ಕಳಸ ಲೈವ್ ವರದಿ
ಜಾನಪದ ಉಳಿಯಬೇಕಾದರೆ ಮೊದಲು ನಮ್ಮ ಇಲ್ಲಿನ ಭಾಷಾ ಶೈಲಿಯನ್ನು ಪ್ರೀತಿಸಬೇಕು,ಹಾಗೂ ಮೂಲ ಜಾನಪದ ಕಲೆಗಳನ್ನು ಗೌರವಿಸಿ ಮುಖ್ಯ ವೇದಿಕೆಗೆ ಗೌರವಿಸಿದರೆ ಜಾನಪದ ಉಳಿಸಲು ಸಾಧ್ಯ ಎಂದು ಕ,ಜಾ,ಪ,ದ ಕಳಸ ತಾಲೂಕು ಅಧ್ಯಕ್ಷರಾದ ರಜಿತ್ ಅಭಿಪ್ರಾಯ ಪಟ್ಟರು.
ಕರ್ನಾಟಕ ಜಾನಪದ ಪರಿಷತ್ ಕಳಸ ತಾಲೂಕು, ಇದರ ಸಹಭಾಗಿತ್ವದಲ್ಲಿ ಸಂಸೆ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಜಾನಪದ ಜಗುಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡೊಳ್ಳು ಕುಣಿತ ವೀರಗಾಸೆಯಂತಹ ಕಾರ್ಯಕ್ರಮಗಳು ಈಗ ಕಣ್ಮರೆಯಾಗುತ್ತಿದೆ ಇಂತಹ ಜಾನಪದ ಕಲೆಗಳನ್ನು ಉಳಿಸುವ ಕೆಲಸವನ್ನು ಈಗಿನ ವಿದ್ಯಾರ್ಥಿಗಳು ಅಗತ್ಯವಾಗಿ ಮಾಡಬೇಕು ಎಂದು ಚಿಂತನಗೌಡ ಅಭಿಪ್ರಾಯ ಪಟ್ಟರು.
ಪ್ರಧಾನ ಉಪನ್ಯಾಸನ ನೀಡಿದ ಉದಯ್ ಕೆ ಅವರು ಎಚ್ಎಲ್ ನಾಗೇಗೌಡರ ಬದುಕು ಬರಹ ವಿಚಾರ ಸಂಕಿರಣವನ್ನು ಮಂಡಿಸಿದರು ಹೆಚ್ ಎಲ್ ನಾಗೇಗೌಡರು ತಮ್ಮ ವೃತ್ತಿ ಜೀವನ ಹಾಗೂ ನಿವೃತ್ತಿ ಜೀವನದವರೆಗೆ ಜಾನಪದಕ್ಕೆ ಮೀಸಲಿತ್ತಿದ್ದರು ಈ ದಿಸೆಯಲ್ಲಿ ವಿದ್ಯಾರ್ಥಿಗಳು ಜಾನಪದವನ್ನು ಉಳಿಸಿ ಬೆಳೆಸಬೇಕಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯ ಶಿಕ್ಷಕರಾದ ಛಲವಾದಿ, ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿದ್ದೇಸ್ ಗೌಡ, ಕರ್ನಾಟಕ ಜನಪದ ಪರಿಷತ್ ಅಧ್ಯಕ್ಷರಾದ ರಜಿತ್ ಕೆಳಗೂರು, ಜಾನಪದ ಜಗಲಿ ಕಾರ್ಯಕ್ರಮದ ಅಧ್ಯಕ್ಷರಾದ ಚಿಂತನಗೌಡ, ಉದಯ್ ಕೆ, ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಭಾಸ್ಕರ್ ಡೊಂಗ್ರೆ, ಗಣೇಶ್ ಕುಕ್ಕೋಡು, ಪೂರ್ಣಿಮಾ ಪ್ರಮೋದ್, ಆಶಾ ರಾಘವೇಂದ್ರ, ನಿಖಿತಾ ಸಂತೋಷ್, ನಗೀನಾ ಖಾದರ್, ಪ್ರಿಯಾ ಗುರುಪ್ರಸಾದ್ ಇದ್ದರು.