ಕಳಸ ಲೈವ್ ವರದಿ
ಕೇವಲ ಜಿಪಂ, ತಾಪಂ ಚುನಾವಣೆಯಲ್ಲಿ ಮುನ್ನಡೆ ಸಾಧಿಸುವ ಉದ್ದೇಶವಿಟ್ಟು ಹೋಗುವುದರ ಬದಲು ನಾವು ಒಟ್ಟಾಗಿ ಹೋರಾಟ ಮಾಡಲು ಸಿದ್ದರಿದ್ದೇವೆ, ಪ್ರತಿಭಟನೆಯನ್ನು ಕೈಬಿಡಲಿ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ರಾಜೇಂದ್ರ ಹಿತ್ಲುಮಕ್ಕಿ ತಿಳಿಸಿದ್ದಾರೆ
ಈ ಬಗ್ಗೆ ಕಳಸ ಲೈವ್ ಜೊತೆ ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ಆದಂತಹ ಲಾಭವನ್ನು ಮುಂಬರುವ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿಯೂ ಪಡೆಯಲು ವಿರೋಧ ಪಕ್ಷದವರು ಈಗ ಶಬ್ದ ಮಾಡಲು ಪ್ರಾರಂಭಿಸಿದ್ದಾರೆ, ಆಡಳಿತ ಎಲ್ಲಿಯೂ ವೈಫಲ್ಯ ಆಗಿಲ್ಲ. ಹಿಂದಿನ ಸರ್ಕಾರ ತಾಲೂಕಿನ ಬಗ್ಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ನಮ್ಮ ಸರ್ಕಾರ ಬಂದು 13 ತಿಂಗಳು ಆಗಿದೆ, ಸರ್ಕಾರ ರಚನೆಗೆ 03 ತಿಂಗಳು, ಚುನಾವಣೆಗೆ 03 ತಿಂಗಳು ಹೋಗಿದೆ, ಉಳಿದ 06 ತಿಂಗಳು ಕೆಲಸ ಮಾಡಲು ಅವಕಾಶ ಸಿಕ್ಕಿದೆ, ಈಗ ನಾವು ಕಛೇರಿಗಳನ್ನು ತಾಲೂಕಿಗೆ ತರುವ ವಿಚಾರದಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಮುಂದಿನ ವಾರ ತಾಲೂಕು ಪಂಚಾಯ್ತಿ ಪ್ರಾರಂಭ ಆಗುತ್ತದೆ. ಸಬ್-ಟ್ರೆಜರಿ ತರಲು ಪ್ರಯತ್ನ ನಡೆದಿದೆ.
ಕಳಸ ತಾಲ್ಲೂಕಿಗೆ ಪೂರ್ಣ ಪ್ರಮಾಣದ ಸ್ಥಾನಮಾನ ಕೊಡಲು ನಾವು ಬಧ್ಧರಿದ್ದೇವೆ, ಚುನಾವಣೆ ನಂತರದ 6 ತಿಂಗಳಲ್ಲಿ ಶೇ 50 ಕ್ಕೂ ಹೆಚ್ಚು ಕಛೇರಿಗಳನ್ನು ತರುತ್ತೇವೆ ಎಂದು ಶಾಸಕರು, ಮಂತ್ರಿಗಳು ಭರವಸೆ ಕೊಟ್ಟಿದ್ದರು. ಅದೇ ಪ್ರಕಾರ ತಾಲ್ಲೂಕು ಪಂಚಾಯ್ತಿ ಪ್ರಾರಂಭವಾಗುತ್ತಿದೆ, ಶೀಘ್ರದಲ್ಲಿಯೇ ಕೃಷಿ ಸಹಾಯಕ ನಿರ್ದೇಶಕರು ಬರುತ್ತಾರೆ, ಅಗ್ನಿಶಾಮಕ ಠಾಣೆಗೆ ಸ್ಥಳ ಮಂಜೂರಾತಿ ಕೇಳಿದ್ದಾರೆ, ಸಮೂದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆ ಮಾಡುವ ಪ್ರಯತ್ನ ನಡೆಯುತ್ತಿದೆ, ಸಧ್ಯದಲ್ಲಿಯೇ ಡಯಾಲಿಸಿಸ್ ಕೇಂದ್ರ ಪ್ರಾರಂಭವಾಗುತ್ತದೆ.
