ಕಳಸ ತಾಲ್ಲೂಕು ಧಾರ್ಮಿಕ, ಶೈಕ್ಷಣಿಕ, ರಾಜಕೀಯವಾಗಿ ಹೇಗೆ ಗುರುತಿಸಿಕೊಂಡಿದಿಯೋ ಹಾಗೆಯೇ ಸಾಂಸ್ಕ್ರತಿವಾಗಿಯೂ ಗುರುತಿಸಿಕೊಂಡಿದೆ.ಹಲವಾರು ಉದಯೋನ್ಮುಖ ಪ್ರತಿಭೆಗಳನ್ನು ನಮ್ಮ ಕಣ್ಮುಂದೆ ಕಾಣಬಹುದು.ಇಂತಹ ಪ್ರತಿಭೆಗಳಲ್ಲಿ ಒಬ್ಬರಾಗಿರುವ ಯುವ ನಟ, ಕರ್ನಾಟಕದ ನಾಡಿನಾಧ್ಯಂತ ನಗಿಸುವಂತ ಕಲಾವಿದ ಕಳಸ ತಾಲ್ಲೂಕಿನ ಕೆಳಮರಸಣಿಗೆ ಹುಲ್ಲಿನಕುಡಿಗೆಯ ಗಜೇಂದ್ರ.

ಹುಲ್ಲಿನಕುಡಿಗೆ ಯಶೋಧ ಕೃಷ್ಣಪ್ಪನವರ ಮೂರು ಮಕ್ಕಳಲ್ಲಿ ಗಜೇಂದ್ರ ಎರಡನೆಯವರು.ಪ್ರಾಥಮಿಕ ಶಿಕ್ಷಣವನ್ನು ಮರಸಣಿಗೆಯಲ್ಲಿ ಓದಿ ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಸಂಸೆ ಬಾಳ್ಗಲ್ ಆಶ್ರಮ ಶಾಲೆಯಲ್ಲಿ ಮುಗಿಸಿ,ಹೈಸ್ಕೂಲ್ ಪಿಯುಸಿಯನ್ನು ಕಳಸ ಜ್ಯೂನಿಯರ್ ಕಾಲೇಜಿನಲ್ಲಿ ಮುಗಿಸಿದ್ದರು.ಬಾಲ್ಯದಿಂದಲೇ ಕಲೆಯಲ್ಲಿ ಆಸಕ್ತಿ ಹೊಂದಿದ್ದ ಗಜೇಂದ್ರ ಸಂಗೀತ,ನೃತ್ಯ,ಛದ್ಮವೇಷ,ನಾಟಕ,ಏಕಾಭಿನಯಪಾತ್ರ,ಮಿಮಿಕ್ರಿ ಮುಂತಾದವುಗಳಲ್ಲಿ ಎತ್ತಿದ ಕೈ.ಅನೇಕ ಸಾಮಾಜಿಕ ಕಾರ್ಯಕ್ರಮಗಳ ನಿರೂಪಕರಾಗಿ ವೈವಿದ್ಯಮಯ ಕಾರ್ಯಕ್ರಮಗಳ ಸಂಯೋಜಕನಾಗಿ ತೊಡಗಿಸಿಕೊಂಡಿದ್ದರು.ಶಾಲಾ ಹಂತದಲ್ಲಿ ಸಾಕಷ್ಟು ಬಹುಮಾನಗಳನ್ನು ಪಡೆದಿದ್ದರು.

ಉತ್ತಮ ವ್ಯಾಸಾಂಗ ಮಾಡುವ ಆಸಕ್ತಿ ಇದ್ದಿದ್ದರೂ ಗ್ರಾಮೀಣ ಪ್ರದೇಶ ಅದರಲ್ಲೂ ಬಡಾ ಕುಟುಂಬದಲ್ಲಿ ಜನಿಸಿದ ಇವರು ಆರ್ಥಿಕ ಮುಗ್ಗಟ್ಟಿನಿಂದ ತನ್ನ ವ್ಯಾಸಂಗವನ್ನು ಮೊಟಕುಗೊಳಿಸಿದರೂ ಕೂಡ ಕಲೆಯ ನಂಟು ಆಸಕ್ತಿ ಇವರನ್ನು ಬಿಡಲಿಲ್ಲ.ನಿನಾಸಂಗೆ ಹೋಗಿ ಅಲ್ಲಿ ಡಿಪ್ಲೋಪವನ್ನು ಪಡೆದು ಅಭಿನಯದ ಕಡೆ ಮುಖ ಮಾಡಿದರು.

ನಂತರ ಬೆಂಗಳೂರು ಮುಖ ಮಾಡಿದ ಇವರು ಪ್ರೀತಿಯಿಂದ,ಅನುಭಂದ,ಪಾರ್ವತಿ ಪರಮೇಶ್ವರ,ಸರಿಗಮ ಪದನಿ,ಅಸಾಧ್ಯ ಅಳಿಯಂದಿರು,ಪರಿಣತ ಮುಂತಾದ ಧಾರವಾಹಿಗಳಲ್ಲಿ ಮತ್ತು ಕ್ರೇಜಿಲೋಕ,ಮನರೂಪ ಚಲನಚಿತ್ರಗಳಲ್ಲಿ ನಟನೆ ಮಾಡುವ ಅವಕಾಶವನ್ನು ಪಡೆದರು.

ನಂತರ ಬೆಂಗಳೂರಿನಲ್ಲಿ ನಡೆದ ಕಾಮಿಡಿ ಕಿಲಾಡಿಗಳು ಸೀಸನ್3ಯಲ್ಲಿ ಸ್ಥಾನ ಗಿಟ್ಟಿಸಿಕೊಂಡು ಪ್ರಥಮ ಪ್ರದರ್ಶನದಲ್ಲಿಯೇ ಐಸ್ ಕ್ರೀಂ ಮಾರುವ ಪಾತ್ರದಲ್ಲಿ ಕಾಣಿಸಿಕೊಂಡು ಅಭಿನಯಿಸಿದ ಗಜೇಂದ್ರ ತೀರ್ಪುಗಾರರ ಮೆಚ್ಚುಗೆಯನ್ನು ಪಡೆದು ಈಗ ಬಹು ಬೇಡಿಕೆಯ ನಟರಾಗಿದ್ದಾರೆ.

ಪ್ರಸ್ತುತ ಪುಟ್ಟಕ್ಕನ ಮಗಳು ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದು,ಪುಕ್ಸಟ್ಟೆ ಪೈಸೆ, ಆಟೋ ಡ್ರೈವರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇಂತಹ ಅಪರೂಪದ ನಮ್ಮೂರಿನ ಕಲಾವಿದ ಗಜೇಂದ್ರರವರ ಪ್ರತಿಭೆಯನ್ನು ಗುರುತಿಸಲು ಕಳಸ ಲೈವ್ ಹರ್ಷಿಸುತ್ತಿದೆ.

