ಕಳಸ ಲೈವ್ ವರದಿ
ಯುವಕರ ತಂಡವೊಂದು ಸದ್ದಿಲ್ಲದೆ ನಿರ್ಮಿಸಿದ ನದಿ ದಡವೆಂಬ ಕನ್ನಡ ಕಿರುಚಿತ್ರವೊಂದು ಈಗ ಬಾರಿ ಸುದ್ದಿ ಮಾಡುತ್ತಿದೆ.

ಈಗಾಗಲೇ ನ್ಯೂ ವೇ ಸಿನಿಮಾಸ್ ಎಂಬ ಯೂಟ್ಯೂಬ್ ಚಾನಲ್ ಮುಖಾಂತರ ಬಿಡುಗಡೆಗೊಂಡ ಕಿರುಚಿತ್ರ ಕೇವಲ 10ಗಂಟೆಯಲ್ಲಿ 7500 ಜನ ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಕಳಸ ಸುತ್ತ ಮುತ್ತಲಿನ ಸ್ಥಳಿಯ ಯುವಕರ ತಂಡವೇ ನಿರ್ಮಿಸಿದ 13 ನಿಮಿಷಗಳ ಈ ಚಿತ್ರ ಒಂದು ಲವ್ ಸ್ಟೋರಿ ಚಿತ್ರವಾಗಿದೆ. ಸ್ಥಳಿಯ ಪ್ರತಿಭೆಗಳಾದ ಗೌತಮ್ ಭಟ್ ರಚಿಸಿ ನಿರ್ದೇಶನ ಮಾಡಿ, ನಾಯಕ ನಟನಾಗಿ ಸುಜಿಲ್ ಬೋನಡ್ಕ ಹಾಗೂ ನಾಯಕಿಯಾಗಿ ಕವನ ಕಳಸ ನಟಿಸಿದ್ದಾರೆ. ಕಳಸ ಸುತ್ತಮುತ್ತಲಿನ ಪ್ರಕೃತಿಯನ್ನು ಚಿತ್ರದಲ್ಲಿ ಅತ್ಯಂತ ಸುಂದರವಾಗಿ ಕಟ್ಟಿಕೊಡಲಾಗಿದೆ. ನಿರ್ದೇಶನ, ಹಿನ್ನಲೆ ದ್ವನಿ, ಸಂಗೀತ, ನಾಯಕ ನಾಯಕಿ ನಟನೆ ಎಲ್ಲವೂ ಅದ್ಬುತವಾಗಿ ಮೂಡಿ ಬಂದಿದೆ.

ಮ್ಯಾಕಾನಿಕ್ ಕೆಲಸ ಮಾಡುತ್ತಿದ್ದ ಅಶೋಕ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ಟೀಚರ್ ಪ್ರೀತಿಗೆ ಬಿದ್ದ ಪ್ರೇಮಿಗಳಿಬ್ಬರ ಕಥೆಯೆ ನದಿ ದಡ. ನದಿ ದಡವನ್ನು ಸೇರುತ್ತೋ ಬಿಡುತ್ತೋ ಅದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು.
ಪ್ರೀತ್ಸೋರ ಹೋಲಿಕೆಗೂ ಕೆಲೋ ಸಲ ಅರ್ಥ ಇರುತ್ತೆ…ಅನ್ನೋ ಸಬ್ ಟೈಟಲ್ ಗಮನ ಸೆಳೆಯುತ್ತದೆ.

ಮಂಜು ಕಳಸ, ಪ್ರವೀಣ್ ಕುಮಾರ್, ನರೇಂದ್ರ ಗೌಡ, ಗೌತಮ್, ಪರಿಕ್ಷಿತ್, ರಕ್ಷತ್ ಶೆಟ್ಟಿಗಾರ್, ಶ್ರೀಶ್, ಸ್ಪೂರ್ತಿ, ಯಶ್ವಂತ್ ಗೌಡ, ಅಜಯ್ ಶೀರ್ವಿ ತಮಗೆ ಕೊಟ್ಟ ಜವಾಬ್ದಾರಿಯನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ.
ಒಟ್ನಲ್ಲಿ ಸ್ಥಳಿಯ ಯುವಕರ ತಂಡ ನಿರ್ಮಿಸಿದ ಚೊಚ್ಚಲ ಕನ್ನಡ ಕಿರುಚಿತ್ರ ಗಮನ ಸೆಳೆಯುವುದರಲ್ಲಿ ಎರಡು ಮಾತಿಲ್ಲ.ಈ ಚಿತ್ರವನ್ನು ವೀಕ್ಷಿಸಿ ಯುವ ಕಲಾವಿದರನ್ನು ಪ್ರೋತ್ಸಾಯಿಸಿ ಅನ್ನೋದೆ ನಮ್ಮ ಆಶಯವೂ ಕೂಡ.
ಚಿತ್ರ ವೀಕ್ಷಿಸಲು ಈ ಲಿಂಕ್ ಬಳಸಿ.