ಕಾಂಗ್ರೆಸ್ ಪಕ್ಷದವರು ಹೇಳಿದಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದರೆ ಬೇರೆ ಪಕ್ಷಗಳು ನಿಷ್ಕ್ರೀಯವಾಗಿವೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಕ್ರೀಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದರ್ಥ.
ಹಿಂದಿನ ಸರ್ಕಾರದ ಅವಧಿಯಲ್ಲಿ ಅರ್ಹ ಬಡವರಿಗೆ, ರೈತರಿಗೆ ಭೂ-ಮಂಜೂರಾತಿ ಅವಕಾಶವಿದ್ದಾಗಿಯೂ ಸಹಾ ಅಧಿಕಾರಿಗಳು ತಪ್ಪು ಕ್ರಮದಲ್ಲಿ ಭ್ರಷ್ಟಾಚಾರದಿಂದ ಕಳ್ಳ ಸಾಗುವಳಿ ಚೀಟಿ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಈಗ ಸುಮಾರು 20 ಜನ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸು ಆಗಿದೆ. ಆ ಕಾರಣದಿಂದ ಇಲ್ಲಿಗೆ ಯಾರೇ ಅಧಿಕಾರಿಗಳು ಬಂದರೂ ಹೆಚ್ಚಿನ ದಿನ ಕಳಸದಲ್ಲಿ ಇರುತ್ತಿಲ್ಲ. ಇದು ಭಷ್ಟ ಆಡಳಿತದ ವೈಫಲ್ಯವೇ ಹೊರತು ನಮ್ಮ ಸರ್ಕಾರದ ವೈಫಲ್ಯವಲ್ಲ.
ಕಾಂಗ್ರೆಸ್ ಪರ ಪೊಲೀಸ್ ಸ್ಟೇಷನ್ ಕೆಲಸ ಮಾಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ಪರ ಕೆಲಸ ಮಾಡಿದ ಒಬ್ಬ ನಟನ ವಿರುದ್ದ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ, ಅಧಿಕಾರಿಗಳು ನ್ಯಾಯದ ಪರ ಕೆಲಸ ಮಾಡುತ್ತಿದ್ದಾರೆ, ಬೇರೆ ಪಕ್ಷದವರು ತಪ್ಪು ಕೆಲಸ ಮಾಡಿ, ಸ್ಟೇಷನ್ ಗೆ ಹೋಗಿ, ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿರಬಹುದು ಎಂದು ಪ್ರತಿಕ್ರೀಯಿಸಿದರು.
500 ಕ್ಕೂ ಹೆಚ್ಚು ಬೋಗಸ್ ಸಾಗುವಳಿ ಚೀಟಿ ಹಿಂದಿನ ಸರ್ಕಾರದ ಅವಧಿಯಲ್ಲಿ ವಿತರಣೆ ಆಗಿದೆ. ನಮ್ಮ ಭಾಗದಲ್ಲಿಯೇ ಹಲವರಿಗೆ ಲಕ್ಷಗಟ್ಟಲೇ ಟೋಪಿ ಆಗಿದೆ, ಅಂತಹ ಮಂಜೂರಾತಿಯಲ್ಲಿ ಲೋಪ ಆದವರಿಗೆ ಪುನ: ಮಂಜೂರಾತಿ ಮಾಡುವಲ್ಲಿ ಕಾಂಗ್ರೆಸ್ ಪಕ್ಷ ಪ್ರಥಮ ಆದ್ಯತೆ ನೀಡುತ್ತದೆ ಎಂದು ಹೇಳಿದರು.