ಕಳಸ ತಾಲ್ಲೂಕಿನಾಧ್ಯಂತ ಸುರಿಯುತ್ತಿದ್ದ ಭಾರಿ ಮಳೆಯ ಹಿನ್ನಲೆಯಲ್ಲಿ ಇಲ್ಲಿಯ ಸುರುಮನೆ ಜಲಪಾತ ಮತ್ತು ಕ್ಯಾತನಮಕ್ಕಿ ಗಾಳಿಗುಡ್ಡ ಪ್ರದೇಶಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ಅರಣ್ಯ ಇಲಾಖೆ ತೆರವು ಮಾಡಿದೆ.

ಮಳೆಯ ಕಾರಣದಿಂದ ಅಪಾಯ ಮತ್ತು ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇದ್ದುದರಿಂದ ಈ ಪ್ರದೇಶಗಳಿಗೆ ಕಳೆದ ಒಂದು ತಿಂಗಳಿನಿಂದ ನಿರ್ಬಂಧ ವಿಧಿಸಲಾಗಿತ್ತು.ಈಗ ಮಳೆಯ ತೀವೃತೆ ಕಡಿಮೆಯಾಗಿರುವ ಹಿನ್ನಲೆಯಲ್ಲಿ ತಾಲ್ಲೂಕಿನ ಪ್ರವಾಸಿ ತಾಣಗಳಾದ ಈ ಪ್ರದೇಶಗಳಿಗೆ ಷರತ್ತು ಬದ್ದ ಪ್ರವೇಶವನ್ನು ನೀಡಲಾಗಿದೆ.

ಪ್ರವಾಸಿಗರು ಎಚ್ಚರಿಕೆಯಿಂದ ಈ ಪ್ರದೇಶಗಳಿಗೆ ಬೇಟಿಕೊಡಬಹುದು,ಪ್ಲಾಸ್ಟಿಕ್ ಅಥವಾ ಯಾವುದೇ ಬಾಟಲು,ಕಸ ಎಸೆದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅರಣ್ಯ ಸಮಿತಿ ಕಾರ್ಯದರ್ಶಿ ನಾಗರಾಜ್ ತಿಳಿಸಿದ್ದಾರೆ.


