
ಕಳಸ ಲೈವ್ ವರದಿ
ಕಳೆದ ಐದು ದಿನಗಳಿಂದ ವಿದ್ಯುತ್ ಇಲ್ದೆ ಕಳಸ ತಾಲೂಕಿನ ಜನ ಪಡುತ್ತಿರುವ ಸಮಸ್ಯೆ ಅಷ್ಟಿಷ್ಟಲ್ಲ. ಮೊಬೈಲ್ ಚಾರ್ಜ್ ಮಾಡಬೇಕಾದ್ರೂ ಇನ್ವರ್ಟರ್, ಜನರೇಟರ್ ಇದ್ದವರ ಬಳಿ ಹೋಗಿ ಕಾಡಿ ಬೇಡಿ ಚಾರ್ಜ್ ಮಾಡಿಕೊಳ್ಳುವ ಪರಿಸ್ಥಿತಿ.
ಆದರೆ ಸಂಸೆಯಲ್ಲಿ ಪವರ್ ಪ್ರಾಜೆಕ್ಟ್ ಇದ್ರೂ… ಇಷ್ಟು ಮಳೆ ಇದ್ದೂ… ನದಿ ಮೈ ತುಂಬಿ ಹರಿಯುತ್ತಿದ್ದೂ… ಬರ ಪೂರ ವಿದ್ಯುತ್ ಉತ್ಪಾಧನೆಯಾಗುತ್ತಿದ್ದರು ಕೂಡ ಅದರ ಉಪಯೋಗವಾಗದಿರುವುದು ತಾಲೂಕಿನ ಜನರಿಗೆ ಆಗದಿರುವುದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ನೆಲ್ಲಿಬೀಡಿನ ತೇಜಸ್ ಜೈನ್ ಹೇಳುತ್ತಾರೆ.
ಇದು ಮೊಬೈಲ್ ಯುಗ ಒಂದಲ್ಲ ಒಂದು ಕಾರಣಕ್ಕೆ ಮೊಬೈಲ್ ಬೇಕೆ ಬೇಕು.ಆದರೆ ವಿದ್ಯುತ್ ಇಲ್ದೆ ಮೊಬೈಲ್ ಚಾರ್ಜ್ ಮಾಡೋಕೆ ಆಗಲ್ಲ.ಸೋಲಾರ್ ಚಾರ್ಜ್ ಆಗುತ್ತಿಲ್ಲ.ಊರಿನ ಜನರ ಸಮಸ್ಯೆ ಮನಗಂಡು ಜಾಂಬ್ಲೆ ಪಾರ್ಶ್ವನಾಥ ಅವರು ತನ್ನ ಮನೆಯಲ್ಲಿ ಊರಿನ ಜನರ ಅನುಕೂಲಕ್ಕಾಗಿ ಕಳೆದ 2 ದಿನದಿಂದ ಜನರೇಟರ್ ಹಾಕಿ ಉಚಿತವಾಗಿ ಮೊಬೈಲ್ ಚಾರ್ಜ್ ಮಾಡಿಕೊಡುತ್ತಿದ್ದಾರೆ .ಜಾ೦ಬ್ಳೆ ನೆಲ್ಲಿಬೀಡು ಸೇರಿ ಶಿಫ್ಟ್ ವೈಸ್ ದಿನಕ್ಕೆ ಕನಿಷ್ಠ 50 ರಿಂದ 60 ಮೊಬೈಲ್ ಚಾರ್ಜ್ ಮಾಡಿ ಕೊಡಲಾಗುತ್ತಿದೆ.


