
ಕಳಸ ಲೈವ್ ವರದಿ
ಕೆಎಸ್ಆರ್ ಟಿಸಿ ಬಸ್ ಮತ್ತು ಕಾರು ನಡುವೆ ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ತಾಯಿ, ಮಗ ಸ್ಥಳದಲ್ಲೇ ಮೃತಪಟ್ಟಿದ್ದು, ತಂದೆ ಓರ್ವ ಗಂಭೀರ ಗಾಯಗೊಂಡ ಘಟನೆ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ರಾಷ್ಟ್ರೀಯ ಹೆದ್ದಾರಿ 173 ಯಲ್ಲಿ ಶನಿವಾರ ಸಂಭವಿಸಿದೆ.
ರಸ್ತೆ ಅಪಘಾತದಲ್ಲಿ ಬೆಂಗಳೂರು ದಕ್ಷಿಣ, ಕೋಣನಕುಂಟೆ ಗ್ರಾಮದ ಪೂಜಾ ಹಿರೇಮಠ್ (41), ರಾಜಶೇಖರ್ ಹಿರೇಮಠ್ (18) ಮೃತಪಟ್ಟವರು. ಕಾರ್ಕಾಳದ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ತಮ್ಮ ಹಿರಿಯ ಮಗನನ್ನು ನೋಡಿ ವಾಪಾಸು ಬೆಂಗಳೂರಿಗೆ ತೆರಳಿತ್ತಿದ್ದರೆನ್ನಲಾಗಿದೆ. ದಂಪತಿಗಳಾದ ಶಿವಯೋಗಯ್ಯ ಹಿರೇಮಠ್ ಹಾಗೂ ಪೂಜಾ ಹಿರೇಮಠ್, ಪುತ್ರ ರಾಜಶೇಖರ್ ಹಿರೇಮಠ್ ಇವರು ಬೆಂಗಳೂರು ಕೆಡೆಗೆ ಕಾರಿನಲ್ಲಿ ಮುತ್ತಿಗೆಪುರ ರಾಷ್ಟ್ರೀಯ ಹೆದ್ದಾರಿ 173ಯಲ್ಲಿ ಸಂಚರಿಸುತ್ತಿದ್ದಾಗ, ಸಕಲೇಶಪುರದಿಂದ ಮೂಡಿಗೆರೆಗೆ ಆಗಮಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಇದರಿಂದ ರಾಜಶೇಖರ್ ಹಿರೇಮಠ್ ಹಾಗೂ ಪೂಜಾ ಹಿರೇಮಠ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಶಿವಯೋಗಿ ಹಿರೇಮಠ್ (49) ಅವರಿಗೆ ಗಂಭೀರ ಗಾಯಗೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆ ಕುರಿತು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.