
ಕಳಸ ಲೈವ್ ವರದಿ
ತಾಲ್ಲೂಕಿನ ಮರಸಣಿಗೆ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ವಿಶ್ವನಾಥ.ಎ ಹಾಗೂ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಶ್ರೀಮತಿ ವಿಶಾಲಾಕ್ಷಿ.ಎ ಇವರನ್ನು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ನೌಕರರು ಶುಕ್ರವಾರ ಅಭಿನಂದಿಸಿದರು.
ಈ ಹಿಂದೆ ಮೂರು ಬಾರಿ ಪಂಚಾಯಿತಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಈ ಬಾರಿಯ ಮೊದಲನೆ ಅವಧಿಯ ಎರಡೂವರೆ ವರ್ಷ ಅಧ್ಯಕ್ಷರಾಗಿದ್ದ ವಿಶ್ವನಾಥ್, ಮರಸಣಿಗೆ ಗ್ರಾಮ ಪಂಚಾಯಿತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮನ್ನಣೆ ಗಳಿಸಿದ್ದಲ್ಲದೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾಕಾರ್ಯಕರ್ತೆಯರಿಗೆ ಕರೋನ ಸಂದರ್ಭದಲ್ಲಿ ಸಹಾಯಧನ ಹಾಗು ಕಿಟ್ ಗಳನ್ನು ನೀಡಿದ್ದರು.ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರುಗಳನ್ನು ಮತ್ತು ಅಧಿಕಾರಿಗಳನ್ನು ಪ್ರವಾಸ ಕರೆದುಕೊಂಡು ಹೋಗಿ ಮಾದರಿ ಗ್ರಾಮ ಪಂಚಾಯಿಗಳ ಬೇಟಿ ಮಾಡಿ ಮರಸಣಿಗೆ ಗ್ರಾಮ ಪಂಚಾಯಿಯನ್ನು ಅಭಿವೃದ್ಧಿಗೊಳಿಸಲು ಕಾರಣೀಭೂತರಾಗಿದ್ದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿಶ್ವನಾಥ್ ಮರಸಣಿಗೆ ಗ್ರಾಮ ಪಂಚಾಯಿತಿಯಲ್ಲಿ ನಾಲ್ಕು ಪಕ್ಷಗಳ ಸದಸ್ಯರಿದ್ದು, ಎಲ್ಲರನ್ನೂ ಒಂದೇ ರೀತಿಯಲ್ಲಿ ಎಲ್ಲೂ ಭಿನ್ನಾಭಿಪ್ರಾಯ ಇಲ್ಲದೆ ನೋಡಿಕೊಂಡ ಪರಿಣಾಮ ಪಂಚಾಯಿತಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕಾರಿಯಾಯಿತು.ದ್ವೇಷ ರಾಜಕಾರಣಕ್ಕಿಂತ ಪ್ರೀತಿಯ ರಾಜಕಾರಣ ಮಾಡಿದಾಗ ಮಾತ್ರ ಊರಿನ ಅಭಿವೃದ್ಧಿ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಪಂ ಅಧ್ಯಕ್ಷೆ ಶ್ರೀಮತಿ ಹೇಮಾವತಿ, ಉಪಾಧ್ಯಕ್ಷ ಮೋಹನ್ ಎಸ್, ಸದಸ್ಯರಾದ ವಿಜಯಗೌಡ, ವಿನ್ಸೆಂಟ್ ಪುಟ್ಸಾದೋ, ಶ್ರೀಮತಿ ಗುಲಾಭಿ, ಶ್ರೀಮತಿ ವಿಶಾಲಕ್ಷಿ, ಶ್ರೀಮತಿ ಪೌಲಿನಾ, ಅಭಿವೃದ್ಧಿ ಅಧಿಕಾರಿ ರಘುವೀರ್, ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು ಇದ್ದರು.