
ಕಳಸ ಲೈವ್ ವರದಿ
ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರ ಪ್ರದರ್ಶನದಲ್ಲಿ ಪ್ರದರ್ಶನಗೊಂಡ ವದನ ಚಲನಚಿತ್ರವನ್ನು ಕಳಸ ದುರ್ಗಾಪೂಜಾ ಮಹೋತ್ಸವದಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು.
ಒಬ್ಬ ವ್ಯಕ್ತಿ ಸಂದರ್ಭಕ್ಕೆ ತಕ್ಕಂತೆ ಹೇಗೆ ಬದಲಾಗುತ್ತಾನೆ. ಸಾತ್ವಿಕಥೆಯನ್ನು ಬಿಟ್ಟು ರಜೋ ಮತ್ತು ತಮೋ ಗುಣಗಳನ್ನು ಒಪ್ಪಿಗೊಂಡಾಗ ಹೇಗೆ ಅವನ ಮನಸ್ಸು ಕ್ರೂರವಾಗುತ್ತದೆ ಅನ್ನುವುದನ್ನು ಎಳೆ ಎಳೆಯಾಗಿ ಬಿಡಿಸಿ ಈ ಚಿತ್ರದಲ್ಲಿ ತಿಳಿಸಲಾಗಿದೆ. ದೇವರು ಎಲ್ಲರನ್ನು ಒಪ್ಪುತ್ತಾನೆ, ಎಲ್ಲವನ್ನು ಒಪ್ಪುತ್ತಾನೆ. ದೇವರಿಗೆ ಜಾತಿ, ಮತ, ಭೇದವಿಲ್ಲ. ಶ್ರದ್ಧಾ ತನ್ಮಯತೇ ಮತ್ತು ಭಾವವನ್ನು ಮಾತ್ರ ದೇವರು ಒಪ್ಪಿಕೊಳ್ಳುತ್ತಾನೆ ಎಂಬ ಅಂಶವನ್ನು ಈ ಚಿತ್ರ ಅಧುತವಾಗಿ ಪ್ರಸ್ತುತಪಡಿಸಿದೆ.
ಈ ಚಿತ್ರದಲ್ಲಿ ಪ್ರಧಾನ ಭೂಮಿಕೆಯಲ್ಲಿ ನಟನೆಯನ್ನು ಮಾಡಿದ ಹೊರನಾಡಿನ ರಾಜಗೋಪಾಲ ಜೋಷಿಯವರ ನಟನೆ ಚಿತ್ರ ಪೇಕ್ಷಕರ ಮನ ಗೆದ್ದಿದೆ.
ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಪ್ರೀತಮ್ ಶೆಟ್ಟಿ, ನಟಿ ಹಾಗೂ ನಿರ್ದೇಶಕಿ ಸಿಂಚನ ಪ್ರೀತಂ ಶೆಟ್ಟಿ, ನಟ ಶರಣ್ ಶೆಟ್ಟಿ, ಛಾಯಗ್ರಾಹಕ ಪ್ರಶಾಂತ್ ಅವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಎನ್.ಪಿ.ಭರತರಾಜ್, ಪ್ರಧಾನ ಕಾರ್ಯದರ್ಶಿ ಎನ್.ನಿರ್ಮಲ್ ಕುಮಾರ್, ರುದ್ರಯ್ಯ ಆಚಾರ್, ಕೆ.ಎಸ್.ರಾಜೇಶ್, ಸುದರ್ಶನ್, ಸತೀಶ್ ಶೆಟ್ಟಿ, ಮಂಜುನಾಥ, ಸತೀಶ್ ಕಲ್ಲಾನೆ, ಉಮೇಶ್, ಅಶೋಕ್, ಆದರ್ಶ ಕೋಟ್ಯಾನ್, ಸಂತೋಷ್ ಜೈನ್, ದಿನೇಶ್, ಭಾಸ್ಕರ್, ಗಿರೀಶ್, ನಾಗರಾಜ ಇತರರು ಇದ್ದರು.


