ಕಳಸ ವೈವ್ ವರದಿ
ಜನವರಿ 26 ರ ಗಣರಾಜ್ಯೋತ್ಸಕ್ಕೆ ಜೆಸಿಐ ಕಳಸ ವತಿಯಿಂದ ಕಳಸ ತಾಲ್ಲೂಕಿನ ಸಾರ್ವಜನಿಕರಿಗೆ ಆನ್ಲೈನ್ ಮುಖಾಂತರ ದೇಶಭಕ್ತಿಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧೆಯು ಎರೆಡು ವಿಭಾಗಗಳಲ್ಲಿ ನಡೆಯಲಿದ್ದು, 10 ರಿಂದ 18 ವರೆಗಿನ ವಯಸ್ಸಿನವರು ಒಂದು ವಿಭಾಗ 18 ರ ವಯಸ್ಸು ಮೇಲ್ಪಟ್ಟವರು ಇಂದು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.
ಪ್ರತಿ ವಿಭಾಗವು ಪ್ರಥಮ ಹಾಗೂ ದ್ವೀತಿಯ ಸ್ಥಾನವನ್ನು ಒಳಗೊಂಡಿರುತ್ತದೆ.ವಯಸ್ಸಿನ ದಾಖಲಾತಿಗೆ ಆಧಾರ್ ಕಾರ್ಡ್ ಕಡ್ಡಾಯ, ವೀಡಿಯೋ 3 ನಿಮಿಷಗಳ ಮಿತಿಯಲ್ಲಿರಬೇಕು.ನಿಮ್ಮ ವೀಡಿಯೋ ದಿನಾಂಕ ಜನವರಿ 26ರ ರಾತ್ರಿ 9 ಗಂಟೆಯ ಒಳಗಾಗಿ ನಮ್ಮ ವಾಟ್ಸಾಫ್ ಸಂಖ್ಯೆಗೆ ಕಳುಹಿಸಿರಬೇಕು. ವಿಜಯಶಾಲಿಗಳಿಗೆ ಜನವರಿ 28 ರಂದು ನಡೆಯುವ ಜೇಸಿಐ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ದಂದು ಸೂಕ್ತ ಬಹುಮಾನವನ್ನು ನೀಡಿ ಗೌರವಿಸಲಾಗುವುದು..
ವಿಡಿಯೋ ಕಳುಹಿಸಬೇಕಾದ ನಂ 9483711316, 9480363932
