ಕಳಸ ಲೈವ್ ವರದಿ
ಕಳೆದ ಕೆಲವು ದಿನಗಳಿಂದ ಕಳಸ ತಾಲೂಕಿನ ವಿವಿಧ ಪ್ರಮುಖ ಸರ್ಕಾರಿ ಇಲಾಖೆಗಳ ಹಿರಿಯ ಅಧಿಕಾರಿಗಳು ಸರಣಿಯಾಗಿ ವರ್ಗಾವಣೆಗೊಂಡಿದ್ದು, ಆಡಳಿತ ಯಂತ್ರದಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸಿವೆ.
ತಾಲೂಕು ಕಚೇರಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ರಾಜಸ್ವ ನಿರೀಕ್ಷಕ (ಆರ್ಐ) ಲಕ್ಷ್ಮಣ್ ಹಾಗೂ ಗ್ರಾಮ ಆಡಳಿತಾಧಿಕಾರಿ (ವಿಎ) ಪ್ರಸನ್ನ ಅವರು ವರ್ಗಾವಣೆಗೊಂಡಿದ್ದಾರೆ. ಇದರೊಂದಿಗೆ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಳಸ ವಲಯ ಅರಣ್ಯಾಧಿಕಾರಿ ನಿಶ್ಚಿತ್ ಹಾಗೂ ಕುದುರೆಮುಖ ವಲಯ ಅರಣ್ಯಾಧಿಕಾರಿ ಚೇತನ್ ಅವರೂ ಸಹ ವರ್ಗಾವಣೆಯಾದ ಪ್ರಮುಖ ಅಧಿಕಾರಿಗಳ ಪಟ್ಟಿಯಲ್ಲಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಗತಿಗೆ ಶ್ರಮಿಸಿದ್ದ ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ ಅವರನ್ನೂ ಸಹ ವರ್ಗಾವಣೆ ಮಾಡಲಾಗಿದೆ.
ಕಳಸ ಪೊಲೀಸ್ ಠಾಣೆಯಿಂದ ಮಂಜುನಾಥ್ ಮತ್ತು ರಾಮಚಂದ್ರ(ಹೆಡ್ ಕಾನ್ಸೆ÷್ಟÃಬಲ್),ಮಾಲತೇಶ ಮತ್ತು ಗಿರೀಶ(ಕಾನ್ಸೆ÷್ಟÃಬಲ್). ಕುದುರೆಮುಖ ಪೊಲೀಸ್ ಠಾಣೆಯಿಂದ ಪ್ರಸನ್ನ ಮತ್ತು ಸುರೇಶ್ ಭಟ್(ಹೆಡ್ ಕಾನ್ಸೆ÷್ಟÃಬಲ್) ಇವರನ್ನು ವರ್ಗಾವಣೆ ಮಾಡಲಾಗಿದೆ.
ಸದ್ಯದ ಮಟ್ಟಿಗೆ ಖಾಲಿ ಇರುವ ಹುದ್ದೆಗಳ ಪೈಕಿ ರಾಜಸ್ವ ನಿರೀಕ್ಷಕರು (ಆರ್ಐ)ಜೆ. ಸಿ. ಕುಮಾರಸ್ವಾಮಿ, ಪ್ರಥಮ ದರ್ಜೆ ಸಹಾಯಕರು ಹೇಮಶೇಖರ್ ಎಸ್. ಕೆ. (ತಾಲೂಕು ಕಚೇರಿಗೆ ನಿಯೋಜನೆ) ಮಾಡಲಾಗಿದೆ.
ಕಳಸ ಹೊಸ ತಾಲೂಕಾಗಿರುವ ಈ ಸಂದರ್ಭದಲ್ಲಿ, ಪ್ರಮುಖ ಇಲಾಖೆಗಳ ಅಧಿಕಾರಿಗಳ ವರ್ಗಾವಣೆಯಿಂದ ಸಾರ್ವಜನಿಕ ಕೆಲಸ-ಕಾರ್ಯಗಳಿಗೆ ಯಾವುದೇ ವ್ಯತ್ಯಯ ಉಂಟಾಗದ0ತೆ ಉಳಿದ ಖಾಲಿ ಹುದ್ದೆಗಳಿಗೂ ಶೀಘ್ರವೇ ಪೂರ್ಣಪ್ರಮಾಣದ ಅಧಿಕಾರಿಗಳನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ನೇಮಕ ಮಾಡಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ
