
ಕಳಸ ಲೈವ್ ವರದಿ
ಸೇವಾ ಇಂಟರ್ ನ್ಯಾಷನಲ್ ಯುಎಸ್ಎ ವತಿಯಿಂದ ಕಳಸ ತಾಲ್ಲೂಕಿನ ವಿವಿಧ ಶಾಲಾ ಕಾಲೇಜುಗಳಿಗೆ ಶೌಚಾಲಯವನ್ನು ನಿರ್ಮಿಸಿದ್ದು, ಹೊರನಾಡು ಸರ್ಕಾರಿ ಪ್ರೌಢ ಶಾಲೆಗೆ ಕೊಡುಗೆಯಾಗಿ ನೀಡಿದ್ದ ಶೌಚಾಲಯವನ್ನು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಾದ ಟ್ರಸ್ಟಿ ರಾಜಲಕ್ಷ್ಮೀ ಭೀ ಜೋಷಿ ಉದ್ಘಾಟಿಸಿದರು.
ಹೊರನಾಡು ಶಾಲೆಗೆ 4, ಸಂಸೆ ಶಾಲೆಗೆ 4, ಕಳಸ ಜ್ಯೂನಿಯರ್ ಕಾಲೇಜಿಗೆ 4, ಪ್ರಥಮ ದರ್ಜೆ ಕಾಲೇಜಿಗೆ 4 ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕವಾಗಿ ಶೌಚಾಲಯನ್ನು ಸೇವಾ ಇಂಟರ್ನ್ಯಾಷನಲ್ ಯುಎಸ್ಎ ವತಿಯಿಂದ ನಿರ್ಮಿಸಿಲಾಗಿದೆ.
ಸೇವಾ ಇಂಟರ್ನ್ಯಾಷನಲ್ ಯುಎಸ್ಎ ಯ ಶೇಷಾದ್ರಿ ಮಾತನಾಡಿ ಈಗಾಗಲೇ ಕಳಸ ತಾಲೂಕಿನ ಅಗತ್ಯ ಇರುವ ಕೆಲ ಶಾಲೆಗಳಿಗೆ ಒಟ್ಟು 16 ಶೌಚಾಲಯವನ್ನು ನಿರ್ಮಿಸಲಾಗಿದೆ.ಹೊರನಾಡು ಶಾಲೆಗೆ ದ್ವಜಸ್ಥಂಭ ಹಾಗೂ ಯೋಗ ಮ್ಯಾಟ್ ನೀಡಲಾಗಿದ್ದು, ಸಂಸ್ಥೆಯ ವತಿಯಿಂದಲೇ ಮಕ್ಕಳಿಗೆ 15 ದಿನಗಳ ಕಾಲ ಯೋಗ ತರಬೇತಿ ನೀಡಲಾಗುತ್ತದೆ.ಅಲ್ಲದೆ ಆಸಕ್ತರಿಗೆ ಟೈಲರಿಂಗ್ ತರಬೇತಿಯನ್ನು ನೀಡಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ನೀಡಲಾಯಿತು.
ಕರೋನ ಸಂದರ್ಭದಲ್ಲೂ ಕಳಸ ತಾಲೂಕಿಗೆ ಇದೇ ಸಂಸ್ಥೆಯ ವತಿಯಿಂದ ಆಹಾರದ ಕಿಟ್, ಔಷಧಿಗಳನ್ನು ನೀಡಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ರಾಧಿಕಾ, ಜಯಂತ್ ಭಟ್, ಕಳಸ ಮಹಿಳಾ ಮಂಡಳಿ ಅಧ್ಯಕ್ಷೆ ಸುಜಯ ಸದಾನಂದ, ಬಾಲಕೃಷ್ಣ ಪ್ರಭು, ಇಂದಿರಾ ಪ್ರಭು ಹಾಗೂ ಶಾಲೆಯ ಶಿಕ್ಷಕರು ಇದ್ದರು.