ಕಳಸ ಲೈವ್ ವರದಿ
ಮೆಸ್ಕಾಂ ಇಲಾಖೆಯಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಅಹಮ್ಮದ್ ಖಾನ್ ಅವರನ್ನು ಕಳಸ ಜೆಸಿಐ ಸಂಸ್ಥೆಯಿಂದ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿಯಲ್ಲಿ ಗುರುತಿಸಿ ಗೌರವಿಸಲಾಯಿತು.
ಕಳಸ ತಾಲ್ಲೂಕಿನ ಸಂಸೆ ಭಾಗದಲ್ಲಿ 23 ವರ್ಷಗಳ ಕಾಲ ಲೈನ್ ಮ್ಯಾನ್ ಆಗಿ ಕಾರ್ಯವಿರ್ವಹಿಸಿ, ಕಳಸ ಮೆಸ್ಕಾಂ ನಲ್ಲಿ 15 ವರ್ಷಗಳ ಕಾಲ ಸೂಪರ್ ವೈಸರ್ ಆಗಿ ಕರ್ತವ್ಯ ನಿರ್ವಹಿಸಿ ಅಹಮದ್ ಖಾನ್ ನಿವೃತ್ತಿ ಹೊಂದಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕಳಸ ಜೆಸಿಐ ಘಟಕದ ಅಧ್ಯಕ್ಷ ಶ್ರೀಕಾಂತ್ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಮೂಲಭೂತ ಸೌಲಭ್ಯ ಇಲ್ಲದೆ ಇರುವ ಸಂದರ್ಭದಲ್ಲಿ ಚಳಿ, ಗಾಳಿ, ಮಳೆ ಎನ್ನದೆ ಮೆಸ್ಕಾಂ ಇಲಾಖೆಯಲ್ಲಿ ಲೈನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸಿ, ಎಳೆ ಮರೆಯ ಕಾಯಿಯಂತೆ ಸಾರ್ವಜನಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ.ಇವರನ್ನು ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿಯಲ್ಲಿ ಗುರುತಿಸಿ ಅವರಿಗೆ ಗೌರವವನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಳಸ ಜೆಸಿಐ ಪೂರ್ವಾಧ್ಯಕ್ಷರುಗಳಾದ ಮಹೇಶ್.ಕೆಸಿ, ಪ್ರಶಾಂತ್ ಹೆಚ್ ಆರ್, ಖಜಾಂಚಿ ಮುರುಳಿಧರ, ನಿರ್ದೇಶಕರುಗಳಾದ ಮುಧು ಗೌಡ, ಶಿವಪ್ರಸಾದ್, ಸದಸ್ಯ ನಜೀರ್ ಇದ್ದರು.