
- ಕಳಸ ಲೈವ್ ವರದಿ
ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಗುಡ್ಡ ರಸ್ತೆಗೆ ಇರಿಸಿದ್ದ 75 ಲಕ್ಷ ರೂ ಅನುದಾನವನ್ನು ಈಗ ಬೇರೆಡೆಗೆ ಇಡಲಾಗಿದೆ. ಎಂದು ಆರೋಪಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ದೇವರಗುಡ್ಡ-ಬಿಳುಗೋಡು ಗ್ರಾಮಕ್ಕೆ ತೆರಳುವ ಕಚ್ಚಾ ರಸ್ತೆಯನ್ನು ದುರಸ್ಥಿ ಪಡಿಸಿ ಕಾಂಕ್ರೀಟಿಕರಣ ಮಾಡಿಕೊಡಿ ಎಂದು ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದೇವೆ ಅದರಂತೆ ಹಿಂದಿನ ಶಾಸಕರು ಈ ರಸ್ತೆಯ ಕಾಕ್ರೀಟಿಕರಣಕ್ಕೆ ರೂ 75 ಲಕ್ಷ ಹಣವನ್ನು ಮಂಜೂರು ಮಾಡಿದ್ದರು.ಆದರೆ ಈ ಕಾಮಗಾರಿಯು ಪ್ರಾರಂಭವಾಗಿರಲಿಲ್ಲ. ಈಗಿನ ಶಾಸಕರು ಆ ಕಾಮಗಾರಿಯನ್ನು ಬೇರೆಡೆಗೆ ಇಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಈ ರಸ್ತೆಯ ಅಧೋಗತಿಯಿಂದ ದಿನ ನಿತ್ಯ ಸಂಚರಿಸುವ ಮಹಿಳೆಯರು, ಶಾಲಾ-ಕಾಲೇಜು ಮಕ್ಕಳು, ವಯೋವೃದ್ಧರು, ರೋಗಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.ಈ ರಸ್ತೆಯ ದುರಾವಸ್ಥೆಯಿಂದ ಯಾವುದೇ ಬಾಡಿಗೆ ವಾಹನದವರು ಕೂಡ ಬರುತ್ತಿಲ್ಲ.
ಕಾಂಕ್ರೀಟ್ ರಸ್ತೆ ಮಾಡಿಕೊಡುವುದಾಗಿ ತಿಳಿಸಿ ಈಗ ರಸ್ತೆಗೆ ಮಣ್ಣು ತಂದು ಹಾಕಿ ನಡೆದಾಡಿಕೊಂಡು ಹೋಗಲು ಸಾಧ್ಯವಾಗದಂತೆ ಮಾಡಿದ್ದಾರೆ. ಕೂಡಲೇ ಈ ರಸ್ತೆಗೆ ಮಂಜೂರಾದ ಅನುದಾನವನ್ನು ಇದಕ್ಕೆ ಬಳಸಿ ಕೂಡಲೇ ಕಾಂಕ್ರೀಟಿಕರಣ ಮಾಡಿಕೊಡಬೇಕು. ಹದಿನೈದು ದಿನದ ಒಳಗಾಗಿ ಕಾಮಗಾರಿ ಪ್ರಾರಂಭ ಮಾಡದೆ ಇದಲ್ಲಿ ಗ್ರಾಮಸ್ಥರು ಸೇರಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.