ಕಳಸ ಲೈವ್ ವರದಿ
ಕಳಸ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಎರಡು ದಿನಗಳ ಕಾಲ ಭಾವಗೀತೆ ತರಬೇತಿ ಶಿಬಿರ ನಡೆಯಿತು.
ಕಳಸ ಕೆಪಿಎಸ್ ಪ್ರೌಢ ಶಾಲಾ ಸಭಾಂಗಣದಲ್ಲಿ ಶನಿವಾರ ಮತ್ತು ಭಾನುವಾರ ನಡೆದ ಭಾವಗೀತೆ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ಗಾಯಕ ಎಂ.ಎಸ್.ಸುದೀರ್ ಚಿಕ್ಕಮಗಳೂರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಭಾನುವಾರ ಕೆ.ಪಿ.ಎಸ್. ಪಧವಿಪೂರ್ವ ಕಾಲೇಜು ಪ್ರಾಂಶುಪಾಲ ಎ.ಡಿ. ಅನಂತಪದ್ಮನಾಭ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಕಿರಣ್ ಶೆಟ್ಟಿ ನಿರೂಪಣೆ ಮಾಡಿ, ರಾಧಿಕಾ ಪ್ರಭು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೀತಾ ಕೃಷ್ಣಮೂರ್ತಿ ಬಂದಿರುವ ಅಥಿತಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಅಜಿತ್ ಜೈನ್ ವಂದಿಸಿದರು.
ಕಳಸ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅ.ರಾ. ಸತೀಶ್ಚಂದ್ರ, ದತ್ತಿ ದಾನಿ ಪಿ.ಇ.ಅಬ್ದುಲ್ ಕರೀಂ, ಕ.ಸಾ.ಪ ನಿಖಟಪೂರ್ವ ಅಧ್ಯಕ್ಷ ಕೆ.ವಿ. ನರೇಂದ್ರ ಕಲ್ಲಾನೆ, ಕ.ಸಾ.ಪ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಅ.ರಾ.ರಾಧಕೃಷ್ಣ ಇದ್ದರು.
ಎರಡು ದಿನ ನಡೆದ ಭಾವಗೀತೆ ಶಿಬಿರದಲ್ಲಿ ಕಳಸ ತಾಲೂಕಿನ ವಿವಿಧ ಶಾಲೆಯ 140 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಅಭಿನಂದನಾ ಪತ್ರವನ್ನು ವಿತರಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಸುಜಯ ಸದಾನಂದ ನಡೆಸಿಕೊಟ್ಟರು. ಕಲ್ಪನಾ ಅಜಿತ್ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಎಳೆದರು.
ಮಾಜಿ ತಾ.ಪಂ ಸದಸ್ಯ ಮಹಮ್ಮದ್ ರಫೀಕ್, ಕಳಸ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅ.ರಾ. ಸತೀಶ್ಚಂದ್ರ, ಕೆ.ಪಿ.ಎಸ್ ಉಪಪ್ರಾಂಶುಪಾಲ ಜಿ.ಶಿವಕುಮಾರಸ್ವಾಮಿ, ಹೆಚ್.ಸಿ.ಅಣ್ಣಯ್ಯ,ಅ.ರಾ.ರಾಧಕೃಷ್ಣ, ಸುಮನ ಜಯರಾಜ್, ರಾಧಿಕ ಪ್ರಭು, ರೇವತಿ ಶಿವಪ್ಪ, ಗಿರಿಜಾ ಇತರರು ಇದ್ದರು.