ಕಳಸ ಲೈವ್ ವರದಿ
ಕಳಸ:ಇಲ್ಲಿನ ಕಳಸ ಯುವಕ ಸಂಘದ ಪುನರ್ ರಚನೆ ನಡೆದಿದ್ದು ಅಧ್ಯಕ್ಷರಾಗಿ ಯೋಗೀಶ್ ಭಟ್ ಆಯ್ಕೆ ಆಗಿದ್ದಾರೆ.
ಕಾರ್ಯದರ್ಶಿಯಾಗಿ ವೀರೇಂದ್ರ, ಖಜಾಂಚಿಯಾಗಿ ಸತ್ಯೇಂದ್ರ, ನಿರ್ದೇಶಕರಾಗಿ ಪಿ.ಎಸ್.ಥಾಮಸ್, ಕೆ.ವಾಸುದೇವ, ರಾಘವೇಂದ್ರ ಶೆಣೈ, ದಿನೇಶ್, ಪ್ರಭಾಕರ್, ಸದಾನಂದ, ಅಜಿತ್ ಪ್ರಸಾದ್, ಧರಣೇಂದ್ರ,ಕೃಷ್ಣಮೂರ್ತಿ, ಪಿ.ಎಸ್.ದೇವಸ್, ಸನ್ನಿ ಫ್ರಾನ್ಸಿಸ್, ಲಕ್ಷ್ಮೀಶ ಕಾಮತ್, ರವೀಂದ್ರ ಶೆಟ್ಟಿ ಕಾರ್ಯನಿರ್ವಹಿಸಲಿದ್ದಾರೆ. ಮೆಲ್ವಿನ್, ಮೋಹನ್, ಚಂದ್ರಶೇಖರ್, ನಾರಾಯಣ, ಅನಿಲ್ ಕುಮಾರ್, ಗಿರಿ, ಕಲೀಂ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ.
ನವೆಂಬರ್ ತಿಂಗಳಲ್ಲಿ ಆರೋಗ್ಯ ಶಿಬಿರ ನಡೆಸುವ ಮೂಲಕ ಸಂಘ ತನ್ನ ಸಾಮಾಜಿಕ ಚಟುವಟಿಕೆ ಆರಂಭಿಸಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. ಜನವರಿಯಲ್ಲಿ ಸಂಘದ ಸ್ಥಾಪಕಾಧ್ಯಕ್ಷ ದಿ.ಎನ್.ಎಂ. ಹರ್ಷ ಸ್ಮಾರಕ ಕ್ರಿಕೆಟ್ ಪಂದ್ಯಾವಳಿ ನಡೆಸಲಾಗುತ್ತದೆ.