀಯ.
ಕಾಲೇಜು ಕೇವಲ ಪಠ್ಯಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದೆ:
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಮತ್ತು ವ್ಯಕ್ತಿತ್ವ ವಿಕಸನಕ್ಕಾಗಿ ವಿಶೇಷ ‘ಉದ್ಯೋಗ ಮಾಹಿತಿ ಕೋಶ’ ಕಾರ್ಯನಿರ್ವಹಿಸುತ್ತಿದೆ.
ಎನ್.ಎಸ್.ಎಸ್ (NSS), ರೆಡ್ ಕ್ರಾಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಮೂಲಕ ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಚಿಂತನೆ ಬೆಳೆಸಲಾಗುತ್ತಿದೆ.
ರಾಗಿಂಗ್ ಮುಕ್ತ ಕ್ಯಾಂಪಸ್ ಹಾಗೂ ವಿದ್ಯಾರ್ಥಿನಿಯರಿಗೆ ವಿಶೇಷ ಪ್ರೋತ್ಸಾಹದಾಯಕ ಶುಲ್ಕ ಮರುಪಾವತಿ ಸೌಲಭ್ಯಗಳು ಶೈಕ್ಷಣಿಕ ವಾತಾವರಣವನ್ನು ಸುಭದ್ರಗೊಳಿಸಿವೆ.
ಬಿ.ಎ (B.A), ಬಿ.ಕಾಂ (B.Com) ಮತ್ತು ಬಿ.ಸಿ.ಎ (B.C.A) ಪದವಿಗಳನ್ನು ಪಡೆಯಬಯಸುವ ವಿದ್ಯಾರ್ಥಿಗಳು ಇನ್ನು ಮುಂದೆ ದೂರದ ನಗರಗಳಿಗೆ ಅಲೆಯುವ ಅಗತ್ಯವಿಲ್ಲ. ಸರ್ಕಾರದ ಉಚಿತ ವಿದ್ಯಾರ್ಥಿವೇತನ ಸೌಲಭ್ಯಗಳನ್ನು ಬಳಸಿಕೊಂಡು ಉನ್ನತ ಶಿಕ್ಷಣ ಪಡೆಯಲು ಇದು ಸೂಕ್ತ ಕಾಲ. ಯು.ಯು.ಸಿ.ಎಂ.ಎಸ್ (UUCMS) ಪೋರ್ಟಲ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಮೂಲಕ ಕಳಸದ ಮತ್ತು ಸುತ್ತಮುತ್ತಲ ಮಲೆನಾಡು ಭಾಗದ ಯುವಜನತೆ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬಹುದು.
ಸುಸಜ್ಜಿತ ಕಟ್ಟಡ, ನುರಿತ ಅಧ್ಯಾಪಕ ವರ್ಗ ಮತ್ತು ಪೌಷ್ಟಿಕ ಆಹಾರದ ವ್ಯವಸ್ಥೆ ಹೊಂದಿರುವ ಕಳಸದ ಈ ಸರ್ಕಾರಿ ಕಾಲೇಜು, ಇತರ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ.
ಆಸಕ್ತ ವಿದ್ಯಾರ್ಥಿಗಳು ತಡಮಾಡದೆ ಕಾಲೇಜಿಗೆ ಭೇಟಿ ನೀಡಿ ಪ್ರವೇಶ ಪಡೆಯುವ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರ ಮೊಬೈಲ್ ಸಂಖ್ಯೆ 9844247398 ಅನ್ನು ಸಂಪರ್ಕಿಸಬಹುದು