ಹೊರನಾಡಿನ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮರ ಬಿದ್ದು ಯುವತಿ ಮೃತ ಪಟ್ಟ ಘಟನೆ ಭಾನುವಾರ ನಡೆದಿದೆ.
ಮೃತ ಪಟ್ಟ ಯುವತಿ ಹರಪನಹಳ್ಳಿಯ ಪ್ರಿಯಾಂಕ(20) ಎಂದು ಗುರುತಿಸಲಾಗಿದೆ.

ಹೊರನಾಡಿನ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಬೃಹತ್ ಗಾತ್ರದ ಮರವೊಂದು ಯುವತಿಯ ಮೇಲೆ ಬಿದ್ದಿದೆ.ಮರ ಯುವತಿಯ ಕಾಲಿಗೆ ಬಿತ್ತಾದರೂ ಮರ ಬಿದ್ದ ರಭಸಕ್ಕೆ ಯುವತಿಯ ತಲೆ ಪಕ್ಕದಲ್ಲಿಯೇ ಇದ್ದ ಕಲ್ಲಿಗೆ ಹೊಡೆದಿದೆ ಎನ್ನಲಾಗಿದೆ.ಇದರಿಂದ ಯುವತಿಯು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾಳೆ.
ಸ್ಥಳಕ್ಕೆ ಕಳಸ ತಹಶೀಲ್ದಾರ್ ನಂದಕುಮಾರ್,ಪಿಎಸ್ಐ ಹರ್ಷವರ್ಧನ್,ಎಎಸ್ಐ ಮೋಹನ್ ಕುಮಾರ್ ಬೇಟಿ ನೀಡಿದ್ದಾರೆ.
ಪ್ರಕರಣ ಕಳಸ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

